ಸಾವಿನ ನಂತರ...
ತುತ್ತು ಅನ್ನಕ್ಕಾಗಿ ಗುದ್ದಾಟವಿಲ್ಲ,
ಸಾವಿನ ನಂತರ
ನೆಮ್ಮದಿಯ ನಿದ್ದೆಗಾಗಿ ಒದ್ದಾಟವಿಲ್ಲ
ಸಾವಿನ ನಂತರ
ಸಾವಿಗಿಲ್ಲ ನೀ ಬಡವ ನಾ ಶ್ರೀಮಂತ
ಎನ್ನುವ ಅಂತರ
ಜಾತಿ.... ಮೀಸಲಾತಿಯು ಸುಳಿಯಲ್ಲ
ಸಾವಿನ ಹತ್ತಿರ.
ನಿನ್ನ ಮನೆಯಲ್ಲೇ ನಿನಗಿಲ್ಲ ಸ್ಥಾನ,
ಮುಗಿದ ನಂತರ ಅವಧಿ
ಬದುಕೊಂದು ನದಿ ; ಹರಿದು ಸೇರುವುದು,
ಸಾವೆಂಬ ಶರಧಿ
ಸುಳ್ಳು ಭ್ರಮೆಯಲಿ ಮೆರೆವೇ..
ಇನ್ನೆಷ್ಟು ಗರ್ವದಿ
ಆತ್ಮವನ್ನ ಬಂಧಿಸುವಷ್ಟು ಗಟ್ಟಿಯಲ್ಲ.
ಕಾಂಕ್ರೀಟಿನ ಸಮಾಧಿ
ಬದುಕೊಂದು ಮಿಥ್ಯ...
ಸತ್ಯ ಕಲಿಸುವುದು ಮರಣ..
ಸಾವು ಗೆಲ್ಲುತ್ತೇವೆ ಎಂದವರು...ಮಾಡಿದ್ದು
ಬರಿ ಕಾಲಹರಣ...
ಬದುಕು ಸಾವಿನ ನಡುವೆ ಸಾವೇ ಆಗಿರಲಿ
ನನ್ನ ಚಯನ..
ಬದುಕಿನಲಿ ನೂರು ನೋವಿದ್ದರು ಸರಿಯೇ..
ಸುಂದರವಾಗಿರಲಿ ಮರಣ..
-ನಂದನ ವೇಟೆ