ಸಾವಿನ ಅಂಚಿನಲ್ಲಿ ಮಾತುಗಳು
ಸಾವು ಕಚಿತವಾಗಿದ್ದರು ಮಾತುಗಳು ಕೇಳುಗರಿಗೆ ಉಚಿತವಾದವು ಏಕೆಂದರೆ ಅವರು ಸಾಯುವುದು ನಿಶ್ಚಿತವಾಗಿತ್ತು. ಅವರಿಗೆ ಬಂದ ಕಾಯಿಲೆ ಒಂದೆರೆಡಲ್ಲ ಬಿ.ಪಿ, ಹೃದಯಘಾತ ಕಾಯಿಲೆ, ಲಿವರ್ ಕ್ಯಾನ್ಸರ್, ಕಿಡ್ನ ಪೇಲೂರ್ ಇತ್ಯಾದಿ ಹೀಗೆ ಅವರ ಕಾಯಿಲೆಯ ಪಟ್ಟಿ ಆಗುತ್ತದೆ ಹೇಳುತ್ತಾ ಹೋದರೆ. ವೃತ್ತಿಯಲ್ಲಿ ಕನ್ನಡ ಶಾಲೆಯ ಶಿಕ್ಷಕರಾಗಿ ನಿವೃತ್ತರಾಗಿದ್ದ 4 ವರ್ಷಗಳ ಬಲಿಕ ಇಂತಹ ಕಾಯಿಲೆಗಳಿಗೆ ತುತ್ತಾದರು. ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದಿದ್ದಾಗ ಡಾಕ್ಟರ್ ಅವರು ಉಳಿಯುವುದಿಲ್ಲವೆಂಬುದ ಮನಗಂಡು ಊರಿಗೆ ಕಳಿಸಿದ್ರು, ಊರಿಗೆ ಬಂದ ಶಿಕ್ಷಕರು ಊರಿನ ಜನರೆಲ್ಲರೂ ಮತ್ತು ಸಂಬಂಧಿಕರು ಶಿಕ್ಷಕರನ್ನು ನೋಡಲು ಗುಂಪು ಗುಂಪಾಗಿ ಬಂದು ಮಾತನಾಡಿಸಲು ಮಂದಾದರು ಶಿಕ್ಷರು ಎಲ್ಲರನ್ನು ಗುರುತಿಸಿ ಅವರ ಯೋಗ ಕ್ಷೇಮವನ್ನು ವಿಚಾರಿಸಿದರು ನೀವು ಚೆನ್ನಾಗಿರಿ ಎಂದು ಹಾರೈಸಿದರು. ನನ್ನ ಜೀವನ ಮುಗಿದ ಅಧ್ಯಾಯ ನಾನು ದೇವರ ಹತ್ತಿರ ಹೋಗುತ್ತೇನೆ ನಾನು ಇನ್ನು ಕೆಲವೆ ದಿನಗಳು ಮಾತ್ರ ಬದುಕಿರುವೆ ಎಂದು ನಗುನಗುತ್ತಾ ದೈರ್ಯವಾಗಿ ಶಿಕ್ಷರು ಮಾತನಾಡುತ್ತಿದ್ದರು.
