ಸಾವು ಸಂಭವಿಸುವ ಎರಡು ವಾರಗಳ ಮೊದಲೇ ವ್ಯಕ್ತಿಗೆ ಗೊತ್ತಾಗುತ್ತದೆಯೇ?!
ಹುಟ್ಟಿದ ಮನುಷ್ಯ ಒಂದಲ್ಲಾ ಒಂದು ದಿನ ಸಾಯಲೇಬೇಕು. ಆದ್ರೆ, ಆ ಸಾವು ಯಾವಾಗ ಬರುತ್ತೆ ಅಂತ ಹೇಳೋಕೆ ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಆದ್ರೆ, ಒಬ್ಬ ಮನುಷ್ಯನು ಸಾಯಲಿದ್ದಾನೆ ಅನ್ನೋದು ಅವನಿಗೆ ಎರಡು ವಾರಗಳು ಮುಂಚಿತವಾಗಿಯೇ ಗೊತ್ತಾಗುತ್ತಂತೆ.
ನಿಮ್ಗೆ ಇದು ನಂಬೋದಕ್ಕೆ ಆಗ್ತಿಲ್ವಾ.? ನಂಬ್ಲೇಬೇಕು. ಯಾಕಂದ್ರೆ, ಅದನ್ನ ವೈಜ್ಞಾನಿಕವಾಗಿ ಸಾಬೀತುಪಡಿಸಲಾಗಿದೆ. ಹಾಗಾದ್ರೆ, ಈ ಸಂವೇದನಾಶೀಲ ವೈಜ್ಞಾನಿಕ ಅಧ್ಯಯನವು ಹೇಳಿದ್ದಾದ್ರು ಏನು.? ಮುಂದೆ ಓದಿ. ಇತ್ತೀಚಿನ ಒಂದು ಸಂಶೋಧನೆಯಲ್ಲಿ, ಸಾವಿನ ಚಿಹ್ನೆಗಳು ಕೇವಲ ಒಂದಲ್ಲ, ಅನೇಕ ರೀತಿಯಲ್ಲಿ ಬರಲು ಪ್ರಾರಂಭಿಸುತ್ತವೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ಜನರು ಈ ಚಿಹ್ನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಆದ್ರೆ, ಇತರರು ಅದನ್ನ ತಳ್ಳಿಹಾಕುತ್ತಾರೆ. ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ಸಾವಿನ ಚಿಹ್ನೆಗಳು ತಿಳಿದಿರುವುದಿಲ್ಲ. ತಮ್ಮ ಪ್ರೀತಿಪಾತ್ರರು ಇದ್ದಕ್ಕಿದ್ದಂತೆ ಸತ್ತಾಗ ಅವರು ದುಃಖದಲ್ಲಿ ಮುಳುಗುತ್ತಾರೆ. ಆದಾಗ್ಯೂ, ಆರೋಗ್ಯ ತಜ್ಞರ ಸಂಶೋಧನೆಯು ಸಾವಿನ ಚಿಹ್ನೆಗಳು ಸಾವಿಗೂ ಕೆಲವು ದಿನಗಳ ಮೊದಲು ಕಾಣಿಸಿಕೊಳ್ಳುತ್ತವೆ ಎಂದು ಬಹಿರಂಗಪಡಿಸಿದೆ.
ಸಾವಿಗೂ ಮುನ್ನಕಾಣಿಸಿಕೊಳ್ಳುವ ಚಿಹ್ನೆಗಳಿವು.!: ಯುಕೆ ಮೂಲದ ಕಂಪನಿ ವೆಬ್ ಎಂಡಿ ಸುದೀರ್ಘ ತನಿಖೆಯ ನಂತರ ಸಾವಿನ ಚಿಹ್ನೆಗಳನ್ನು ಪತ್ತೆ ಹಚ್ಚಿದೆ. ಈ ಸಂಶೋಧನೆಯ ಪ್ರಕಾರ, ಒಬ್ಬ ವ್ಯಕ್ತಿಯ ಸಾವು ಸಮೀಪಿಸಿದಾಗ, ಆತನ ಆಹಾರ ಮತ್ತು ಪಾನೀಯ ಕಡಿಮೆಯಾಗುತ್ತದೆ. ಇನ್ನು ವ್ಯಕ್ತಿಯು ಮೊದಲಿಗಿಂತ ಕಡಿಮೆ ಮಾತನಾಡಲು ಪ್ರಾರಂಭಿಸುತ್ತಾನೆ. ಈ ಅಸಾಮಾನ್ಯ ಲಕ್ಷಣಗಳು ಭವಿಷ್ಯದಲ್ಲಿ ಏನಾದರೂ ಕೆಟ್ಟದ್ದು ಸಂಭವಿಸಲಿದೆ ಎಂಬುದರ ಸಂಕೇತವಾಗಿದೆ.
