ಸಾಸಿವೆ ತಂದವಳು

ಸಾಸಿವೆ ತಂದವಳು

ಪುಸ್ತಕದ ಲೇಖಕ/ಕವಿಯ ಹೆಸರು
ಭಾರತಿ ಬಿ ವಿ
ಪ್ರಕಾಶಕರು
ಅಲಂಪು ಪ್ರಕಾಶನ, ಬಸವೇಶ್ವರನಗರ, ಬೆಂಗಳೂರು -೫೬೦೦೭೯
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೧೩

"ಸಾಸಿವೆ ತಂದವಳು" ಓದುತ್ತಾ, ಶುರುವಿನಲ್ಲಿ ನನ್ನ ಬಗ್ಗೆನೇ ಓದಿಕೊಳ್ಳುತ್ತಾ ಇದ್ದೆನಾ ಅನ್ನಿಸಿತು. ತಕ್ಷಣವೇ ಭಾರತೀ ಅಕ್ಕನಿಗೆ ಮೆಸೇಜ್ ಕೂಡಾ ಮಾಡಿದೆ. ಓದ್ತಾ ಓದ್ತಾ, ಅವರು ಬರೆದಿದ್ದ ಒಂದೊಂದು ವಿಷಯಗಳೂ ಹಾಗೇ ಕಣ್ಣ ಮುಂದೆ ಬರಕ್ಕೆ ಶುರು ಆದ್ವು. ಹತ್ರತ್ರ 14 ವರ್ಷ ಆಗಿತ್ತು ಈ ಥರ ಕೂತು ಬುಕ್ ಓದದೇ. ಅಡುಗೆನೂ ಮಾಡದೇ ಕೂತು ಓದಿ ಮುಗಿಸಿದೆ,'' 

ಇವರು ನನಗೆ ಪರಿಚಯ ಆಗಿ 6- 7 ವರ್ಷ ಆಗಿರಬಹುದು. 5 ವರ್ಷದ ಹಿಂದೆ, ನಾನು ಇಲ್ಲಿಗೆ ಬರುವ ಮೊದಲೂ ಈ ಬುಕ್ ತೊಗೊಬೇಕು ಅಂದುಕೊಂಡು, ಅದು ಆಗದೇ ಹಾಗೇ ಬಂದಿದ್ದೆ. 2021 ಅಲ್ಲಿ ಉದಯ್ ಇಂಡಿಯಾ ಗೆ ಬಂದಾಗ ಕೂಡಾ ತರಿಸಲು ಆಗಿರಲಿಲ್ಲ. 2022 ಅಲ್ಲಿ ನಾವೆಲ್ಲಾ ಬಂದಾಗ ಕೂಡಾ ಇವರನ್ನ ಮೀಟ್ ಮಾಡೋಕಾಗಲಿ, ಬುಕ್ ತೋಗೊಳೋಕಾಗಲಿ ಆಗಲಿಲ್ಲ. ಮೊನ್ನೆ ಶನಿವಾರ ಒಂದು ದಿನದ ಮಟ್ಟಿಗೆ ಉದಯ್ ಬೆಂಗಳೂರಿಗೆ ಹೋಗಿದ್ರು. ಆಗ "ಹರಸಾಹಸ" ದಿಂದ ಈ ಬುಕ್ ತರಸಿಕೊಂಡದ್ದಾಯ್ತು.

ಇವತ್ತು ಬೆಳಗ್ಗೆ ಎದ್ದು, ತಿಂಡಿ ಮುಗಿಸಿ, ಮಕ್ಕಳನ್ನು ಸ್ಕೂಲ್ ಗೆ ಕಳಿಸಿ, ಕಣ್ಣಿನ ಚೆಕ್ ಅಪ್ ಇತ್ತು ಅಂತ ಡಾಕ್ಟರ್ ಹತ್ರ ಹೋಗಿ, ಅಲ್ಲಿ ಕಾಯ್ತಾ ಇರೋವಾಗ ಈ ಬುಕ್ ಶುರು ಮಾಡಿದೆ... ನನ್ನ ಟರ್ನ್ ಬಂತು,"ಅಯ್ಯೋ,ಬುಕ್ ಮುಚ್ಚಬೇಕಾ" ಅಂದುಕೊಂಡೇ ಚೆಕಪ್ ಮುಗಿಸಿ ಮನೆಗೆ ಬಂದು ಡಾಕ್ಟರ್ ಹೇಳಿದ್ದು ವರದಿ ಉದಯ್ ಗೆ ಒಪ್ಪಿಸಿ, ಮತ್ತೆ ಬುಕ್ ಹಿಡ್ಕೊಂಡು ಕೂತೆ.