ಶಿಕ್ಷಕರ ಅಣ್ಣತಮ್ಮಂದಿರು 8 ಮಂದಿ 1ಅಕ್ಕ 1ತಂಗಿ 3 ಗಂಡು ಮಕ್ಕಳು 1 ಹೆಣ್ಣು ಮಗಳು ಮತ್ತು ಸಂಬಂಧಿಕರನ್ನೆಲ್ಲರನ್ನು ಜೀವಂತವಿರುವಾಗಲೆ ಕರೆಸಿಕೊಂಡು ಅವರಿಗೆ ಹೇಳಬೇಕಾದ ಕಿವಿ ಮಾತುಗಳನ್ನು ಹೇಳಿದ್ದಾರೆ. ನೀವು ನಾನು ಸತ್ತ ಮೇಲೆ ನಿಮ್ಮ ನಿಮ್ಮ ಅಪ್ಪನ ತಾಯಿನ ಚೆನ್ನಾಗಿ ಜೋಪಾನ ಮಾಡಿರಿ ಮಕ್ಕಳನ್ನು ಚನ್ನಾಗಿ ಓದಿಸಿ ವಿಧ್ಯಾವಂತರನ್ನಾಗಿ ಮಾಡಿರಿ ಎಂದು ಹೇಳಿದರು. ಯಾರು ಯಾರಿಗು ಎಂದು ಅನ್ಯಾಯ ಮಾಡಬೇಡಿರಿ ಎಂದು ತಿಳಿಹೇಳಿದರು. ತಪ್ಪು ಮಾಡಿದವರಿಗೆ ನೀನು ಹೀಂಗೆ ತಪ್ಪು ಮಾಡಿದಿಯಾ ಅವರಿಗೆ ತಿಳಿಹೇಳಿ ಹೊಂದಿಕೊಂಡು ಹೋಗು ಮತ್ತು ಏನೇ ತಪ್ಪು ಮಾಡಿದರೂ ಕ್ಷಮಿಸಿ ಸರಿಯಾದ ಮಾರ್ಗದಲ್ಲಿ ಕೈ ಹಿಡಿದು ಮುನ್ನೆಡೆಸು ಎಂದು ಬೇಡಿಕೆಂದು ಶಿಕ್ಷರು ಅಂಗಲಾಚಿಕೊಂಡರು. ಶಿಕ್ಷರು ಜೀವಂತ ಇರುವಾಗ ಯಾರ ಹತ್ತಿರವು ಹೆಚ್ಚಾಗಿ ಮಾತನಾಡಿದವರಾಗಿರಲಿಲ್ಲ, ಆದರೆ ಸಾವುಯುವ ಮುನ್ನ ಅವರು ಮೌನವ ಮುರಿದು ಮಾತಿನ ನುಡಿ ಮುತ್ತುಗಳ ಸರಮಾಲೆಯನ್ನೆ ಹೆಣೆದರು. ಅವರು ಜೀವಂತವಿದ್ದಾಗ ಅವರಿಗೆ ಉಪಕಾರ ಮಾಡಿದವರನ್ನು ನೆನೆನೆನೆದು ಮನದಾಳದ ಮಾತುಗಳನ್ನು ವಿವರವಾಗಿ ಹೇಳಿದರು ಉಪಕಾರ ಮಾಡಿದ್ದವರಿಗೆ ನೆನಪು ಇರುತ್ತಿಲ್ಲ ಆದರೆ ಶಿಕ್ಷರು ಹೇಳುವ ಮಾತುಗಳನ್ನು ಕೇಳಿ ನೆನಪಿಸಿ ಕೊಂಡು ಕೆಲವರು ಕಣ್ಣಿರು ಸುರಿಸಿದರು. ಶಿಕ್ಷಕರು ಎಲ್ಲರಿಗೂ ಬೇಕಾಗಿದ್ದವರು ಯಾರಿಗೂ ಮೋಸ ಮಾಡಿದವರಲ್ಲ ಅವರ ಮನಸ್ಸು ಮಗುವಿನಂತದ್ದು, ಇಂದು ಅವರು ನಮ್ಮನ್ನು ಬಿಟ್ಟು ದೇವರ ಸನ್ನಿದಿಗೆ ಸೇರಿದ್ದಾರೆ. ಇಂದು ಅವರ ನೆನಪು ಮಾತ್ರ ಮತ್ತು ಅವರು ಸಾವಿನ ಅಂಚಿನಲ್ಲಿ ಮಾತನಾಡಿದ ಮಾತುಗಳು ಚಿರಶಾಶ್ವತವಾಗಿವೆ.
ಹೆಚ್.ವಿರುಪಾಕ್ಷಪ್ಪ ತಾವರಗೊಂದಿ