ಸಿನಿಮಾ ಮಾಡುವಿಕೆಯ ಹೊಸ "ಅವತಾರ"....
ಎಲ್ಲೆಲ್ಲೂ ಅದೇ ಮಾತು, ಎಲ್ಲರೂ ಎಲ್ಲರನ್ನೂ ಕೇಳುವದೇ, "ಅವ್ತಾರ್" ನೋಡಿದ್ರಾ?... ಅವತಾರ್ ನೋಡಿದ್ರಾ?,...
ತ್ರೀ ಡಿ ಸಿನಿಮಾ ನೀವಿನ್ನೂ ಒಂದೂ ನೋಡಿಲ್ಲ ಅಂದ್ರೆ, ಈ ಸಿನಿಮಾ ಮಿಸ್ ಮಾಡಿಕೊಳ್ಳಲೇ ಬೇಡಿ... ಈ ಬಿಳಿಯರು ಏನಾದರೊಂದು ಹೊಸದನ್ನು ಮಾಡ್ತಾನೇ ಇರ್ತಾರೆ, ಕೆಲವು ಸಲ ಅಸೂಯೆ ಆಗುತ್ತೆ,.. :P
ನನಗಂತೂ ಈ ಸಿನಿಮಾ ನೋಡಿ, ಅನಿಸಿದ್ದು, .. ವಾ!! ವಾ!!.. ಅಸ್ಟೇ.. ಹೇಳುವದಕ್ಕೆ ಸರಿಯಾದ ಪದ ಸಿಗುತ್ತಿಲ್ಲ.. ಅದನ್ನು ನೋಡಿಯೇ ತಿಳಿದುಕೊಳ್ಳಬೇಕು.. :)
ಈ ಸಿನಿಮಾದಲ್ಲಿ ದೊಡ್ಡ ದೊಡ್ಡ ಫಿಲಾಸಾಫಿಗಳಿಲ್ಲ,.. ಅಂತ ಅರ್ಥ ಮಾಡಿಕೊಳ್ಳುವದಕ್ಕೆ ತ್ರಾಸುಪಡಬೇಕಾದ ಕಥೆ ಅಲ್ಲ.. ಸರಳ ಕಥೆ,.. ನಮ್ಮ ಸುತ್ತಮುತ್ತ ನಡೆಯಬಹುದಾದ ಕಥೆ, ಆದರೆ ಅದು ನಡೆಯುವದು ಭೂಮಿಯಿಂದ ಬಲೂ ದೂರ, ಎಲ್ಲೋ ಇರುವ ’ಪಾಂಡೋರ’ ಎಂಬ ಗ್ರಹದಲ್ಲಿ.. ಅಲ್ಲಿರುವವು ನಮ್ಮಸ್ಟೇ, ಅಥವಾ ನಮಗಿಂತಲೂ ಒಂದು ಕೈ ಹೆಚ್ಚಿಗೇ ಹ್ರುದಯವಂತ ಜೀವಿಗಳು..,..
ಇಲ್ಲಿವರೆಗೂ ಬಂದ ಸಿನಿಮಾಗಳಲ್ಲಿ,.. ಪರಗ್ರಹ ಜೀವಿಗಳು ನಮಗೆ ಏಲಿಯನ್ಸ್,.. ಆದರೆ ಇಲ್ಲಿ ಮನುಶ್ಯರೇ ಏಲಿಯನ್ಸ್.., ಆ ಜನಾಂಗದ ಭಾವಗಳಿಗೆ, ಜೀವ ಮಿಡಿಯದೇ ಇರದು.. :)
ಜೇಮ್ಸ್ ಕ್ಯಾಮರಾನ್ ಒಬ್ಬ ಅತ್ಯುತ್ತಮ ಕಥೆಗಾರ.,.. ಹೆಚ್ಚಿನ ಸೈ-ಫೈ ಸಿನಿಮಾಗಳಂತೆ ಇದು ಆತ್ಮರಹಿತ, ಬರೀ ಟೆಕ್ನಾಲಾಜಿಯ ವಿಜ್ರಂಭನೆ ಅಲ್ಲ.,.. ಇದರಲ್ಲಿ ಮನ ಮಿಡಿಯುವ ಕಥೆ, ಭಾವನೆಗಳ ಹರಿವಿದೆ.,..
ಸೂ: ಹಲವರಿಗೆ ಈ ಸಿನಿಮಾ ಅಸ್ಟು ಇಸ್ಟವಾಗಿಲ್ಲ,.. ನಿಮಗೇನೆನಿಸಿತು ತಿಳಿಸುವಿರ?
ಕೆಳಗಿನ ಯುಟ್ಯೂಬ್ ಜಾಹಿರಾತು ನೋಡಿ...