ನಾನು ಸ್ವಭಾವತಃ ತುಂಬಾ ಪುಕ್ಕಲಿ...ದೆವ್ವ ಭೂತದ ಭಯ ಅಲ್ಲ... ಗಾಯ, ರಕ್ತ, ನೋವು ಇಂಥವುಗಳ ಬಗ್ಗೆ ಭಯ. ಡಾಕ್ಟರ್ ಒಂದು ಸೂಜಿ ಚುಚ್ಚುತ್ತೇನೆ ಅಂದರೂ ಹೆದರಿ ಕಂಗಾಲಾಗಿರುತ್ತಿದ್ದೆ. ಬಲು ಅಬ್ಬರ, ಬಲು exaggeration.... ಒಂದು ಕೆಮ್ಮು ಬಂದರೂ ಎದೆ ಹಿಡಿದುಕೊಂಡು ಬಂಧನ ಪಿಚ್ಚರ್ ವಿಷ್ಣುವರ್ಧನ್ ಮೋಡ್ ಗೆ ಹೋಗಿಬಿಡುತ್ತಿದ್ದೆ. ಪ್ರಯಾಣ ಮಾಡೋವಾಗ ಕೂಡಾ ಒಂದು ನಿಮಿಷ ಕಣ್ಣು ಮುಚ್ಚಲ್ಲ ನಾನು. ನಾನು ಕಣ್ಣು ಮುಚ್ಚಿದರೆ, ಬಸ್ಸಲ್ಲಿರೋರೆಲ್ಲಾ ಕಣ್ಣು ಮುಚ್ಚುತ್ತೇವೆ ಅನ್ನೋ ಭಾವನೆ ನನ್ನದು. ಒಮ್ಮೆ ಹಿಮಾಚಲದ ಕಡೆ ಟೂರ್ ಹೋಗಿದ್ವಿ. ಮನಾಲಿ ಇಂದ ಡೆಲ್ಲಿಗೆ ಬಸ್ಸಲ್ಲಿ ಬಂದು, ಅಲ್ಲಿಂದ ಬೆಂಗಳೂರಿಗೆ ಪ್ಲೇನ್. ಅವತ್ತು ಹುಣ್ಣಿಮೆ ಬೇರೆ. ಬಸ್ಸಲ್ಲಿ ವಾಪಸ್ ಬರೋವಾಗ, ಕೆಳಗೆ ಬಿಯಾಸ್ ನದಿ, ಕಣಿವೆ ಎಲ್ಲಾ ಹೇಗ್ ಕಾಣಿಸ್ತಾ ಇತ್ತು ಅಂದ್ರೆ, ಅದು "ಅದ್ಭುತ" ವಾಗಿದ್ದರೂ "ಭಯಾನಕ" ಅನ್ನಿಸ್ತಾ ಇತ್ತು. ಇಡೀ ರಾತ್ರಿ ಕಣ್ಣು ಬಿಟ್ಕೊಂಡು ಕೂತಿದ್ದೆ. "ಮಲ್ಕೊ...ಯಾಕ್ ಎದ್ದಿದಿ" ಅಂತ ಕೇಳಿದ್ರು ಉದಯ್. ನಾನ್ ಮಲಗಿದ್ರೆ ಬಸ್ ಕೆಳಗೆ ಕಣಿವೇಲೀ ಬಿದ್ರೆ?? ಅಂದೆ. "ಏ ಲೂಸು...ನೀನ್ ಎಚ್ರ ಇದ್ರೆ ಬೀಳ್ತೀರೋ ಬಸ್ಸನ್ನ ತಡಿತಿಯಾ??ಹುಚ್ಚಿ" ಅಂತ ಬೈದು ಆರಾಮಾಗಿ ನಿದ್ದೆ ಹೊಡೆದರು.

