ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ )- ೧೧

ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ )- ೧೧

ತಮ್ಮ  ಆಫೀಸು  ಸೇರಿದ  'ಡೀ  ಆಯ್ ಜೀ ಗಳು', ಸಹಯಕ ಕಮೀಶನರರನ್ನು ಕರೆಸಿ ಈಗಲೇ ಸುಮಾರು ೫೦ 'ನಂಬಿಕಸ್ತ' ಪೋಲೀಸರ ಯಾದಿ ತಯಾರಿಸಿ ಅವರ ಸಾಧನೆಗಳೊಂದಿಗೆ -ಅನುಭವ-ಅರ್ಹತೆಯ ಪಟ್ಟಿ ಮಾಡಿ ಕೊಡ್ವಂತೆ ಹೇಳಿದರು. ಅದಾಗಲೇ ಸಮಸ್ತ ಪೋಲೀಸರ ಅರ್ಹತೆ-ಅನುಭವ-ಸಾಧನೆ ಎಲ್ಲವನ್ನು 'ಗಣಕೀಕರಣ' ಮಾಡಿದ್ದರಿಂದ ಹತ್ತೇ ನಿಮಿಷದಲ್ಲಿ ೫೦ ಜನರ ಪಟ್ಟಿಯೊಂದಿಗೆ 'ಡೀ ಆಯ್ ಜೀ' ಆಫೀಸಿಗ್ ಬಂದರು ಸಹಾಯಕ ಕಮೀಷನರು, ಮತ್ತು  ಪಟ್ಟಿಯನ್ನ  'ಡೀ  ಆಯ್ ಜೀ' ಗಳ ಕೈಗೆ ಕೊಟ್ಟರು.. 

 

ಮೊದಲ  ಹೆಸರು ಹೆಡ್ ಕಾನ್ಸ್ಟೇಬಲ್ ಗುಂಡಣ್ಣ  ಹಿಂದೆ ಹಲ ಬಾರಿ ಖ್ಯಾತ ಕಳ್ಳರನ್ನ ಹಿಡಿದ ಮತ್ತು ಹಲ ಕೇಸುಗಳನ್ನ ಯೆಶಶ್ವಿಯಾಗ್ ನಿವಾರಿಸಿದ ಹೆಗ್ಗಳಿಕೆ. ಗುಂಡಣ್ಣನ ಫೋಟೋ ನೋಡಲಾಗಿ ಸ್ವಲ್ಪ ದಪ್ಪಕ್ಕೆ ಇದ್ದು 'ಡೊಳ್ಳು ಹೊಟ್ಟೆ' ಕಾಣ್ತಿತ್ತು, ವಯ್ಯನ್ನ  ಕೆಲ್ಸಕ್ಕಕಿದ್ರೆ ಅದ್ಯಾವ್ಗ್ ಮುಗಿಯುತ್ತೋ:)) ಇನ್ನಸ್ಟು ಮಾಹಿತಿ ನೋಡಲು, ಈಗಲೂ ಸ್ವಂತ ಮನೆ ಇಲ್ಲ, ಇಬ್ರೆ ಮಕ್ಕಳು, ಯಾವದೇ ಲಂಚ ರುಶುವತ್ತಿನ ಆಪಾದನೆ ಇಲ್ಲ. ಒಹ್ ತರಹದ್ದವ್ರೆ ಬೇಕು ನಮಗೆ, ಇವ್ನಿರ್ಲಿ, ಮುಂದಿನ ವ್ಯಕ್ತಿ ಕಾನ್ಸ್ಟೇಬಲ್ ಬೆಟ್ಟಪ್ಪ, ನೋಡೋಕ್ ಒಳ್ಳೆ ಕಲ್ಲು ಬಂಡೆ ಹಾಗಿದ್ದ ಬೆಟ್ಟಪ್ಪ ಪೋಗದಸ್ಟ್ ಮೀಸೆ ಬಿಟ್ಟು ಭಲೇ ಟೀ  ವಿ ಯಿಂದ ಫೋಟೋಗೆ ಪೋಸ್ ಕೊಟ್ಟಿದ್ದ ನೋಡೋಕ್ ಭಯನ್ಕರವಾಗ್ ಕಾಣ್ತಾನೆ ಇವನೂ ಇರ್ಲಿ, ನಂತರದ್ದು  ಕಾನ್ಸ್ತೆಬಳು ನಾರಾಯಣ0ದು      ವಿವರ ನೋಡಲಾಗಿ, ತುಂಬಾ ಸಿಂಪಲ್ಲಗ್  ಕಾಣೋ  ' ಸಣಕಲ ಕಡ್ಡಿ' ಹಾಗ್ ಇರೋ ಈ ವ್ಯ ಅದೆಂಗ್ ಪೋಲಿಸ್ ಆದ:)) ನಕ್ಕು ವಿವರ ನೋಡಲು ಭಲೇ ಚುರುಕು  , ರಾತ್ರಿ ಕಾರ್ಯಾಚರಣೆಗೆ ಸೂಕ್ತ, ಮಾಹಿತಿ ಕಲೆ ಹಾಕೋದ್ರಲ್ಲಿ ಖ್ಯಾತಿ, ಯಾವದೇ ಆಪಾದನೆ ಇಲ್ಲ, ಪರವಾಗಿಲ್ಲಾ ಇರ್ಲಿ, ಆಮೇಲೆ ಕಾನ್ಸ್ತೆಬಲು ಕರಿಯಪ್ಪ ಫೋಟೋ ನೋಡಲಾಗ್  ತಕ್ಕುದಾಗ್ ಎಣೆ ಗೆಮ್ಪು ಇದ್ದ ಈ ಯಪ್ಪಂಗೆ ಕರಿಯಪ್ಪ ಅಂತ ಹೆಸರು:)) ವಿವರ ರನ್ನಿಂಗ್  ಶೂಟಿಂಗ್ ನಲ್ಲಿಪದಕ, ಚಾಣಾಕ್ಷ,ಸ್ವಲ್ಪ ಎಣ್ಣೆ  ಚಟ:)೦

