ಸಿದ್ದರಾಗಲೇಬೇಕಿದೆ ಒಂದಷ್ಟು ಮಾತುಕತೆಗೆ…!

ಸಿದ್ದರಾಗಲೇಬೇಕಿದೆ ಒಂದಷ್ಟು ಮಾತುಕತೆಗೆ…!

ಆರೆಸ್ಸೆಸ್ಸ್ ( RSS ) ಮತ್ತು ಪ್ರಗತಿಪರ ಚಿಂತಕರು ಒಂದಷ್ಟು ಮಾತುಕತೆಗೆ ಸಿದ್ದರಾಗಲೇಬೇಕಿದೆ.

ದಲಿತರು ಮತ್ತು ಬ್ರಾಹ್ಮಣರು ಒಂದಷ್ಟು ಚರ್ಚೆಗಳಿಗೆ, ಸಿದ್ದರಾಗಲೇಬೇಕಿದೆ.

ಬಲಪಂಥೀಯರು ಮತ್ತು ಎಡಪಂಥೀಯರು ಒಂದಷ್ಟು ಸಂವಾದಗಳಿಗೆ,ಸಿದ್ದರಾಗಲೇಬೇಕಿದೆ.

ಕಾರ್ಮಿಕರು ಮತ್ತು ಬಂಡವಾಳಶಾಹಿಗಳು ಸ್ವಲ್ಪ ಹೊಂದಾಣಿಕೆಗೆ, ಸಿದ್ದರಾಗಲೇಬೇಕಿದೆ.

ಬಿಜೆಪಿ ಕಾಂಗ್ರೆಸ್ ಕಮ್ಯುನಿಸ್ಟ್ ಮತ್ತು ಪ್ರಾದೇಶಿಕ ಪಕ್ಷಗಳು ಒಂದಷ್ಟು ಸಹಕಾರಕ್ಕೆ, ಸಿದ್ದರಾಗಲೇಬೇಕಿದೆ.

ಬಸವ ತತ್ವ, ಅಂಬೇಡ್ಕರ್ ಚಿಂತನೆ, ಮಾರ್ಕ್ಸ್ ವಾದ, ಸನಾತನ ಧರ್ಮಗಳವರು ಒಂದಷ್ಟು ಸಮನ್ವಯಕ್ಕಾಗಿ, ಸಿದ್ದರಾಗಲೇಬೇಕಿದೆ.

ಕ್ರಿಶ್ಚಿಯನ್ನರು, ಹಿಂದೂಗಳು, ಮುಸ್ಲಿಮರು ಒಂದಷ್ಟು ಸೌಹಾರ್ದಕ್ಕಾಗಿ, ಸಿದ್ದರಾಗಲೇಬೇಕಿದೆ.

ಮೌಲ್ವಿಗಳು, ಸ್ವಾಮೀಜಿಗಳು, ಪಾದ್ರಿಗಳು ತಮ್ಮ ಧರ್ಮ ಭೋದನೆ ಕಡಿಮೆ ಮಾಡಿ ಒಂದಷ್ಟು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಲು, ಸಿದ್ದರಾಗಲೇಬೇಕಿದೆ.

ಜನಗಳು ತಮ್ಮ ಧ್ವನಿ ಮೊಳಗಿಸಲು ಒಂದಷ್ಟು ನೆಮ್ಮದಿಯುತ ಬದುಕಿಗಾಗಿ, ಇಲ್ಲದಿದ್ದರೆ ಈಗಿನ ಘಟನೆಗಳು, ವಿದ್ಯುಮಾನಗಳು ನಿಮ್ಮನ್ನು ‌ದೀರ್ಘಕಾಲ ತೊಂದರೆ ಸಿಲುಕಿಸುವುದು ನಿಶ್ಚಿತ. ಈ ಸಂಘ ಸಂಸ್ಥೆಗಳವರು, ಈ ವಿಚಾರಗಳ ಬಗ್ಗೆ ಸ್ಪಷ್ಟ ಸೈದ್ಧಾಂತಿಕ ನಿಲುವುಗಳನ್ನು ಹೊಂದಿರುವವರು, ಜನಗಳು ಮತ್ತು ದೇಶದ ಬಗ್ಗೆ ಕಾಳಜಿ ಇರುವವರು ದಯವಿಟ್ಟು ತಮ್ಮ ಸಂಕೋಚ ಅಹಂ ಸ್ವಾರ್ಥ ಕಡಿಮೆ ಮಾಡಿಕೊಂಡು ಧೈರ್ಯವಾಗಿ ಒಂದು ಸಮನ್ವಯದ ಪ್ರಯತ್ನ ಮಾಡಿ. ಕೆಡವುವುದು ಸಾಕಿನ್ನು ಕಟ್ಟುವುದು ಬೇಕಿನ್ನು,

