ಸಾವು
ನಮ್ಮ ಕಛೇರಿಯ ಬಳಿ ತರಕಾರಿ ಮಿನಿ ಮಾರ್ಕೆಟ್ ಇದೆ. ನಾವು ದಿನಾ ಬಂಧು ಬಳಗ ತುಂಬಿದ ಕುಟುಂಬದವಳಾದ ಒಬ್ಬು ಅಜ್ಜಿಯ ಹತ್ತಿರ ತರಕಾರಿ ಕರೀದಿಸುತ್ತೇವೆ. ಯಾಕಜ್ಜಿ ಎಲ್ಲಾ ಇದ್ದರೂ ಸುಮ್ಮನೆ ವ್ಯಾಪಾರ ಮಾಡ್ತಿ ಅಂದ್ರೆ, ದುಡ್ಡಿದ್ರೆ ಎಲ್ಲಾ ಅವ್ವಾ ಅನ್ನೋಳು. ನಾನು ನಮ್ಮ ಮೇಡಮ್ ನಂಜುಮಳಿಗೆ ತರಕಾರಿಯವಳಾದ ಅಜ್ಜಿಯ ಹತ್ತಿರ ತರಕಾರಿ ಕರೀದಸಿ ಅವಳ ಎದುರಿಗೇ ಕುಳಿತಿದ್ದ ಮತ್ತೊಬ್ಬಳ ಹತ್ತಿರ ತರಕಾರಿ ಕರೀದಿಸಲು ಹೋದೆ ತರಕಾರಿ ಬೆಲೆ ವಿಚಾರಸುವುದರ ಒಳಗೆ ಯಾರೊ ಕಿರುಚಿದರು, ಅಜ್ಜಿ ಬಿದ್ದಳು ಅಜ್ಜಿ ಬಿದ್ದಳು ಎಂದು! ಹತ್ತಿರ ಹೋಗಿ ಏನಾಯ್ತು ಎಂದು ವಿಚಾರಿಸುವುದರಲ್ಲಿ ತಿಳಿಯಿತು ಅಜ್ಜಿ ಸಾವನ್ನಪ್ಪಿದ್ದಳೆಂದು. ಆಗ ನನಗನ್ನಿಸಿತು ಸಾವು ಎಷ್ಟು ನಿಗೂಢ, ಎಷ್ಟು ಅಕಸ್ಮಿಕ, ಎಷ್ಟು ಸೋಜಿಗ ಎಂದು. ಸಾಯುವವರೆಗೆ ತಾನೆ ಶ್ರಮಿಸಿ ದುಡಿದು ಸಾಯುವ ಕ್ಷಣದ ಅರಿವೇ ಇಲ್ಲದೆ ನಗುತ್ತಲೇ ಜೀವನ ದರ್ಶನ ಮಾಡಿಸಿ ನಮ್ಮ ಹತ್ತಿರ ಮಾತನಾಡುತ್ತಲೇ ಸಾವನ್ನಪ್ಪಿದ ಅಜ್ಜಿಯ ನೆನಪಿನಲ್ಲಿ, ಅವಳ ಬದುಕಿನ ಬದುಕುವ ಛಲದಲ್ಲಿನ ನೆನಪಿನಲ್ಲಿ ಈ ಲೇಖನ. ಇಷ್ಟೇ ಸಾವು಼