ಸಾವು
ಸಾವಿನ ಒಳ ಆರಿವನ್ನು ಯಾರಿಂದ ತಾನೇ ತಿಲಿಯಲು ಸಾದ್ಯ? ಈ ನಮ್ಮ್ ಭೂಮಿಯಲ್ಲಿ ಮಾನವನೆಂಬ ಅತೀ ಬುದ್ಡಿವಂತ, ವೈಜ್ನಾನಿಕವಾಗಿ ಎಷ್ಟೇ ಮುಂದುವರೆದಿದ್ದರೂ ಸಹ ಅ ಸಾವಿಗೆ ತಲೆ ಬಾಗಲೇ ಬೆಕಾಗುತ್ತದೆ. ಸಾವು ಯಾರಿಗೆ, ಯಾವಾಗ, ಏಲ್ಲಿ, ಯಾವ ರೀತಿಯಲ್ಲಿ ಬರುತ್ತದೆ ಎಂದು ತಿಳಿಯುವುದು ಕೂಡ ಅಸಾಧ್ಯ. ಆದರೆ ಈ ಸಾವು ಯಾರನ್ನೂ ಬಿಡುವುದಿಲ್ಲ. ಎಲ್ಲರೂ ಒಂದಲ್ಲ ಒಂದು ದಿನ ಈ ಸಾವಿಗೆ ಶರಣಾಗಲೇಬೇಕು. ಹಾಗೇಂದು, ಸಾವಿಗೆ ಅಂಜಿ ಕುಳಿತರೆ, ನಮ್ಮೀ ಸುಂದರ ಬದುಕು ನಶಿಸಿ ಹೊಗುವುದಂತು ಸಥ್ಯ. ಓಮ್ಮೆ ಯೋಚಿಸಿ ನೋಡಿದರೆ ಮಾನವನ ಜೀವನಕ್ಕೆ ನಿಜವಾದ ಅರ್ಥ ಬರುವುದೇ ಈ ಸಾವಿನಿಂದ. ಮಾನವನಿಗೆ ಸಾವು ಇಲ್ಲದಿದ್ದರೆ, ಅವನ ಜೀವನಕ್ಕೂ ಅರ್ಥ ಇರುತ್ತಿರಲ್ಲಿಲ್ಲ, ಸಾಯುವುದರೋಳಗೆ ಎನ್ನನಾದರು ಸಾಧಿಸಬೆಕೆಂಬ ಛಲವಿರುತ್ತಿರಲ್ಲಿಲ್ಲ. ಆದರೆ ಸಾವೆಂಬುದು ಎಲ್ಲರಿಗೂ ಕಟ್ಟಿಟ್ಟ ಬುತ್ತಿ. ಎಲ್ಲರೂ ಸಾಯಲೇಬೇಕು, ಈದು ಪ್ರಕ್ರುತಿ ನಿಯಮ. ಆದರೆ ಅ ಸಾವು ಬರುವುದಕ್ಕಿಂತ ಮುಂಚೆ ಬದುಕುವ ಜೀವನ ಅರ್ಥಪೂರ್ಣವಾಗಿರಬೇಕು. ನಿಜವಾದ ಸಾವು ಬರುವುದು ನಮ್ಮ ದೇಹಕ್ಕೆ, ನಮಗಲ್ಲ, ಉದಾಹರಣೆಗೆ ಹೇಳುವುದಾದರೆ, ಗಾಂಧೀಜಿ, ನೆಹರು, ವಿಶ್ವೇಶ್ವರಯ್ಯ ಮುಂತಾದವರು ಇಂದು ದೈಹಿಕವಾಗಿ ಸಾವನ್ನಪ್ಪಿದರೂ ಕೂಡ ನಮ್ಮ ಮನಸುಗಳಲ್ಲಿ ಇಂದೂ ನಮ್ಮ ಜೋತೆಯಲ್ಲೇ ಇದ್ದಾರೆ. ನಾವೂ ಕೂಡ ನಮ್ಮೀ ಜೀವನವನ್ನು ಅರ್ಥಪೂರ್ಣವಾಗಿಸಿಕೊಂಡರೇ, ನಮ್ಮೀ ದೇಹಕ್ಕೆ ಸಾವು ಬಂದರು ಅಮರರಾಗುವುದು ಸಥ್ಯ.
- ನಿಮ್ಮ ಪ್ರೀತಿಯ,
ತಿ.ಬ.ಕಿ.
Comments
ಉ: ಸಾವು