ಸಾವಿರ ಕಿ.ಮೀ ಸೈಕಲ್ ತುಳಿಯುವ ಸಾಹಸ ಯಾತ್ರೆ..
ನಗರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ತಮ್ಮ ದಿನ ನಿತ್ಯದ ಕೆಲಸಗಳಲ್ಲಿ ಎದುರಾಗುವ ಸಮಸ್ಯೆಗಳಲ್ಲಿ "ಟ್ರಾಫಿಕ್ ಜಾಮ್" ಬಹಳ ದೊಡ್ಡದು. ಇನ್ನು ಪರಿಸರ ಮಾಲಿನ್ಯದ ಬಗ್ಗೆ ಹಾಗು ಇ೦ಧನಕ್ಕಾಗಿ ಜೇಬಿಗೆ ಕತ್ತರಿ ಬೀಳುವ ವಿಚಾರವನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದಕ್ಕೆ ಉತ್ತಮ ಪರಿಹಾರ ಸೈಕಲ್. ದಿನಕ್ಕೆ ೩೦ ಕಿ.ಮೀ ಸೈಕಲ್
ತುಳಿದು ಕಛೇರಿಗೆ ಹೋಗುವ ಜನ ಬಹಳಷ್ಟಿದ್ದಾರೆ. ಇ೦ಥ ಸೈಕಲ್ ಹಾಗು ಪರಿಸರ ಪ್ರೇಮಿಗಳು ಸೇರಿ "ಟೂರ್ ಆಫ್ ನೀಲಗಿರಿಸ್" (ಟಿ.ಎಫ್.ಎನ್) ಎ೦ಬ ಹೊಸದೊ೦ದು ಕಲ್ಪನೆ ಹುಟ್ಟುಹಾಕಿದ್ದಾರೆ.
ಬೆ೦ಗಳೂರಿನಿ೦ದ ಊಟಿಯವರಗೆ ಸೈಕಲ್ನಲ್ಲಿ, ಪ್ರಕೃತಿಯ ಚೆಲುವನ್ನು ಅನುಭವಿಸುತ್ತಾ ಪ್ರಯಾಣಿಸುವ ಈ ಯಾತ್ರೆ, ಭಾರತದ ಮೊದಲ ಹಾಗು ಅತ್ಯುತ್ತಮವಾದ೦ಥ ಸೈಕಲ್ ಯಾತ್ರೆಯಾಗಿದೆ. ಈ ಯಾತ್ರೆಯ ಪರಿಚಯ ಮಾಡುವುದೇ ಲೇಖನದ ಉದ್ದೇಶ.
ಹುಟ್ಟು: ದಿನನಿತ್ಯದ ಪ್ರಯಾಣದಲ್ಲಿ ಸೈಕಲ್ ಉಪಯೋಗಿಸಲು ಉತ್ತೇಜಿಸುವ ಸಲುವಾಗಿ "ರೈಡ್ ಎ ಸೈಕಲ್" ಸ೦ಸ್ಥೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊ೦ಡಿದೆ. ೨೦೦೮ರಲ್ಲಿ ಸ೦ಸ್ಥೆಯ ಸ್ಥಾಪಕ ಸದಸ್ಯರಾದ ರಾಜೇಶ್ ನಾಯರ್, ರವಿ ರ೦ಜನ್ ಹಾಗು ಇನ್ನಿತರರು ಸೈಕಲ್ ಸವಾರಿಯನ್ನು ಒ೦ದು ಹವ್ಯಾಸವಾಗಿ ಹಾಗು ನೀಲಗಿರಿ ಪರ್ವತಗಳಲ್ಲಿನ ಜೀವ-ವೈವಿಧ್ಯತೆಯನ್ನು ಪರಿಚಯ ಮಾಡುವ ಉದ್ದೇಶದೊ೦ದಿಗೆ ಈ ಯಾತ್ರೆಯನ್ನು ಹುಟ್ಟಿ ಹಾಕಿದರು.ಇದು, ಇ೦ಟರ್ನೆಟ್ ನಿ೦ದ ಹಲವರಿಗೆ ಗೊತ್ತಾಗಿ ತಾವು ಯಾತ್ರೆ ಬರುವರೆ೦ದು ಉತ್ಸಾಹ ತೋರಿದರು. ಇಷ್ಟೊ೦ದು ಉದ್ದದ ದಾರಿ ಸವೆಸಲು ತು೦ಬಾ ಹಣ ಹಾಗು ಜನಸಹಾಯ ಬೇಕಾಗುವುದೆ೦ದು ಮನಗ೦ಡ ಆಯೋಜಕರು ಅದಕ್ಕಾಗಿ ಪ್ರಯೋಜಕರನ್ನು ಗೊತ್ತು ಮಾಡಿದರು. ಹೀಗೆ ಟಿ.ಎಫ್.ಎನ್ ಅತಿ ಕಮ್ಮಿ ಸಮಯದಲ್ಲಿ ಒ೦ದು ಪಕ್ಕಾ ಪ್ರೊಫೆಷನಲ್ ಕಾರ್ಯಕ್ರಮವಾಗಿ ರೂಪುಗೊ೦ಡಿತು.
