ಸಿಹಿ ಗೆಣಸಿನ ಮಿಲ್ಕ್ ಶೇಕ್

ಸಿಹಿ ಗೆಣಸಿನ ಮಿಲ್ಕ್ ಶೇಕ್

ಬೇಕಿರುವ ಸಾಮಗ್ರಿ

ಸಿಪ್ಪೆ ತೆಗೆದು ಬೇಯಿಸಿ ಮಸೆದ ಸಿಹಿ ಗೆಣಸು ೧ ಕಪ್, ಹಾಲು ೨ ಕಪ್, ಸಕ್ಕರೆ ೧/೨ ಕಪ್, ಏಲಕ್ಕಿ ಪುಡಿ ೧/೨ ಚಮಚ.

ತಯಾರಿಸುವ ವಿಧಾನ

ಮಸೆದ ಸಿಹಿ ಗೆಣಸಿಗೆ ಏಲಕ್ಕಿ ಪುಡಿ, ಸಕ್ಕರೆ ಸೇರಿಸಿ ನುಣ್ಣಗೆ ರುಬ್ಬಿ. ಈ ಮಿಶ್ರಣಕ್ಕೆ ಹಾಲು ಸೇರಿಸಿ ಕಲಕಿದರೆ ಸಿಹಿ ಗೆಣಸಿನ ಸವಿಯಾದ ಮಿಲ್ಕ್ ಶೇಕ್ ತಯಾರು.

- ಸಹನಾ ಕಾಂತಬೈಲು, ಬಾಲಂಬಿ