ಸಿಹಿ ಗೋಧಿ ರೊಟ್ಟಿ
ಬೇಕಿರುವ ಸಾಮಗ್ರಿ
ಗೋಧಿ ಕಾಳು ೧ ಕಪ್, ಸಿಹಿಗೆ ಬೇಕಾದಷ್ಟು ಬೆಲ್ಲ, ಕಾಯಿ ತುರಿ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ ಅಥವಾ ತುಪ್ಪ
ತಯಾರಿಸುವ ವಿಧಾನ
ಮೊದಲಿಗೆ ಗೋಧಿಯನ್ನು ೧-೨ ಗಂಟೆ ನೆನೆಸಿ. ಹೆಚ್ಚು ಮೆದುವಾಗುವುದು ಬೇಡ. ನೆನೆದ ಮೇಲೆ ಅದಕ್ಕೆ ಬೆಲ್ಲ ಮತ್ತು ಉಪ್ಪು ಸೇರಿಸಿ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿರಿ. ನಯವಾಗಿ ರುಬ್ಬ ಬಾರದು. ಗೋಧಿ ತುಂಡು ಕೈಗೆ ಸಿಗುವಂತಿರಬೇಕು. ರುಬ್ಬಿದ ಬಳಿಕ ಅದನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಸ್ವಲ್ಪ ಕಾಯಿತುರಿಯನ್ನು ಸೇರಿಸಿ ಚೆನ್ನಾಗಿ ಕಲಸಿ. ನಂತರ ಒಂದು ಕಾವಲಿಯನ್ನು ಬಿಸಿಮಾಡಿ ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿ. ರುಬ್ಬಿದ ಮಿಶ್ರಣವನ್ನು ಕೈಯಿಂದಲೇ ಕಾವಲಿಯ ಮೇಲೆ ತಟ್ಟಬೇಕು. ಕಾಯುವಾಗ ರೊಟ್ಟಿಯ ಮೇಲೆ ಸ್ವಲ್ಪ ತುಪ್ಪ ಹಾಕಿದರೆ ರುಚಿ ಮತ್ತು ಪರಿಮಳ ಚೆನ್ನಾಗಿರುತ್ತದೆ. ಚೆನ್ನಾಗಿ ಕಾದ ಬಳಿಕ ರೊಟ್ಟಿಯನ್ನು ಕಾವಲಿಯಿಂದ ತೆಗೆದು, ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ತಿನ್ನಲು ರುಚಿಯಾಗಿರುತ್ತದೆ.