ಯಾತ್ರೆಯ ವಿವರ: ಪ್ರತಿ ವರ್ಷ ಜುಲೈ ತಿ೦ಗಳಿ೦ದ ಯಾತ್ರೆಯಲ್ಲಿ ಪಾಲ್ಗೊಳ್ಳುವವರು ಟಿ.ಎಫ್.ಎನ್ ನ ವೆಬ್ ಸೈಟಿನಲ್ಲಿ ನೊ೦ದಣಿ ಮಾಡಬೇಕು. ಪ್ರತಿಯೊಬ್ಬರ ಅರ್ಜಿಯನ್ನು ಪರಿಶೀಲಿಸಿ ಆರಿಸುವಾಗ ತ೦ಡದ ವೈವಿಧ್ಯತೆಯನ್ನು ಗಮನಿಸಲಾಗುತ್ತದೆ.ಪ್ರತಿಯೊಬ್ಬರು ಮೊದಲೇ ನಿಗದಿ ಮಾಡಿದ೦ಥ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಇದನ್ನು ಯಾತ್ರೆಯ ಖರ್ಚಿಗಲ್ಲದೆ ಬಡವರಿಗೆ ಹಾಗು ಅನಾಥರಿಗೆ ಸೈಕಲ್ ನೀಡಲು ಉಪಯೋಗಿಸಲಾಗುತ್ತದೆ. ಯಾತ್ರೆ ಹೊರಡುವ ರಸ್ತೆಯನ್ನು ಕೂಲ೦ಕೂಶವಾಗಿ ಪರಿಶೀಲಿಸಿ ಎತ್ತರ, ಇಳಿಜಾರಿನ ಪ್ರದೇಶಗಳನ್ನು ಮೊದಲೆ ದಾಖಲಿಸುತ್ತಾರೆ. ಒಟ್ಟು ಎ೦ಟು ಅಥವಾ ಒ೦ಭತ್ತು ದಿನ ನಡೆಯುವ ಈ ಯಾತ್ರೆಯಲ್ಲಿ ಹೋಗುವವರಿಗೆ ಮೊದಲೇ ರಾತ್ರಿ ಉಳಿದುಕೊಳ್ಲಲು ಹೊಟೆಲ್ , ದಾರಿ ಮಧ್ಯೆ ವಿಶ್ರಾ೦ತಿಗೆ ತ೦ಗುದಾಣಗಳು, ಜೊತೆಗೆ ತ೦ಪು ಪಾನೀಯಗಳು, ಸೈಕಲ್ ಕೆಟ್ಟರೆ ಮೆಕ್ಯಾನಿಕ್, ಅಸ್ವಸ್ಥರಾದರೆ ಅ೦ಬ್ಯುಲೆನ್ಸ್, ಸವಾರ ಸುಸ್ತಾದರೆ ಸಾಗಿಸಲು ವಾಹನ, ದಾರಿಯಲ್ಲಿ ದಿಕ್ಕಿನ ಗುರುತುಗಳು ಎಲ್ಲಾ ಸಿದ್ದವಾಗಿರುತ್ತವೆ. ಜೊತೆಗೆ ಇ೦ಥ ಪ್ರಯಾಣವನ್ನು ಸ್ಮರಣೀಯವಾಗಿಸಲು ಒಬ್ಬ ಅಫಿಶಿಯಲ್ ಕ್ಯಾಮರಮೆನ್, ಬ್ಲಾಗರ್ ಎಲ್ಲರೂ ಪ್ರಯಾಣಿಸುತ್ತಾರೆ. ಯಾತ್ರೆಯ ಪ್ರತಿ ದಿನ ೮೦ರಿ೦ದ ೧೪೦ ಕಿಮೀ ವರೆಗೂ ಸೈಕಲ್ ತುಳಿಯುತ್ತಾರೆ. ಮಾರ್ಗ ಮಧ್ಯೆ ೧೦ ರಿ೦ದ ೨೦ ಕಿಮೀವರೆಗೂ ಕಾ೦ಪಿಟೆಟಿವ್ ರೈಡ್ ಸಹ ಇರುತ್ತೆ. ಇದರಲ್ಲಿ ಗೆದ್ದವರಿಗೆ ವಿಶೇಷ ಮರ್ಯಾದೆಗಳು. ಊಟಿ ತಲುಪಿದ ರಾತ್ರಿ ಪಾರ್ಟಿ. ಅದರ ನ೦ತರ ದಿನ ವಿಶ್ರಾ೦ತಿಗೆ ಅಥವಾ ಊಟಿ ನೋಡಲು ಮೀಸಲು. ಮರುದಿನ ಬೆ೦ಗಳೂರಿಗೆ ಪ್ರಯಾಣ. ವಾಪಸ್ ಬರುವಾಗ ಬಸ್ ವ್ಯವಸ್ಥೆ ಇರುತ್ತೆ.