ಮೊದಲ ಪ್ರೆಗ್ನನ್ಸಿ ಲಿ ಬ್ಲಡ್ ಟೆಸ್ಟ್ ಹೇಳಿದ್ರು. ಹೋಗಿ, ಟೆಸ್ಟ್ ಗೆ ಎರ್ಡ್ ಹನಿ ಬ್ಲಡ್ ಕೊಟ್ಟು ಬಂದು, ಬ್ಲಡ್ ಡೊನೇಟ್ ಮಾಡಿ ಬಂದವರ ಹಾಗೆ ಸುಸ್ತಾಗಿ ಕಾರಿನಲ್ಲಿ ಬಂದು ಕೂತಿದ್ದೆ. ಬಾಗಿಲು ಹಾಕು ಹೊರಡೋಣ ಅಂತ ಉದಯ್ ಹೇಳಿದ್ರೆ, ನಾನು ಬ್ಲಡ್ ಕೊಟ್ಟು ಬಂದಿಲ್ವಾ?ಸುಸ್ತಾಗಿದೆ. ನಂಗ್ ಬಾಗಿಲು ಹಾಕಕ್ ಆಗಲ್ಲ ಅಂದಿದ್ದೆ. ಡ್ರೈವರ್ ಸೀಟಲ್ಲಿ ಕೂತಿದ್ದ ಉದಯ್,ಇಳಿದು ಬಂದು ಬಾಗಿಲು ಹಾಕಿದ್ದರು. ಅಷ್ಟು ಪುಕ್ಕಲಿ, ಅಷ್ಟು ಅಬ್ಬರ. ಈಗ ಎರೆಡು ಮಕ್ಕಳು ಹುಟ್ಟಿದ ನಂತರ ಅದೆಲ್ಲಿಂದ ಬಂತೋ ಧೈರ್ಯ?ಒಮ್ಮೆ ಇದ್ದಕ್ಕಿದ್ದಂತೆ ಡಿಸೈಡ್ ಮಾಡಿ ಕಿವಿಗೆ 4 ಎಕ್ಸ್ಟ್ರಾ ಹೋಲ್ ಮಾಡಿಸಿಕೊಂಡು ಬಂದೆ. Gunshot ಅಲ್ಲ. ಅಕ್ಕಸಾಲಿಗನ ಬಳಿ. ಕೈ ಮೇಲೆ ಹಚ್ಚೆ ಹಾಕಿಸಿದೆ. ಮೊನ್ನೆ ಮೊನ್ನೆ ಮಿಕ್ಸಿಗೆ ಕೈ ಕೊಟ್ಟು ಬೆರಳು ಕಟ್ ಮಾಡಿಕೊಂಡು, ಅದರ ಮೇಲೆ ಅರಿಶಿನ ಸುರ್ಕೊಂಡು, ಪ್ಲಾಸ್ಟರ್ ಹಾಕಿ ಅಡುಗೆ ಮಾಡಿ ಮುಗಿಸಿದೆ. ನನ್ನ ಚಿಕ್ಕಂದಿನಿಂದ ನೋಡಿದವರೆಲ್ಲರಿಗೂ ಇವೆಲ್ಲಾ ಆಶ್ಚರ್ಯಕರ ವಿಷಯಗಳೇ.

ಈ "ಸಾಸಿವೆ ತಂದವಳು" ಓದುತ್ತಾ, ಶುರುವಿನಲ್ಲಿ ನನ್ನ ಬಗ್ಗೆನೇ ಓದಿಕೊಳ್ಳುತ್ತಾ ಇದ್ದೆನಾ ಅನ್ನಿಸಿತು. ತಕ್ಷಣವೇ ಭಾರತೀ ಅಕ್ಕನಿಗೆ ಮೆಸೇಜ್ ಕೂಡಾ ಮಾಡಿದೆ. ಓದ್ತಾ ಓದ್ತಾ, ಅವರು ಬರೆದಿದ್ದ ಒಂದೊಂದು ವಿಷಯಗಳೂ ಹಾಗೇ ಕಣ್ಣ ಮುಂದೆ ಬರಕ್ಕೆ ಶುರು ಆದ್ವು. ಹತ್ರತ್ರ 14 ವರ್ಷ ಆಗಿತ್ತು ಈ ಥರ ಕೂತು ಬುಕ್ ಓದದೇ. ಅಡುಗೆನೂ ಮಾಡದೇ ಕೂತು ಓದಿ ಮುಗಿಸಿದೆ. "The Life we live is a dream for many". ಇದನ್ನ ಅರ್ಥ ಮಾಡಿಕೊಳ್ಳದೇ ನಮ್ ಹತ್ರ ಇರೋದನ್ನ ಅಪ್ರಿಷಿಯೆಟ್ ಮಾಡದೇ ಯಾವ್ಯಾವ್ದಕ್ಕೋ ತಲೆ ಕೆಡಿಸಿಕೊಂಡು ಒದ್ದಾಡ್ತಿವಿ. ಒಂದು ಸ್ನಾನದ ಬೆಲೆ ಏನು? ಒಂದೊಳ್ಳೆ ಊಟದ ಮಹತ್ವ, ನಮ್ಮ ಲೈಫಿನಲ್ಲಿ ನಮ್ಮ ಪ್ರೀತಿ ಪಾತ್ರದವರ ಪಾತ್ರ, ಸ್ನೇಹಿತರ ಉಪಸ್ಥಿತಿ, ನಮ್ಮ ಆತ್ಮಸ್ಥೈರ್ಯವನ್ನು ನಾವೇ ಹುರಿದುಂಬಿಸಿಕೊಳ್ಳುವ ಪರಿ, ಎಲ್ಲವನ್ನೂ ಎಳೆಎಳೆಯಾಗಿ ಬಿಡಿಸಿ, ತಿಳಿಸಿ, ಎಲ್ಲಿಯೂ ಉತ್ಪ್ರೇಕ್ಷೆ ಮಾಡದೇ, ಇದ್ದಿದ್ದನ್ನು ಇದ್ದಂತೆಯೇ ಬರೆದು, ಓದುಗರನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡಿದ ನಿಮಗೂ, ಹಾಗೂ ನನಗೆ ಮುಖ್ಯವಾಗಿ ಈ ಪುಸ್ತಕ ಬೇಕೆ ಬೇಕು ಎನ್ನಿಸಲು ಕಾರಣವಾದ ಇದರ ಹೆಸರು "ಸಾಸಿವೆ ತಂದವಳು".

-ಪ್ರಥ್ವಿ ಪಿ ಸಿ, ಬೆಂಗಳೂರು