 

ಅದರೂ ನಂಬಿಕಸ್ತ ಸ್ಸರಿ ಸ್ಸರಿ ಇರಲಿ 'ಲಾಯಕ್ಕಗವ್ನೆ'.. ಹೀಗೆ ಪಟ್ಟಿಯಲ್ಲಿದ್ದ ಎಲ್ಲರೂ ಕೆಲ್ಸಕ್ಕೆ ತಕ್ಕುದಾದವ್ರು ಅಂತ ಶರಾ ಬರೆದು ಅವ್ರೆಲ್ಲರ್ಗೂ ಈಗಲೇ ಬರ ಹೇಳು, ಇವತ್ತು 'ರಾತ್ರಿ ಪೂರ' ಅವ್ರಿಗ್ ಟ್ರೇನಿಂಗ ಕೊಡಿ, ಬೆಳಗ್ಗೆಯೇ ಎಲ್ಲರ್ನೂ ಮಪ್ತೀಗ್ ಹಾಕ್ಸಿ ವಾಕೀ ಟಾಕಿ ಕೊಟ್ಟು, 'ಕುರ್ಚಿ ಸುಳಿವು' ಎಲ್ಲೇ ಸಿಕ್ಕರೂ ತಕ್ಷಣ ತಡ ಮಾಡದೆ ತಿಳಿಸಬೇಕೆಂದು ಹೇಳಿ, ಉದಾಸೀನ, ಉಡಾಪೆ ಸಲ್ಲದು.ಬೆಂಗಳೂರಿನ ಪಕ್ಕದ ಎಲ್ಲ ಹಳ್ಳಿಗಳಿಗೂ 'ಬಸಲ್ಲಿ ಸಾಮನ್ಯರಂತೆ' ಹೋಗಿ -ಬಂದು ನಂಗೆ ಕ್ಶನ್ ಕ್ಷಣದ ಸುದ್ಧಿ  ತಿಳಿಸ್ಬೇಕ್ ತಾ-ಮು ಗಳು ನನ್ನೇ ನಂಬಿಕೊಂಡು ಜವಾಬ್ಧಾರಿ ವಹಿಸವ್ರೆ ನೀವೆಲ್ಲ ನನ್ನ ಮಾತು ಉಳಿಸಿಕೊಡಿ..

