ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !

ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !

ಬರಹ

ಕ್ಯಾಲಿಫೋರ್ನಿಯದ ಆರೇಂಜ್ ಕೌಂಟಿಯಿಂದ, ನಾವು ಜುಲೈ, ೨೬, ಶನಿವಾರ, ೨೦೦೮ ರಂದು, ದ ಬೆಳಿಗ್ಯೆ ಡ್ರೈವ್ ಮಾಡಿಕೊಂಡು, ಲಾಸ್ ಎಂಜಲೀಸ್ ನಗರವನ್ನು ತಲುಪಿದೆವು. ’ವರ್ಜಿನ್ ಅಮೆರಿಕ’ ವಿಮಾನದಲ್ಲಿ ಹೊರಟು, ೨ ಗಂಟೆ ಪ್ರಯಾಣದ ನಂತರ, ಸಿಯಾಟಲ್ ತಲುಪಿದೆವು. ಸಿಯಾಟಲ್ ನಗರದಲ್ಲಿ ಏನು ನೋಡಿದಿರಿ ಎಂದು ಯಾರಾದರೂ ಕೇಳಿದರೆ ಹೇಳಲು ಒಂದೇ ಎರಡೆ ? ಮಾಂತ್ರಿಕ ಸಾಫ್ಟ್ ವೇರ್ ತಂತ್ರಜ್ಞಾನಿ, ಬಿಲ್ಗೇಟ್ ರವರ ಮೈಕ್ರೋಸಾಫ್ಟ್, ಮದೀನ ದ್ವೀಪದಲ್ಲಿನ, ಅವರ ಬಂಗಲೆಮನೆ, ಹಲವಾರು ಡೌನ್ ಟೌನ್ ನ ವಿಶೇಷ ಮಾಲ್ ಗಳು, ವಸ್ತುಕಲಾಸಂಗ್ರಹಾಲಯಗಳು, ಸ್ವಾಭಾವಿಕವಾದ ಬಂದರು, ರೈತರಮಾರುಕಟ್ಟೆ, ಹಡಗಿನಲ್ಲಿ ಹೋಗಿನೋಡಿ ಬರುವ ಪರ್ಯಟಕರ ಆಸಕ್ತಿಯನ್ನು ತಾಳೆಹಿಡಿಯುವ ಸುಂದರ ತಾಣಗಳು, ಸ್ಪೇಶಟಲ್ ಇತ್ಯಾದಿ, ಅನೇಕಾನೇಕ ವೈವಿಧ್ಯಮಯ ತಾಣಗಳು. ಸಿಯಾಟಲ್ ನಗರ, ಅನೇಕ ಸುಪ್ರಸಿದ್ಧ ಐತಿಹಾಸಿಕ ಕಾರ್ಯಾಚರಣೆಗಳಿಗೆ ಮೀಸಲಾಗಿಟ್ಟಿರುವ ಜಾಗ.

