ಸಾವಿನ ಹತ್ತಿರ

ಸಾವಿನ ಹತ್ತಿರ

ಬರಹ

ನಾನು ಸುಮಾರು ಏಳೆಂಟು ವRಷದವನಾಗಿರುವಾಗ ನಡೆದ ಘಟನೆಯಿದು. ನನಗಾಗ ಈಜುವುದೊಂದು ಮಹಾ ವಿದ್ಯೆಯಾಗಿ ಕಾಣಿಸುತ್ತಿತ್ತು.ಮನೆಯಲ್ಲಿ ಅದನ್ನ ಹೇಳಿಕೊಡುವುದು ದೂರವಿರಲಿ, ನೀರಿನ ಸಾಮಾನ್ಯ ಶ್ರೋತವಾದ ಕೆರೆ ಹೊಳೆ ಮತ್ತು ಬಾವಿಗಳು ಸಹಾ ಮಕ್ಕಳ ಮಟ್ಟಿಗೆ ಒಉಟ್ ಆೞ್ ಬೊಉಂಡ್ ಆಗಿರುತ್ತಿದ್ದ ಕಾಲವದು.ಆದರೂ ಮಕ್ಕಳು ನಾವೆಲ್ಲಾ ಅದನ್ನು ಕಲಿಯಲು ಮನೆಯವರಿಗೆ ಗೊತ್ತಿಲ್ಲದ ಹಾಗೆ ಕಲಿಯಲು ಶತ ಪ್ರಯತ್ನ ಮಾಡುತ್ತಿದ್ದೆವು. ಆದರೆ ನಮ್ಮ ಕೆಲಸದವರೆಲ್ಲಾ ಅದರ ಬಗ್ಗೆ ಹೇಳುತ್ತಿರುವಾಗ,ದನ ಕರುಗಳು ನಿರಾಯಾಸವಾಗಿ ನೀರಲ್ಲಿ ಈಜುವುದು ನೋಡುವಾಗ, ಅದೇನೂ ಮಹಾ ವಿದ್ಯೆಯಲ್ಲ, ಯಾರೂ ನಿರಾಯಾಸವಾಗಿ ಕಲಿಯಬಹುದು ಅನ್ನಿಸುತ್ತಿತ್ತು. ಕೆಲಸದವರಲ್ಲಿ ನನ್ನ ವಯಸ್ಸಿನ ಶೀನನ ಹತ್ತಿರ ನಾನು ಯಾವಾಗಲೂ ಈಜು ಕಲಿಸಿಕೊಡಲು ಗೋಗೆರೆಯುತ್ತಿದ್ದೆ.ನನ್ನ ಬಹು ಸಮಯದ ಒತ್ತಾಯದ ಬಳಿಕ ಒಂದು ರವಿವಾರ ಆತ ನನಗೆ ಕಲಿಸಿಕೊಡಲು ಒಪ್ಪಿದ.ರವಿವಾರವೇ ಯಾಕೆ ಆರಿಸಿದ್ದೆಂದರೆ, ಆ ದಿನ ನಾವು ಮಕ್ಕಳೆಲ್ಲಾ ೞ್ರೀಯಾಗಿರುತ್ತಿದ್ದೆವು, ಮತ್ತು ಪ್ರತೀ ರವಿವಾರ ಕೆಲಸದವರು ನಮ್ಮ ದನಕರುಗಳನ್ನೆಲ್ಲಾ ಕರೆದುಕೊಂಡು ಹೋಗಿ ಸುಮಾರು ಎರಡೂವರೆ ಮೈಲು ದೂರವಿರುವ ನದಿಯಲ್ಲಿ ಮೀಯಿಸಿಕೊಂಡು ಬರುವುದು ಆಗಿನ ಪರಿಪಾಠವಾಗಿತ್ತು. ಅಂತೆಯೇ ಒಂದು ರವಿವಾರ ಮನೆಯಲ್ಲಿ ಯಾರಿಗೂ ಹೇಳದೇ ಶೀನನ ಮತ್ತು ಅವನ ಅಣ್ಣನ ಜತೆ ದನಕರುಗಳನ್ನು ಹೊಡೆದುಕೊಂಡು ಹೊರಟೆವು.ಬೇಸಗೆಯ ಆರಂಭದ ದಿನಗಳವು,ನದಿಯಲ್ಲಿ ನೀರಿನ ಹರವು ಸ್ವಲ್ಪ ಕಡಿಮೆಯೇ ಇತ್ತು, ಆದರೂ ಕೆಲವೆಡೆ ಹೊಡಗುಂಡಿಗಳಿದ್ದು, ಒಟ್ಟಾರೆ ಈಜಲು ಒಂದು ಒಳ್ಳೆಯ ಜಾಗವಾಗಿತ್ತು.