 

ಹೊರಡಿ ಎಂದರು.. ತಕ್ಷಣವೇ ಎಲ್ಲ ೫೦ ಜನಕ್ಕೂ ಸುದ್ಧಿ ಕಳ್ಸಿ ಕಳ್ಸಾಯ್ತು. ರಾತ್ರಿ ಪೂರ ಡ್ಯೂಟಿ ಮಾಡ್ 'ಸುಸ್ತಾಗ್'  ಬೆಳಗೆ ಬಂದು ಮಲಕ್ಕೊಂಡಿದ್ದ  ಗುಂಡಣ್ಣ ಅವ್ರಿಗ್, ಹೆಂಡ್ತಿ ಬಂದು ರ್ರೀ ರ್ರೀ 'ಕಮೀಷನರ ಆಫೀಸಿಂದ' ಫೋನ್ ಏನೋ 'ರಹಸ್ಯ ಮಾಹ್ತಿ' ಅಂತೆ ಬೇಗ ಹೋಗ್ ಫೋನ್ ಎತ್ತಿ  ಮಾತಾಡಿ, ಸಕ್ಕರೆ ನಿದ್ದೆಯಲ್ಲಿದ್ದು ಜೊಲ್ಲು ಸುರಿಸುತ್ತ ಮಲಗಿದ್ದ ಗುಂಡಣ್ಣ ಅವ್ರಿಗ್ ಕಮೀಷನರ ಆಫೀಸಿಂದ ಫೋನ್ ಎಂದ ಕೂಡಲೇ ಸಕ್ಕರೆ-ಕಹಿ ಯಾಗ ಏನಪ್ಪಾ ಬೆಳಗೆ ಗ್ರಹಚಾರ? ಯಾವ್ ತಪ್ಪು ಮಾಡಿಲ್ಲವಲ್ಲ? ಯಾರಾದ್ರೂ ನಂಗೆ 'ಅಗ್ದವ್ರೂ' ಮೂಗರ್ಜಿ ಹಾಕಿದರ? ನಿವೃತ್ತಿ ಆಗೊಕ್ ಇನ್ನು 'ಹತ್ತು ವರ್ಷ' ಇದೆ ಈಗಲೇ ಹೀಗಾದ್ರೆ ಹೆಂಗ್ ಶಿವ್ನೇ? ನೆನೆ ಧಿಕ್ಕು ಅಂತ ಎದ್ದು ಲಗುಬಗೆಯಿಂದ ಹೋಗಲು, 'ಸಡಿಲಾಗಿದ್ದ ಲುಂಗಿ' ಕಾಲಿನ ಬೆರಳಿಗ್ ಸುತ್ತಿ ತೊಡರಿ ಎಡವ್ ಮಕಾಡೆ  ಬಿದ್ದು ಮುಖ ಕಿವಿಚಿದ್ರೂ   'ನೋವನ್ನು' ಲೆಕ್ಕಿಸದೆ ಫೋನೆಡೆಗೆ ಓಡಿದರು:))

 

ಫೋನ್ ಎತ್ತಿ ಮಾಮೂಲಿನಂತೆ ಅಟೆನ್ಸನ್ನಲ್ಲಿ   ನಿಂತು ಹೇಳಿದ್ರು -ಹ್ಹಲ್ಲೋ ನಾನು ಹೆಡ್ ಕಾನ್ಸ್ತೆಬಲು ಗುಂಡಣ್ಣ ಸ್ಸಾರ್ ನಮಸ್ಕಾರ , ಹ್ಹ ನಮಸ್ಕಾರ ನಾ ಕಮೀಷನರ   'ಸಹಾಯಕ' ಮಾತಾಡೋದು, ಈಗಲೇ ನೀವ್ ಆಫೀಸಿಗೆ ಬನ್ನಿ ,ಒಂದು 'ಮುಖ್ಯ' 'ರಹಸ್ಯ ಕೆಲಸವೊಂದರ' ಮೇಲೆ ನೀವ್  'ಒಂದೆಡೆ' ಹೋಗಬೇಕಿದೆ, ಈಗ್ಲ? ಲುಂಗೀಲಿ:) ರಹಸ್ಯ ಕೆಲಸ ಎನ್ಸ್ಸರ್ ಅದು? 'ನಿಮ ತಲೆ' ಅದ್ನ ಫೋನಲ್ಲಿ ಹೇಳೋಕಾಗಲ್ಲ ಮೊದ್ಲು ಆಫೀಸ್ಗ್ ಬನ್ನಿ  ಫೋನ್ ಕಟ್ತಯ್ತು.