ನಮಗೆ ಯಾವುದಾದರೂ ಅತಿಯೆತ್ತರದ ಸ್ಥಳದ ಮೇಲಿನಿಂದ ’ಸಿಯಾಟಲ್ ನಗರ’ ವನ್ನು ನೋಡುವ ಆಸೆ ಪ್ರಬಲವಾಗಿತ್ತು. ಆ ಊರಿನ ಅಯಸ್ಕಾಂತದಂತಿದ್ದ, ’ಸ್ಪೇಸ್ ನೀಡಲ್’, ( ೫೦೦ ಅಡಿ ಎತ್ತರ ) ನ ಮೇಲ್ಭಾಗದಿಂದ ನೋಡುವ ಸನ್ನದ್ಧರಾಗಿದ್ದಾಗ, ಅಲ್ಲಿನ ಒಬ್ಬ ಮಿತ್ರರು, ನಮಗೆ, " ಎತ್ತರದಿಂದ ಕಾಣಿಸುವ ದೃಷ್ಯವೊಂದು ಬಿಟ್ಟರೆ ಮತ್ತೇನೂ ವಿಶೇಷವಿಲ್ಲ " ವೆಂದು, ತಿಳಿಸಿದ್ದು ನಂತರ ಯೋಚಿಸಿದಾಗ ಸರಿಯೆಂದು ತೋರಿತು. ೩೫ ಡಾಲರ್ ಪ್ರವೇಶಧನ, ಸ್ವಲ್ಪ ಜಾಸ್ತಿಯೆಂದು ನಮಗನ್ನಿಸಿತು. ಅಲ್ಲದೆ ನಾವಿಳಿದುಕೊಂಡಿದ್ದು, ೪೦ ಮಹಡಿಯ, ’ಹಯಟ್ ರೀಜೆನ್ಸಿ ಹೋಟೆಲ್’, ನ ೧೯ ನೆಯ ಮಹಡಿಯಮೇಲಿನಿಂದ ಕೆಳಗಿನ ನೋಟವನ್ನು ನೋಡಲು ತುಂಬಾ ಚೆನ್ನ. ಸಿಯಾಟಲ್ ನಗರದ ನೋಟ ಎಷ್ಟು ಅದ್ಭುತವಾಗಿದೆ. ಅದು ಒಮ್ಮೆ ಹಳ್ಳಿಯಂತೆ, ಒಮ್ಮೊಮ್ಮೆ ಭಾರಿ-ನಗರದಂತೆ ನಮಗೆ ತೊರುತ್ತಿತ್ತು. ಸುಮಾರು ೩೦ ಮೈಲಿ ದೂರದ ಪರಿಸರಗಳು, ಮಂಕುಕವಿದ ವಾತಾವರಣಗಳಿರದಿದ್ದರೆ ನಿಚ್ಚಳವಾಗಿ ಕಾಣಿಸುತ್ತವೆ !

ಹೆಚ್ಚುಗಾರಿಕೆಯೆಂದರೆ, ವಾಶಿಂಗ್ಟನ್ ರಾಜ್ಯದ ಸಿಯಾಟಲ್, ನಗರದಲ್ಲಿ ಯಾವಾಗಲೂ ದಿನದ ಹವಾಮಾನದಲ್ಲಿ ವ್ಯತ್ಯಾಸ ಆಗುತ್ತಲೇ ಇರುತ್ತದೆ. ಯಾವಾಗ ಮಳೆ, ಯಾವಾಗ ಹೊಂಬಿಸಿಲು ತಿಳಿಯುವುದೇ ಕಷ್ಟ. ಎಲ್ಲರೂ ಪ್ರತಿದಿನ ಹವಮಾನದ ಬಗ್ಗೆ ಸ್ವಲ್ಪ ಸಮಯವಾದರೂ ಮಾತುಕತೆ ನಡೆಸುತ್ತಲೇ ಇರುತ್ತಾರೆ !

ಈ ನಗರದಲ್ಲಿ ’ಸ್ಟಾರ್ ಬಕ್’ ಕಾಫೀ ಕಂಪನಿಯ ಕಾಫಿಯ ಪರಿಮಳ ನಗರದ ಯಾವ ಭಾಗಕ್ಕೆ ಹೋದರೂ ನಮ್ಮನ್ನು ಬಿಡುವುದಿಲ್ಲ. ಸಿಯಾಟಲ್ ವಿಮಾನ ನಿಲ್ದಾಣ, ಮಾರುಕಟ್ಟೆಯ ಪ್ರದೇಶಗಳು, ಸಾರ್ವಜನಿಕ ಸ್ಥಳಗಳು, ಕೊನೆಗೆ ’ ಸ್ಪೇಸ್ ನೀಡಲ್’ ನ ಕೆಳ ಮಾಳಿಗೆಯಲ್ಲೂ ನಿಮಗೆ ’ಸ್ಟಾರ್ ಬಕ್’ ಸ್ವಾಗತವಿದ್ದೇಯಿರುತ್ತದೆ.