ಸಾವಿರ ಶರಣು
ಕವನ
ಸಾವಿರ ಶರಣು
ನಾರಿಯ ಪೂಜಿಸು ಅಣ್ಣ
ಆಗ ಗೌರಮ್ಮ ಹರಸುವಳು ನಿನ್ನ
ನಮಗೆ ಜನ್ಮ ಕೊಟ್ಟವಳು ಹೆಣ್ಣು
ಅವಳ ಪಾದಗಳಿಗೆ ಸಾವಿರ ಶರಣು
ನಾವು ನಿಂತ ನೆಲವು ಹೆಣ್ಣು
ಅವಳ ತಾಳ್ಮೆಗೆ ಸಾವಿರ ಶರಣು
!!ನಾರಿಯ ಪೂಜಿಸು ಅಣ್ಣ !!
ನಮ್ಮ ಒಡಹುಟ್ಟಿದವಳು ಹೆಣ್ಣು
ಅವಳ ಪ್ರೀತಿಗೆ ಸಾವಿರ ಶರಣು
ನಮ್ಮ ಒಡನಾಡಿಯಾದವಳು ಹೆಣ್ಣು
ಅವಳ ಸ್ನೇಹಕ್ಕೆ ಸಾವಿರ ಶರಣು
!!ನಾರಿಯ ಪೂಜಿಸು ಅಣ್ಣ !!
ನಮ್ಮ ಮಡದಿಯಾದವಳು ಹೆಣ್ಣು
ಅವಳ ಮಮತೆಗೆ ಸಾವಿರ ಶರಣು
ನಮ್ಮ ಮಗಳಾದವಳು ಹೆಣ್ಣು
ಅವಳ ಮಾತೃಹೃದಯಕ್ಕೆ ಸಾವಿರ ಶರಣು
!!ನಾರಿಯ ಪೂಜಿಸು ಅಣ್ಣ !!
ಹರಿಯುವ ನದಿಯು ಹೆಣ್ಣು
ದಾಹ ನೀಗಿಸಿದಾತೆಗೆ ಸಾವಿರ ಶರಣು
ಪ್ರಕೃತಿ ಮಾತೆಯು ಹೆಣ್ಣು
ಉಸಿರು ನೀಡುವ ದೇವಿಗೆ ಸಾವಿರ ಶರಣು
!!ನಾರಿಯ ಪೂಜಿಸು ಅಣ್ಣ !!
ಅನ್ನಪೂರ್ಣ ಮಾತೆಯು ಹೆಣ್ಣು
ಹಸಿವು ನೀಗಿಸಿದಾತೆಗೆ ಸಾವಿರ ಶರಣು
ವಿದ್ಯಾದಾತೆ ಶಾರದಮಾತೆಯು ಹೆಣ್ಣು
ಮಾತೃಭಾಷೆ ನೀಡಿದ ಜ್ಞಾನದಾತೆಗೆ ಸಾವಿರ ಶರಣು
!!ನಾರಿಯ ಪೂಜಿಸು ಅಣ್ಣ !!
ರಚನೆ:-ತುಂಬೇನಹಳ್ಳಿ ಕಿರಣ್ ರಾಜು ಎನ್
ಚಿತ್ರ್
