ಸಿದ್ಧಿದಾತ್ರಿದೇವಿ

ಸಿದ್ಧಿದಾತ್ರಿದೇವಿ

ಕವನ

ನವರಾತ್ರಿಯ ವೈಭವದಿ ಕಣ್ಮನ ಸೆಳೆಯುತ

ಭವರೋಗ ತಡೆವಳು ವಿಶ್ವಾಪ್ರಿತ

ಭವಸಾಗರ ತರಣಿ ನಾನಾಲಂಕಾರ ಭೂಷಿತೆ

ನವರಾಗ ಕರುಣಿಸೋ ವಿಶ್ವವಿತಾ...

 

ಶಂಕಚಕ್ರಗದಾಪದ್ಮ ಶಿರ್ಮಮುಖಿ ಶಿವಪತ್ನಿ

ಚತುರ್ಭುಜಧಾರಿಣಿ ನಮೋಸ್ತುತೆ

ಕಮಲಪ್ರಿಯೆ ಪರಮಾನಂದಮಯಿ ದೇವಿ

ಕರಮುಗಿದು ಬೇಡುವೆ ನಮೋಸ್ತುತೆ....

 

ಸಿಂಹರೂಢ ಸಿದ್ಧಿದಾತ್ರಿ ಬ್ರಹ್ಮಾಂಡರೂಪಿಣಿ

ಮಹಾತಾಯಿ ದುರ್ಗಮಾತೆ ನಮೋ

ಸಾಮಗಾನ ಪ್ರಿಯ ದೇವಿ ಸಾಂಬ ಸ್ವರೂಪಿಣಿ

ಅಜ್ಞಾನ ತೊಲಗಿಸು ಜನನಿ ನಮೋ...

 

ಕಮಲಪುಷ್ಪ ವಿರಾಜಿತೆ ಸರ್ವಶಕ್ತಿ ಸಮನ್ವಿತೆ

ದೇವಿ ದುರ್ಗಮಾತೆ ರಕ್ಷಿಸು ಮಾತೆ

ಭುವನ ಪಾಲಿತ ದಿವ್ಯ ಭಗವತಿ ವಿಶ್ವಭಾರತಿ

ಸರ್ವಜನರನು ಸಲಹು ಹೇ ಮಾತೆ...

 

ನವರಾತ್ರಿಗೆ ನವಮೆರಗು ದೇವಿಯ ಸಿಂಗಾರ

ಮಹಿಷಾಸುರ ಮರ್ದಿನಿಯೆ ನಮೋ

ದುರ್ಗುಣವ ಸುಡುತಲಿ ದುರ್ಜನರ ತುಳಿದು

ಒಳಿತನು ಮಾಡು ಹೇ ಮಾತೆ ನಮೋ...

-ಅಭಿಜ್ಞಾ ಪಿ.ಎಮ್ ಗೌಡ

 

ಚಿತ್ರ್