 

ಫೋನ್ ಇಟ್ಟು ತಲೆ ಕೆರೆದುಕೊಳ್ಳುತ್ತಾ 'ಏನಿರಬಹುದು'? ಸಧ್ಯಕ್ಕೆ ನನ್ನ ಮೇಲೆ ಯಾವದೇ ಅಪಾದನೆ ಬಂದಿಲ್ಲ, ನಾನಾ ಕೆಲಸಕ್ಕೆ ತೊಂದ್ರೆ ಇಲ್ಲ, ಶಿವ್ನೇ ಕಾಪಾಡಿದೆ ನನ:)) 'ಲೇ ಇವ್ಕ್ಲೆ'  ನಾ ತುರ್ತಗ್ ಆಫೀಸ್ಗೆ ಹೋಗಬೇಕಿದೆ, ಗೆಜರ್ ಆನ್ ಇದ್ದೀಯ? ನಾ ತಯ್ಲೆಟ್ಗೆ  ಹೋಗ್ ಬರೋದ್ರೋಗ್ದೆ ನೀರ್ ರೆಡಿ ಮಾಡ್ ತಿಂಡಿ ಏನೂ ಬೇಡ ಅಲ್ಲೇ 'ಎಲ್ಲರ-ಏನಾರ'  ತಿಂತೀನಿ. ಹಲ್ಲುಜ್ಜಿ   ಬಿಸಿ ನೀರನ್ನ ಬಕ್ಕಿಟಿಗ್ ಹಾಕೊಂಡು 'ಅರ್ಜೆಂಟಿನ  ಸ್ನಾನ' ಮಾಡ್ ಹೊರಬಂದು, ಸಮವಸ್ತ್ರ ಹಾಕೊಂಡು ಟೋಪಿ ತೆಗೆದ್ಕೊಂಡು ಪತ್ನಿಗ್ ಹೇಳ್ದ್ರು ನಾ ಬರೋಕ್ 'ಇವತ್ತು ಲೇಟ್' ಆಗಬಹುದು ನೀ ಊಟ ಮಾಡ್ ಮಲ್ಕೊನ್ದಿರು.. 

 

ಹೆಂಡ್ತಿ ನಕ್ಕು ಹೇಳಿದಳು, ಇವತ್ತೇನು ಹೊಸ್ದಾಗ್ ನೀವ್ ಲೇಟ್ ಆಗ್ ಬರೋದು? ದಿನಾಲೂ ಅದೇ ರಾಗ ಅದೇ ಹಾಡು, ಆಯ್ತು ಹೋಗ್ಬನ್ನಿ, ನಿಮ್ಮ ಕೆಲ್ಸಕ್ಕೆ ಜಯ ಸಿಗಲಿ. ಗುಂಡಣ್ಣನಗೆ ಯಾವ್ದೋ 'ಯುದ್ಧಕ್ಕೆ' ಹೊರಟವನ ಯೋಧನ ಪತ್ನಿ 'ವಿಜಯ ತಿಲಕ'  ಇಟ್ಟು  ಕಳಿಸಿದಂಗೆ ಅನ್ಸ್ತು ಮನಸ್ಸು 'ಭಲೇ' ಖುಷಿಯ್ಯತು... ಅಂಗಳದಲ್ಲಿ ನಿಲ್ಲಿಸಿದ್ದ ತಮ್ಮ 'ವಾಹನ' ಸೈಕಲ್ಲಿನತ್ತ  ಧೃಸ್ಟಿ ಹಾಯ್ಸಿದ್ರು, ಅದ್ರಲ್ಲೋದ್ರೆ '೨೦೧೩ಕ್ಕೆನೆ ' ಆಫೀಸ್  ಮುಟ್ಟೋದು:)) ಆಟೋ ಹಿಡಿದ ಹೋದ್ರೆ ಆಯ್ತು.. ಹೋಗ್ತಿದ್ದ ಆಟೋದವರೆಲ್ಲ ಗುಂಡಣ್ಣನ 'ಎತ್ತಿದ ಕೈ' ನೋಡಿದ ಕೂಡಲೇ ದೂರದಿಂದಲೇ 'ದಿಕ್ಕಾಪಾಲಾಗ್' ಆಟೋ  ಓಡಿಸ್ಕಂಡ್ ಹೋಗ್ತಿದ್ರು:))

