ಸಾಹಿತಿ ಡಾ.ಸಿದ್ದಲಿಂಗಯ್ಯರ ಬದುಕಿನ ನೆನಪುಗಳು

ಸಾಹಿತಿ ಡಾ.ಸಿದ್ದಲಿಂಗಯ್ಯರ ಬದುಕಿನ ನೆನಪುಗಳು

ಸಿದ್ಧಲಿಂಗಯ್ಯನವರು ಕನ್ನಡದ ಲೇಖಕರಲ್ಲೊಬ್ಬರು. ‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದ್ದರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ-ಬರವಣಿಗೆಗಳಲ್ಲಿ ತೊಡಗಿಕೊಂಡಿದ್ದವರು.

ಜನನ, ಜೀವನ: ಸಿದ್ಧಲಿಂಗಯ್ಯನವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ‘ಮಾಗಡಿ’ ತಾಲ್ಲೋಕಿನ ‘ಮಂಚನಬೆಲೆ’ ಗ್ರಾಮದಲ್ಲಿ 1954ರಲ್ಲಿ ಜನಿಸಿದರು. ತಂದೆ ದೇವಯ್ಯ, ತಾಯಿ ಶ್ರೀಮತಿ ವೆಂಕಮ್ಮ. ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ಆ ವೇಳೆಗಾಗಲೇ ಕವಿತೆ ಬರೆವ ಅಭ್ಯಾಸ ಇವರಿಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು

ಕೃತಿಗಳು: ಪಿ.ಎಚ್ ಡಿ ಸಂಶೋಧನಾ ಪ್ರಬಂಧ – ಗ್ರಾಮ ದೇವತೆಗಳು, 1997

ಕವನ ಸಂಕಲನಗಳು:

- ಹೊಲೆ ಮಾದಿಗರ ಹಾಡು, 1975

- ಮೆರವಣಿಗೆ, 2000

- ಸಾವಿರಾರು ನದಿಗಳು, 1979

- ಕಪ್ಪು ಕಾಡಿನ ಹಾಡು, 1983

- ಆಯ್ದಕವಿತೆಗಳು, 1997

- ಅಲ್ಲೆಕುಂತವರೆ

- ನನ್ನ ಜನಗಳು ಮತ್ತು ಇತರ ಕವಿತೆಗಳು, 2005

- ಸಮಕಾಲೀನ ಕನ್ನಡ ಕವಿತೆ ಭಾಗ-3, 4 (ಸಂಪಾದನೆ ಇತರರೊಂದಿಗೆ), 2003

ವಿಮರ್ಶನಾ ಕೃತಿಗಳು:

- ಹಕ್ಕಿ ನೋಟ, 1991

- ರಸಗಳಿಗೆಗಳು

- ಎಡಬಲ

- ಉರಿಕಂಡಾಯ, 2009

 ಲೇಖನಗಳ ಸಂಕಲನ:

- ಅವತಾರಗಳು, 1991

- ಸದನದಲ್ಲಿ ಸಿದ್ದಲಿಂಗಯ್ಯ ಭಾಗ -1, 1996

- ಸದನದಲ್ಲಿ ಸಿದ್ದಲಿಂಗಯ್ಯ ಭಾಗ -2, 2004

- ಜನಸಂಸ್ಕೃತಿ, 2007

ನಾಟಕಗಳು:

- ಏಕಲವ್ಯ, 1986

- ನೆಲಸಮ, 1980

- ಪಂಚಮ, 1980

ಆತ್ಮಕಥೆ:

- ಊರುಕೇರಿ- ಭಾಗ-1, 1997

- ಊರುಕೇರಿ- ಭಾಗ-2, 2006

ಗೌರವ, ಪ್ರಶಸ್ತಿಗಳು:

- ಉತ್ತಮ ಚಲನಚಿತ್ರಗೀತ ರಚನೆಗಾಗಿ ಕರ್ನಾಟಕ ಸರ್ಕಾರ ಪ್ರಶಸ್ತಿ-1984

- ರಾಜ್ಯೋತ್ಸವ ಪ್ರಶಸ್ತಿ -ಕರ್ನಾಟಕ ಸರ್ಕಾರ-1986

- ಡಾ.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ -1992

- ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ -1996

- ಜಾನಪದ ತಜ್ಞ ಪ್ರಶಸ್ತಿ -2001

- 2 ಬಾರಿ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯ.

- ಸಂದೇಶ್ ಪ್ರಶಸ್ತಿ -2001

- ಡಾ.ಅಂಬೇಡ್ಕರ್ ಪ್ರಶಸ್ತಿ -2002

- ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ -2002

- ಬಾಬುಜಗಜೀವನರಾಮ್ ಪ್ರಶಸ್ತಿ -2005

- ನಾಡೋಜ ಪ್ರಶಸ್ತಿ -2007

- ಪ್ರೆಸಿಡೆನ್ಸಿ ಇನ್ಷಿಟ್ಯೂಷನ್ ಪ್ರಶಸ್ತಿ -2012

- ಆಳ್ವಾಸ್ ನುಡಿಸಿರಿ ಪ್ರಶಸ್ತಿ -2012

- ಶ್ರವಣಬೆಳಗೊಳದಲ್ಲಿ ನಡೆದ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು.

- ನೃಪತುಂಗ ಪ್ರಶಸ್ತಿ -2018

- ಪಂಪ ಪ್ರಶಸ್ತಿ – 2019

***

ಯಾರಿಗೆ ಬಂತು ಎಲ್ಲಿಗೆ ಬಂತು

ನಲವತ್ತೇಳರ ಸ್ವಾತಂತ್ರ್ಯ? 