ಅತಿರೇಕದಿಂದ ಭಾರತದಲ್ಲಿ ಒಂದು ದೊಡ್ಡ ಆಂತರಿಕ ಯುದ್ಧ ಆಗುವ ಮುನ್ನ ದಯವಿಟ್ಟು ಎಚ್ಚೆತ್ತುಕೊಳ್ಳಿ,

ದೇಶವನ್ನು ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗೋಣ. ಎಲ್ಲಾ ಸಿದ್ದಾಂತಗಳಿಗಿಂತ ಮಾನವೀಯತೆ ಮತ್ತು ‌ದೇಶ ಹಾಗೂ ದೇಶದ ಜನಗಳ ಹಿತಾಸಕ್ತಿ ಮುಖ್ಯ. ತಪ್ಪು ತಿಳಿಯಬೇಡಿ - ನಕಾರಾತ್ಮಕವಾಗಿ ಯೋಚಿಸಬೇಡಿ - ಅಪಹಾಸ್ಯ ಅಥವಾ ವ್ಯಂಗ್ಯ ಮಾಡಬೇಡಿ. ಸದ್ಯದ ನಮ್ಮ ವ್ಯವಸ್ಥೆಯಲ್ಲಿ...

***

ದಲಿತರನ್ನು  ಬ್ರಾಹ್ಮಣರು   ಪ್ರೀತಿಸಬೇಕು,

ಬ್ರಾಹ್ಮಣರನ್ನು    ದಲಿತರು  ಗೌರವಿಸಬೇಕು....

 

ಕೆಳವರ್ಗದವರನ್ನು  ಮೇಲ್ವರ್ಗದವರು  ಪ್ರೀತಿಸಬೇಕು,

ಮೇಲ್ವರ್ಗದವರನ್ನು  ಕೆಳವರ್ಗದವರು ಗೌರವಿಸಬೇಕು.....

 

ಬಡವರನ್ನು  ಶ್ರೀಮಂತರು  ಪ್ರೀತಿಸಬೇಕು,

ಶ್ರೀಮಂತರನ್ನು  ಬಡವರು  ಗೌರವಿಸಬೇಕು.....

 

ಕಿರಿಯರನ್ನು  ಹಿರಿಯರು  ಪ್ರೀತಿಸಬೇಕು,

ಹಿರಿಯರನ್ನು ಕಿರಿಯರು  ಗೌರವಿಸಬೇಕು.....

 

ಪ್ರಜೆಗಳನ್ನು  ರಾಜಕಾರಣಿಗಳು  ಪ್ರೀತಿಸಬೇಕು,

ರಾಜಕಾರಣಿಗಳನ್ನು  ಪ್ರಜೆಗಳು  ಗೌರವಿಸಬೇಕು.....

 

ಜನರನ್ನು  ಅಧಿಕಾರಿಗಳು    ಪ್ರೀತಿಸಬೇಕು,

ಅಧಿಕಾರಿಗಳನ್ನು  ಜನರು  ಗೌರವಿಸಬೇಕು.....

 

ಎಲ್ಲರನ್ನೂ  ನ್ಯಾಯಾಂಗ ಪ್ರೀತಿಸಬೇಕು,

ನ್ಯಾಯಾಂಗವನ್ನು  ಎಲ್ಲರೂ  ಗೌರವಿಸಬೇಕು...

 

ಇದೇ ನಿಜವಾದ SOCIALLY SMART COUNTRY. ಇದಕ್ಕಾಗಿ ನೀವು ಕೋಟ್ಯಾಂತರ ಹಣ ಖರ್ಚು ಮಾಡಬೇಕಾಗಿಲ್ಲ, ಇದಕ್ಕಾಗಿ ನೀವು ಅತ್ಯುನ್ನತ ವ್ಯಾಸಂಗ ಮಾಡಬೇಕಾಗಿಲ್ಲ, ಇದಕ್ಕಾಗಿ ನೀವು ಯಾವುದೇ ತ್ಯಾಗ ಮಾಡಬೇಕಾಗಿಲ್ಲ, ಇದಕ್ಕಾಗಿ ನೀವು ಯಾವುದೇ ಶ್ರಮ ಪಡಬೇಕಾಗಿಲ್ಲ, ಕೇವಲ ಕೇವಲ ಕೇವಲ ನಿಮ್ಮ ಮನಸ್ಥಿತಿಯನ್ನು ಸ್ವಲ್ಪ  ಮೇಲ್ದರ್ಜೆಗೆ ಏರಿಸಿಕೊಳ್ಳಿ ಅಷ್ಟೆ.

TRY..........YOUR LEVEL BEST..... ಮತ್ತೊಂದು ‌ಸಾಮಾಜಿಕ ಕ್ರಾಂತಿಗಾಗಿ....ನಾವು ಮತ್ತು ನೀವು....

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