ಮತ್ತೆ ಇನ್ನೇನ್ ಮಾಡ್ತಾರೆ? ಬೆಳಗ್ಗೆ 'ಬೋಣಿ' ಇಲ್ಲದೆ ಆಟೋ ಹತ್ತೋ ಪೋಲಿಸರು 'ಪೈಸಾನು' ಕೊಡದೆ ಇಳಿದ್ ಹೋದರೆ  ಅವತ್ ಅಟೋದವ್ರಿಗ್ ದಿನ  ಪೂರ್ತಿ  'ದರಿದ್ರ': )) ಗುಂಡಣ್ಣನಗೆ ಗೊತ್ತಾತು, ಅವ್ರ್ಯಾಕ್  'ಭಲೇ' ಅರ್ಜೆಂಟ್ ನಲ್ಲಿದ್ದವ್ರಂತೆ ಓಡ ಹೋದರು ಅಂತ. ಹೀಗಾದ್ರೆ ನಾ ಅಫೀಸಿಗ್ ಹೋದಂಗೆನೆ, ಮೂಲೇಲ್ ಗೋಡೆ ಮರೆಗ್ ನಿಂತ್ರಯ್ತು, ಯಾವ್ದರ ಆಟೋ ಬಂದ್ರೆ 'ಧುತ್ತನೆ' ಮುಂದೊಗ್ ಕೈ ಹಾಕ್ ನಿಲ್ಸಿದ್ರೆ ಯಾವನು ತಾನೇ ನಿಲ್ಸಲ್ಲ? ಹ್ಹ ಹ್ಹ ನಂಗೂ ಆಯ್ಡಿಯಾ ಬರ್ತೆ ಕಣ್ರಲಾ, ಹೇಳ್ಕೊಂದ್ರು ಸ್ವಗತಕ್ಕೆ:))

 

'ಇಲಿಗ್' ಹೊಂಚ್  ಹಾಕ್ 'ಸದ್ದಿಲದೆ ಸುಳಿವ' ಕೊಡದೆ ಕುಳಿತ 'ಬೆಕ್ಕಂತೆ'  ಮೊಲೆ ಕೊನೇಲಿ ಗೋಡೆ ಹಿಂದೆ ನಿಂತಿದ್ದ 'ಗುಂಡಣ್ಣ' ಅವ್ರಿಗ್ ಒಂದು ಆಟೋ ಇತಲಾಗ್  ಬರ್ತಿರೋದ್  ಕೇಳಸ್ತು , ಆಟೋದಲ್ಲಿ  ಕುಳಿತ ಓಡಿಸ್ತಿದ್ದ  ಚಾಲಕ ರಾತ್ರಿ ಹಾಕಿದ  'ಎಣ್ಣೆ ನಿಶೆ' ಇನ್ನೂ ಇಳೀದೆ 'ಅರ್ದಮರ್ಧ 'ಕಣ್ಣು ತೆರೆದ ಮನೆಗೊಗ್ ಮಲ್ಕೊಬೇಕ್ ಅಂತ ಓಡ್ಸ್ತಿದ್ದ, ಕಣ್ ರೆಪ್ಪೆಗಲ್  ಬೇಡ ಬೇಡ ಅಂದ್ರೂ ಮುಕ್ಕಾಲ್ ಭಾಗ ಮುಚ್ಸಿರ್ಬೇಕಾದ್ರೆ ಧುತ್ತನೆ 'ಏನೋ' ಆಟೋಗೆ ಅಡ್ಡ ಬಂದಂತಾಯ್ತು, ಗಾಭಾರಿಯಾಗ್ ಕಂಟ್ರೋಲ್ ಮಾಡಲು ಆಗದೆ 'ಧಡ್ ' ಅಂತ ಗ್ಗುದ್ದಿದ್ದು ಆಯ್ತು. ನಿಶೆ ಇಳಿದು, ಕೈ ಕಾಲ್ ನಡ್ಗೊಕ್ ಶುರು ಆಯ್ತು

 

