ಸಿಹಿ - ಹುಳಿ ಚಟ್ನಿ

ಬೇಕಿರುವ ಸಾಮಗ್ರಿ
ಬೆಲ್ಲ ೧ ಕಪ್, ಹುಣಸೇ ಹುಳಿ ೧ ಕಪ್, ಖರ್ಜೂರ ೧ ಕಪ್, ನೀರು ೧೦-೧೨ ಕಪ್, ದೊಡ್ದ ಏಲಕ್ಕಿ (ಕಪ್ಪು ಏಲಕ್ಕಿ) ೪, ಶುಂಠಿ ಹುಡಿ ೨ ಚಮಚ, ಮೆಣಸಿನ ಹುಡಿ ಒಂದೂವರೆ ಚಮಚ, ಓಂ ಕಾಳು ೧ ಚಮಚ, ಬಿರಿಯಾನಿ ಎಲೆ ಅಥವಾ ಮಸಾಲಾ ಎಲೆ ೨, ಎಣ್ಣೆ ೨ ಚಮಚ, ಬಡೆಸೋಂಪು ೨ ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಒಂದು ದೊಡ್ಡ ಪಾತ್ರೆಯಲ್ಲಿ ಬೆಲ್ಲ, ಹುಣಸೆ, ಖರ್ಜೂರ, ಏಲಕ್ಕಿ, ಶುಂಠಿ ಹುಡಿ, ಮೆಣಸಿನ ಹುಡಿ, ಓಂ ಕಾಳು, ಮಸಾಲಾ ಎಲೆ, ಉಪ್ಪು ಮತ್ತು ನೀರು ಸೇರಿಸಿ ದೊಡ್ದ ಉರಿಯಲ್ಲಿ ೨೦-೨೫ ನಿಮಿಷ ಕುದಿಸಿರಿ. ಒಂದು ಸಣ್ಣ ಕಾವಲಿಯಲ್ಲಿ ಎಣ್ಣೆ ಬಿಸಿ ಮಾಡಿ ಬಡೆಸೋಂಪು ಸೇರಿಸಿ ಸಿಡಿಸಿ ಕುದಿಯುತ್ತಿರುವ ಚಟ್ನಿಗೆ ಸೇರಿಸಿ. ಮಿಶ್ರಣವನ್ನು ಜರಡಿಯಲ್ಲಿ ಸೋಸಿ. ತಣಿದ ಬಳಿಕ ಡಬ್ಬಿಯಲ್ಲಿ ತುಂಬಿಸಿ ಫ್ರಿಡ್ಜ್ ನಲ್ಲಿಟ್ಟರೆ ತಿಂಗಳುಗಟ್ಟಲೆ ಹಾಳಾಗುವುದಿಲ್ಲ.