ಸಾವಿಗೂ ೨ ವಾರಗಳ ಮೊದಲು ಸಾವಿನ ಚಿಹ್ನೆಗಳು..!: ಒಬ್ಬರ ಸಾವಿಗೆ ೧-೨ ವಾರಗಳು ಉಳಿದಾಗ ಸಾವಿನ ಲಕ್ಷಣಗಳು ಹೆಚ್ಚು ಸ್ಪಷ್ಟವಾಗುತ್ತವೆ. ಈ ಹಂತದಲ್ಲಿ ವ್ಯಕ್ತಿಯು ಎಲ್ಲಾ ಸಮಯದಲ್ಲೂ ದಣಿದಿಂತೆ ಮತ್ತು ನಿರ್ಜೀವವಾಗಿರುತ್ತಾನೆ. ಆತ ತುಂಬಾ ದುರ್ಬಲನಾಗಿ ಕಾಣುತ್ತಾನೆ. ಇನ್ನು ಆತ ಬಯಸಿದ್ರೂ ಹಾಸಿಗೆಯಿಂದ ಎದ್ದೇಳಲು ಸಾದ್ಯವಾಗೋಲ್ಲ. ಇನ್ನು ಆತನ ನಿದ್ರೆ-ಎಚ್ಚರದ ಮಾದರಿಯೂ ಬದಲಾಗುತ್ತದೆ. ಈ ಸಮಯದಲ್ಲಿ, ಸಾವಿಗೆ ಹತ್ತಿರವಾಗಿರುವವರ ಹಸಿವು ಮತ್ತು ಬಾಯಾರಿಕೆಯು ಬಹಳವಾಗಿ ಕಡಿಮೆಯಾಗುತ್ತದೆ. ಅವರ ಹೃದಯ ಬಡಿತ, ರಕ್ತದೊತ್ತಡ ಮತ್ತು ಉಸಿರಾಟದ ವಿಧಾನದಲ್ಲಿ ಬದಲಾವಣೆಗಳಾಗಲಿವೆ.
ಕರುಳಿನ ಚಲನೆಯಲ್ಲಿ ಬದಲಾವಣೆ.!: ಮರಣವು ೩-೪ ದಿನಗಳವರೆಗೆ (ಸಾವಿನ ಚಿಹ್ನೆಗಳು) ಉಳಿದಾಗ, ವ್ಯಕ್ತಿಯ ಮಾನಸಿಕ ಸ್ಥಿತಿ ಮತ್ತು ಚಟುವಟಿಕೆಗಳು ಸಹ ಬದಲಾಗುತ್ತವೆ ಎಂದು ಸಂಶೋಧನೆಯು ಗಮನಿಸಿದೆ. ಸಾವು ಹತ್ತಿರವಿರುವಾಗ ತನ್ನ ಬಗ್ಗೆ ಮರೆತುಬಿಡುವ ಸಾಧ್ಯತೆ ಇನ್ನೂ ಇದೆ. ಇನ್ನು ಕೇಳುವ ಪ್ರಶ್ನೆಗಳಿಗೆ ಆತ ಖಂಡಿತವಾಗಿಯೂ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆದ್ರೂ ಆತ ಅನೇಕ ವಿಷಯಗಳ ಬಗ್ಗೆ ಸ್ಪಷ್ಟವಾಗಿ ಮಾತನಾಡಲು ಸಾಧ್ಯವಿಲ್ಲ.
ಸಾವಿನ ಸಮಯ ಸಮೀಪಿಸುತ್ತಿದ್ದಂತೆ ಆತನ ಕೈಗಳು, ಕಾಲುಗಳು ಮತ್ತು ಮೊಣಕಾಲುಗಳ ಚರ್ಮವು ನೀಲಿ-ನೇರಳೆ ಬಣ್ಣಕ್ಕೆ ತಿರುಗಬಹುದು. ಮೂತ್ರವಿಸರ್ಜನೆ ಮತ್ತು ಕರುಳಿನ ಚಲನೆಗಳು ನಿಲ್ಲಬಹುದು. ಇನ್ನು ದೇಹದ ಉಷ್ಣತೆ ಕುಸಿಯುತ್ತದೆ, ಕೆಲವರಿಗೆ ಉಸಿರಾಟದ ತೊಂದರೆ ಎದುರಾಗಬಹುದು. ಅಂದ್ಹಾಗೆ, ಇವೆಲ್ಲಾ ಲಕ್ಷಣಗಳು ಅಪಘಾತಗಳಲ್ಲಿ ಸಾಯುವವರಿಗೆ ಕಾಣಿಸಿಕೊಳ್ಳಲ್ಲ. ಈ ರೋಗಲಕ್ಷಣಗಳು ಅನಾರೋಗ್ಯದಿಂದ ಬಳಲುತ್ತಿರುವವರಲ್ಲಿ ಮಾತ್ರ ಕಂಡುಬರುತ್ತವೆ.
ಆಧಾರ ಮಾಹಿತಿ: ಕಿರಣ್ ಬೇಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