ಅಡ್ಡ ಬಂದ 'ಅದು ಏನು? ಅಂತ ಕೆಕರಿಸಿಕೊಂಡು ನೋಡ ಹೋದರೆ ಕೈ ಕಾಲು ಗಡ ಗಡ:))  'ಅದು' ಬೇರೇನೂ ಅಲ್ಲ, 'ಅವರು, ಅದೇರಿ ನಮ್ಮ ಗುಂಡಣ್ಣ ಅವ್ರು .ಬೆಳಗೆಯೇ   'ಹೊಗೊಗ್' ಪೋಲೀಸಪ್ಪಂಗೆ ಗುದ್ದಿವ್ನಿ ಇನ್ನು ನನ್ ಕಥೆ ಅಸ್ಟೇ, ತತ್ ಇವತ್ 'ಅದ್ಯಾವ್ ದರಿದ್ರದವನ ಮುಖ' ಎದ್ದು ನೋಡಿದೆನೋ:)) ಸ್ಸಾರ್ ಸ್ಸಾರ್ ತಪಾಯ್ತು ಸರ್ ನನ್ನ ಕ್ಷಮ್ಸಿ, ಅಲ್ಲಿ 'ಹೊಂಡ' ಇತ್ತು ನೋಡಿ, ಅದ್ನ ತಪ್ಸೋಕೋದೆ ಅಸ್ಟರಲ್ಲಿ ನೀವ್ ಬಂದ್ರಿ(ಅಪ್ಪಿ-ತಪ್ಪಿಯೂ ನೀವ್  ಅಡ್ಡ ಬಂದ್ರಿ ಅನ್ನಲಿಲ್ಲ :)) ಏನೋ ತಪಾಯ್ತು ಕ್ಸಂಸಿ ಸ್ಸಾರ್ ಧೈನ್ಯತೆಯಿಂದ ಬೇಡಿಕೊಳ್ತಿದ್ದ ಆಟೋದವನಿಗೆ ಹೇಳಿದ್ರು ಬಾ ಆಟೋ ಹತ್ತು ಸೀದಾ ಕಮೀಷನರ ಆಫೆಸಿಗ್ ಎಷ್ಟು ಸಾಧ್ಯವೋ ಅಸ್ಟು ಬೇಗ ವೇಗವಾಗಿ ಹೊರಡು ಅಂದ್ರು.. ಸಧ್ಯ ಏನೋ ಕೈ ಬೇಡಿ ತಪ್ಪಿಸ್ಕೊಂಡು ಹೊಗ್ಬೆಕ್ ಅನ್ಕಂಡಿದ್ದ ಆಟೋದವನಿಗ್ ಬಾಯ್- ಬಾಯ್ ಬಡ್ಕೋಲೋ ಹಾಗಾಯ್ತು, 'ಬೋಣಿ' ಇಲ್ಲ, ಇವರ್ಗೆ ಬೆಳಗೆಯೇ ಗುಡಿವ್ನಿ, ಅದೂ ಸಾಲದೇ ನನ್ನ ಬಿಡದೆ ಹೋಗ್ಲಿ ಆಆಓಓಓ ಕೇಳದೆ ನನ್ನನ ಕಮೀಷನರ ಆಫೀಸಿಗ್ ಬಾ ಅಂತವ್ರಲ್ಲ, ಶಿವ್ನೇ ನಾ ಕೆಟ್ಟೆ:)) ಅಲ್ಲಿ ನನ್ನ 'ಏರೋಪ್ಲೇನ್' ಹತ್ತಿಸೋದ್ ಖಾತ್ರಿ ,ಮೈಯಲ್ಲಿ ಒಮ್ಮೆ ಚಳಕ್ ಅಂತು -ಬೆವರು ಕಿತ್ಕೊಂಡ್ ಬಂತು. ಸ್ಸಾರ್ ಸ್ಸಾರ್ ಪ್ಲೀಜ್ ಬಿಟ್ಬಿಡಿ ಸ್ಸಾರ್ ಬೇಕಾದ್ರೆ ಅಂತ ಜೆಬಿಗ್ ಕೈ ಹಾಕ್  ರಾತ್ರಿ ಯಾರತ್ರನೋ 'ಓವರ್ ಮೀಟರ್' ನೈಟ್ ಸರ್ವೀಸ್  ಅಂತೆಳಿ   ಕಿತ್ ಕೊಂಡಿದ್ದ ೧೦೦ರುಪಾಯ್  ಕೊಡಹೊದ.

