ಸಿರಿನಾಡು

ಸಿರಿನಾಡು

ಕವನ

ಕರುನಾಡಿನ ಗುಡಿಯಲ್ಲಿ

ಶ್ರೀಗಂಧದ ಘಮದಲ್ಲಿ

ಶೃಂಗಗಳ ಸಾಲಿನಲಿ

ಹಸಿರಿನ ತೋರಣವು.

 

ಕನ್ನಡ ನುಡಿಯಲ್ಲಿ

ಮಾಧುರ್ಯದ ಸ್ವರದಲ್ಲಿ

ಮುತ್ತಿನ ಮಣಿಮಾಲೆ

ಕನ್ನಡದ ಅಕ್ಷರವು.

 

ತಲಕಾಡಿನ ಕಾವೇರಿಯಲಿ

ಅಂತರ್ಜಲದ ಉಸಿರಲ್ಲಿ

ಬಿತ್ತಿದ ಬೆಳಸಿಯಲಿ......

ತನುವಿಗೆ ಚೈತನ್ಯವು......

 

ಜೋಗದ ಜಲಪಾತ

ನಾಡಿನೆಲ್ಲಡೆ ವಿದ್ಯುದ್ದೀಪ

ವೀರಾಗ್ರಣಿಯರ ನಾಡಿದು

ಶಾರದಾಂಭೆಯ ಅಭಯವು.

 

ಸರ್ವಜ್ಞ, ಬಸವಣ್ಣನವರು

ದಾಸವರೇಣ್ಯರ ಅನುಭವದಲ್ಲಿ

ಸಂಸ್ಕಾರದ ಸಾರದಲಿ....

ಸಂಸ್ಕೃತಿಯ ಗೋಪುರವು.

 

-ವೀಣಾ ಕೃಷ್ಣಮೂರ್ತಿ, ದಾವಣಗೆರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್