ಅಣ್ಣ ಪಿಣಿಯನನ್ನು ದನಕರುಗಳ ಜತೆ ಬಿಟ್ಟು ನಾವಿಬ್ಬರೂ ಬೇರೇಯೇ ಹೊರಟೆವು. ಶೀನ ಆರಿಸಿದ್ದ ಜಾಗದಲ್ಲಿ ನೀರು ಸಾಕಷ್ಟು ಆಳವಾಗಿಯೇ ಇತ್ತು.ಆತ ತಾನು ಮೊದಲು ನೀರಲ್ಲಿ ಧುಮುಕಿ ನಾನಾ ರೀತಿಯಲ್ಲಿ ಈಜಿ ತೋರಿಸಿದ, ಆತನ ಈ ಈಜಾಟ ನನ್ನನ್ನು ಎಷ್ಟು ಪ್ರಚೋದಿಸಿತ್ತೆಂದರೆ, ನಾನು ನೀರಲ್ಲಿಳಿದು ಒಮ್ಮೆ ಕೈ ಕಾಲು ಆಡಿಸಿದರೆ ಸಾಕು ಲೀಲಾಜಾಲವಾಗಿ ಈಜಬಹುದು ಅನ್ನಿಸಿತು.ನನಗೆ ಈಜು ಕಲಿಸಲು ಆತ ತನ್ನದೇ ವಿಧಾನ ಆರಿಸಿಕೊಂಡಿದ್ದ.ನನ್ನನ್ನು ತನ್ನ ಬೆನ್ನ ಮೇಲಿರಿಸಿಕೊಂಡು ಈಜುತ್ತಾ ಹೋಗಿ ಆಳದ ಮಡುವಿನ ನಟ್ಟ ನಡುವೆ ದುಡುಮ್ಮನೆ ಮುಳುಗಿ ನೀರ ಅಡಿಯಿಂದಲೇ ಬೇರೆ ಕಡೆ ಹೋದ.ಆಗಿನ ಸ್ಥಿತಿ ಯೋಚಿಸಿದರೆ ಈಗಲೂ ಮೈ ಜುಮ್ಮೆನ್ನಿಸುತ್ತದೆ,ಒಂದು ಕ್ಷಣ ಅಷ್ಟೆ, ನೀರಲ್ಲಿ ಬೀಳುವುದೇ ಈಜು ಅಂತ ತಿಳಿದ ನನ್ನ ಆಗಿನ ಪರಿಸ್ಥಿತಿ ಯಾರಿಗೂ ಬೇಡ , ಮೂಗು ಬಾಯಲ್ಲಿ ನೀರು ತುಂಬಿ ಶ್ವಾಸ ಆಡಲೂ ಆಗದೇ ಮುಳುಗುತ್ತ ಏಳುತ್ತಾ, ಒಳಕ್ಕೆಳೆದ ಶ್ವಾಸದೊಂದಿಗೆ ನೀರನ್ನೂ ಕುಡಿಯುತ್ತ…ಯಾಕಾದರೂ ನಾನು ಈ ಶೀನನ ಹತ್ತಿರ ಈಜು ಕಲಿಸಲು ಕೇಳಿಕೊಂಡೆನೋ,ಇದು ಮಾತ್ರ ಬೇಡವಿತ್ತು, ನನ್ನ ಗತಿ ಇನ್ನೇನು ಮುಗಿಯಿತು ಅಂದುಕೊಳ್ಳುವ ಅದೊಂದು ವಿಚಿತ್ರ ಪರಿಸ್ಥಿತಿಯಾಗಿತ್ತು ಸಾವು ಹತ್ತಿರ ಬಂದಾಗ ರಾಮ ರಾಮ ಅನ್ನಬೇಕೆಂದು ಯಾರೋ ಹೇಳಿದ್ದು ನೆನಪಿಗೆ ಬಂದು, ಅಂತಹಾ ಪರಿಸ್ಥಿತಿಯಲ್ಲೂ ಅನ್ನತೊಡಗಿದೆ. ಆ ದಿನ ಸರಿಯಾದ ಸಮಯದಲ್ಲಿ ಪಿಣಿಯ ಬಂದು ನನ್ನ ಉಳಿಸದೇ ಇದ್ದಿದ್ದರೆ… ನಿಮ್ಮೆದುರು ಈ ವಿಷಯವನ್ನು ಯಾರೋ ಬೇರೆಯೇ ರೀತಿಯಲ್ಲಿ ಹೇಳುತ್ತಿದ್ದರು