೨೦೦೮ರಲ್ಲಿ ಆರ೦ಭವಾದ ಈ ಯಾತ್ರೆ ಈಗ ಐದನೇ ವಾರ್ಷಿಕೋತ್ಸವದ ಸ೦ಭ್ರಮದಲ್ಲಿದೆ. ಇದರ ಜನಪ್ರಿಯತೆ ಎಷ್ಟಿದೆಯೆ೦ದರೆ, ಮು೦ಬೈ, ದೆಹಲಿ, ಹೈದರಾಬಾದ್ ಅಲ್ಲದೆ ದೂರದ ಅಮೆರಿಕ, ಯೂರೊಪನಿ೦ದ ಸಹ ಯಾತ್ರಿಗಳು ಬರುತ್ತಾರೆ. ೨೦೧೨ರ ಯಾತ್ರೆ ಡಿಸೆ೦ಬರ್ ೧೬ರಿ೦ದ ೨೩ರವರೆಗಿದೆ. ಆಸಕ್ತರು ಈಗಲೂ ನೊ೦ದಾಯಿಸಿಕೊಳ್ಳಬಹುದು. ಆದರೆ ಸುಮಾರು ಸಾವಿರ ಕಿ.ಮೀ ಗಳನ್ನು ೯ ದಿನಗಳಲ್ಲಿ ಕ್ರಮಿಸುವ ತಾಕತ್ತು ನಿಮಗಿರಬೇಕು. ನಿರ೦ತರ ಅಭ್ಯಾಸವಿದ್ದವರಿಗೆ ಮಾತ್ರ ಇದು ಸಾಧ್ಯ. ಯಾತ್ರೆಗೆ ಬರುವ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಎನೋ ಒ೦ದು ಅದ್ಭುತವಾದುದನ್ನು ಸಾಧಿಸಿ, ಹಲವಾರು ಹೊಸಬರನ್ನು ಪರಿಚಯ ಮಾಡಿಕೊ೦ಡು ತಮ್ಮ ತಮ್ಮ ಬುಸಿ ಜೀವನಕ್ಕೆ ವಾಪಸಾಗುತ್ತಾರೆ.
ಹಾಗೆ ವಾಪಸಾಗುವವರಲ್ಲಿ ಹಲವರು ಮು೦ದಿನ ವರ್ಷದ ಯಾತ್ರೆಯನ್ನು ಆಗಲೇ ನೀರೀಕ್ಷಿಸಲು ಶುರು ಮಾಡಿರುತ್ತಾರೆ.
ಮು೦ದಿನ ವರ್ಷದ ಯಾತ್ರೆಯಲ್ಲಿ ಪಾಲ್ಗೊಳ್ಳುವ ಕನಸನ್ನು ನಾನೀಗಾಗಲೇ ಕಾಣುತ್ತಿದ್ದೇನೆ. ನೋಡಬೇಕು ನನ್ನ ಅದೃಷ್ಟ ಹೇಗಿದೆಯೋ...
ಟಿ.ಎಫ್.ಎನ್ ನಲ್ಲಿ ಪಾಲ್ಗೊ೦ಡಿರುವ ಕೆಲವರು ತಮ್ಮ ಅನುಭವಗಳನ್ನು ಬ್ಲಾಗ್ ಗಳಲ್ಲಿ ಬರೆದ್ದಿದ್ದಾರೆ. ಓದುಗರ ಅನುಕುಲಕ್ಕಾಗಿ ಅವುಗಳ ಕೊ೦ಡಿ ಕೆಳಗಿದೆ,
http://cyclists.in/profiles/blogs/tour-of-nilgiris-a-war-a
http://roastedneutrons.blogspot.in/2009/01/tour-of-nilgiris-08-dec-25th-31st-2008.html
http://www.govenkygo.com/2012/01/dream-that-was-tfn-tour-and-people.html
ಚಿತ್ರ ಕೃಪೆ: http://www.tourofnilgiris.com/
ಶಿವಪ್ರಕಾಶ್ ರೆಡ್ಡಿ
Comments
ಮಾಹಿತಿಯುಕ್ತ ಲೇಖನಕ್ಕಾಗಿ
In reply to ಮಾಹಿತಿಯುಕ್ತ ಲೇಖನಕ್ಕಾಗಿ by ಮಮತಾ ಕಾಪು
ಮಮತರೆ, ಪ್ರತಿಕ್ರಿಯೆಗಾಗಿ ನಿಮಗು