ಸಾವಿರ ಕನಸುಗಳ ನಗರ

ಸಾವಿರ ಕನಸುಗಳ ನಗರ

ಬರಹ

ಸಾವಿರ ಕನಸುಗಳ ನಗರ
ನೋಡಲು ಬಲು ಸುಂದರ
ಕಾಣುವಾಗಲೇ ಕುಸಿಯಿತು ನೂರಾರು ಕನಸುಗಳ ಗೋಪುರ
ಕಟ್ಟಿಹೋದರು ಎಲಬುಗಳ ಹಂದಿರ

ಮರುಗಟ್ಟಿವೆ ಬಿಸಿ ನೆತ್ತರನದಿಗಳು ಹರೆಯಲಾರದೆ
ಮರುಕಹುಟ್ಟಿದೆ ಮುಗ್ಧ ಹಸುಳೆಗಳ ಮೇಲೆ ದುಃಖ ತಡೆಯಲಾರದೆ
ತಣ್ಣಗಾಗಿವೆ ನರನಾಡಿಗಳು ಇಂದು
ಕೊನೆಯಿಲ್ಲವೆ ಇದಕ್ಕೆ ಎಂದೆಂದೂ

ಮಿತಿಯಿದೆ ಸಾಗರಕೆ ಮಿತಿಯಿಲ್ಲ ಸಹನೆಗೆ
ಎಂದು ಕೈಕಟ್ಟುವುದು ಬೇಡ ಕೊನೆಗೆ ಕಣ್ಣೀರಿಡುವುದು ಬೇಡ
ಮೊಳಗಲಿ ಯುದ್ಧದ ರಣ ಕಹಳೆ ಇಂದು
ಹರಸಲಿ ಹೊಸ ಸೂರ್ಯನು ಅನುದಿನದಂದು

ದುಷ್ಟರಾಜಕೀಯ ಶಕ್ತಿಯು ಕುಂದುಹೋಗಲಿ
ವೀರಯೋಧರ ಆತ್ಮ ಮತ್ತೆ ಜನ್ಮ ತಾಳಲಿ
ಧರ್ಮಯುಗದ ಪಾಂಚಜನ್ಯ ಮತ್ತೆ ಮೊಳಗಲಿ
47 ರ ಸ್ವಾತಂತ್ರ್ಯ ಮರಳಿ ಬರಲಿ

ಕೂಗುತಲಿದೆ ಅಂತರಾಳದ ಧ್ವನಿಯೊಂದು
ಹೋರಾಡು ರಕ್ಕಸರ ಜೊತೆ ಜಯ ನಿಂದೆಂದು
ಕೊನೆಗಾಣಲಿ ಉಗ್ರರ ಅಟ್ಟಹಾಸ್ಯದ ಮಾರಣಹೋಮ
ನಡೆಯಲಿ ವಿಶ್ವಶಾಂತಿಯ ಶಾಂತಿಹೋಮ