ಟಾಟಾ ಬಿರ್ಲರ ಜೇಬಿಗೆ ಬಂತು 

ಜನಗಳ ತಿನ್ನುವ ಬಾಯಿಗೆ ಬಂತು 

ಕೋಟ್ಯಾಧೀಶರ ಕೋಣೆಗೆ ಬಂತು 

ನಲವತ್ತೇಳರ ಸ್ವಾತಂತ್ರ್ಯ..

 

ಬಡವರ ಮನೆಗೆ ಬರಲಿಲ್ಲ ಬೆಳಕಿನ 

ಕಿರಣ ತರಲಿಲ್ಲ ಗೋಳಿನ ಕಡಲನು 

ಬತ್ತಿಸಲಿಲ್ಲ ಮಮತೆಯ ಹೂವನು 

ಅರಳಿಸಲಿಲ್ಲ

ಹಣವಂತರು ಕೈಸನ್ನೆ ಮಾಡಿದರೆ

ಕತ್ತಲೆಯಲ್ಲೇ ಬೆತ್ತಲೆಯಾಯಿತು

ಯಾರು ಕಾಣದ ಸ್ವಾತಂತ್ರ್ಯ

 

ಪೋಲಿಸರ ಲಾಠಿಗೆ ಬಂತು, 

ಮಾಲೀಕರ ಚಾಟಿಗೆ ಬಂತು 

ಬಂದೂಕಿನ ಗುಂಡಿಗೆ ಬಂತು 

ನಲವತ್ತೇಳರ ಸ್ವಾತಂತ್ರ್ಯ

ಪಾರ್ಲಿಮೆಂಟಿನ ಕುರ್ಚಿಯ ಮೇಲೆ 

ವರ್ಷಗಟ್ಟಲೆ ಚರ್ಚೆಗೆ ಕೂತು 

ಬಡವರ ಬೆವರು ರಕ್ತವ ಕುಡಿದು 

ಏಳಲೆ ಇಲ್ಲ ಸ್ವಾತಂತ್ರ್ಯ..

ಎಂದು ಹಾಡಿ, ನೊಂದವರಿಗೆ ದನಿಯಾಗಿದ್ದ ದಲಿತ ಕವಿ ಸಿದ್ದಲಿಂಗಯ್ಯನವರು ನಮ್ಮನ್ನಗಲಿದ್ದಾರೆ... ಅವರೇ ಹೇಳಿದಂತೆ ಪಾರ್ಲಿಮೆಂಟಿನಲ್ಲಿ ವರ್ಷಗಟ್ಟಲೆ ಚರ್ಚೆಯನ್ನು ಮಾಡುತ್ತಾ, ಬಡವರ ರಕ್ತವನ್ನು ಕುಡಿದು ಶೋಷಿಸುತ್ತಿರುವ ವ್ಯವಸ್ಥೆಯೇ ಇಂದಿನ ಸ್ಥಿತಿಗೆ ಕಾರಣ.. ಇದೇ ಭಾವದ ಹತ್ತು ಹಲವು ಬಂಡಾಯದ ಕಿಡಿ ಹೊತ್ತಿಸಿದ ಕವಿಯೇ ಈ ವ್ಯವಸ್ಥೆಗೆ ಬಲಿಯಾಗಿದ್ದಾರೆ... ನಾನೆಂದೂ ಭೇಟಿಯಾಗದ, ಆದರೆ ಇವರ ಕವನಗಳನ್ನ ಕೇಳಿ ಅವುಗಳ ಗಟ್ಟಿತನಕ್ಕೆ ಒಳ ಆಳದ ತುಡಿತಕ್ಕೆ  ಮಾರು ಹೋದವನು ನಾನು..

ಇವರ 

"ಗುಡಿಸಿಲಿನಲ್ಲಿ ಅರಳುವ ಗುಲಾಬಿ ನಕ್ಷತ್ರ ನನ್ನ ಕವನ,

ಕತ್ತಲೆಯಲ್ಲಿ ಕಾಣುವ ಬೆಳಕು ಬಂಡಾಯದ ಈ ಕವನ..

ಬದುಕ ಪ್ರೀತಿಸುವ ಬಡವರ ಮಗಳು, ನಿರಾಭರಣೆ ಕವನ

ಜನಗಳು ತಿನ್ನುವ ಅನ್ನದ ಅಗಳು ಜೀವ ನನ್ನ ಕವನ" ಎಂಬ ಸಾಲುಗಳು ನನ್ನಲ್ಲಿ ಹೊಸ ಸಂಚಲನವನ್ನು ಉಂಟು ಮಾಡಿದ್ದವು..

ನಿಮ್ಮ "ಆ ಬೆಟ್ಟದಲ್ಲಿ, ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ" ಕವಿತೆಯ ಸಾಲುಗಳು ನನ್ನನ್ನು ಸದಾ ಕಾಡುವ ಸಾಲುಗಳು..

ಹೋಗಿಬನ್ನಿ ಸಿದ್ದಲಿಂಗಯ್ಯ ಸರ್...

ನಿಮ್ಮ ಅದ್ಭುತ ಕವಿತೆಯ ಸಾಲುಗಳು ನನ್ನ ಮನದಲ್ಲಿ ಚಿರಸ್ಥಾಯಿ..

(ವಿವಿಧ ಸಾಮಾಜಿಕ ಜಾಲತಾಣದಿಂದ ಸಂಗ್ರಹಿತ)