 

೧೦೦ಣ್ಣೂ ಕಿತ್ತುಕೊಂಡು ಜೆಬಿಗಿತ್ತು, ಈಗ ನೆ ಬಿರ್ರನೆ ಕಮೀಷನರ ಆಫೀಸಿಗ್ ಹೊರಡು, ನಾ ನಿನ್ನ  ಅಲ್ಲಿ 'ಬೆಂಡ್ ಎತ್ತೊಕ್' ಕರ್ದೊಯ್ತಿಲ್ಲ, ನಾ 'ಅಲ್ಲಿಗೆ' ಹೋಗಬೇಕಿತ್ತು, ಯಾವ್ 'ಆಟೋದವನು' ನಿಲ್ಲಿಸಲಿಲ್ಲ, ಕೊನೆಗ್  ನಿ ನಿಲ್ಲಿಸ್ದೆ ಅಂದ್ರು ನಗ್ತಾ(ಆಟೋದವನೋ ನಾ ಎಲ್ಲಿ  ನಿಲ್ಸಿದೆ? ಅಡ್ಡ ಬಂದು ನೀವೇ ನಿಲ್ಸಿದ್ರಿ ಅನ್ಕಂಡ ಮನದಲ್ಲೇ ಪೆಚಾಗ್ತಾ  ) ತತ್ ರಾತ್ರಿ ದುಡ್ಮೆ ಹಾಳು, ಈಗ 'ಬೋಣಿ 'ಇಲ್ಲ, ಇವತ್ತು ಫುಲ್ 'ಲಾಟ್ರೀ ಹೊಡೆಯೋದೆ' ಖಾತ್ರಿ, ಸಧ್ಯಕ್ ನನ್ನ 'ಏರೋಪ್ಲೇನ್ ' ಹತ್ತಿಸ್ತಿಲ್ವಲ್ಲ ಅದ್ಕಾರ  'ಖುಷಿ' ಪಡ್ಬೇಕ್. 

ಬೆಂಗಳೂರಿನ ರಸ್ತೆಗಳೋ  ವಾಹನ ಸವಾರರಿಗೂ -ಪಾದಾಚರಿಗಳಿಗೂ  ಸವಾಲು:)) ಎಡ -ಬಲ-ಹಿಂದೆ-ಮುಂದೆ ಎಲ್ಲಿ ನೋಡಿದರೂ ಬರ್ರೆ ಸಿಗ್ನಲ್ಲು -ಸಿಗ್ನಲ್ಲು:)) ಕೆಂಬಣ್ಣದ  ಸಿಗ್ನಲ್ಲ್ಲು ಇದ್ದರೂ 'ಸುಮ್ಮನೆ' ಹಾರ್ನ್ ಇರೋದೇ ಹೊಡೆಯೋದ್ಕೆ ಅಂತ ವ್ಯರ್ಥ ಶಬ್ಧಮಾಲಿನ್ಯ   ಮಾಡೋವ್ರು, ಇನ್ನು ಕೆಲವರ್ಗೆ ತಾವ್ ಹಾರ್ನ್ ಹೊಡೆದರೆ ಮುಂದಿರುವವರು 'ಯಾರೋ' ಜಹಾಂಗೀರ್ ಸಾಬ್' ಬಂದವ್ರೇ ಅಂತ 'ಜಾಗ' ಬಿಡ್ತಾರೆ ಅನ್ನೋ ಹೆಮ್ಮೆ:))

 

ಅಂತೂ-ಇಂತೂ ಬೆಳಗ್ಗೆನೇ ಅರ್ಧ ಘಂಟೆ ಸಮಯ ಹಿಡೀತು ಗುಂಡಣ್ಣ ಗೆ ಆಫೀಸು ತಲುಪಲು, ಆಟೋದವನಿಗ್ ಬೆನ್ನ ಮೇಲೆ ಕೈ ಹಾಕ್ ಇನ್ಮೇಲೆ ಹುಶಾರ್ಗ್ ಓಡ್ಸು ಅಂತ ನಗ್ತಾ ಹೇಳ್ತಾ ಒಳ ಹೋದರು, ಆಟೋದವನೋ 'ಬೋಣಿ' ಎಕ್ಸ್ಪೆಕ್ಟ್  ಮಾಡಿರಲೇ ಇಲ್ಲ:)) ತತ್! ಮೊದ್ಲು ಮನೆಗೊಗ್ ತನ್ನೆರ್ ಸ್ನಾನ ಮಾಡ್ ತಿಂಡಿ ತಿಂದ ಮಲ್ಲ್ಕೊಬೇಕ್ ಇವತ್ತು ನನ್ನ 'ಟೈಮೆ' ಸರಿ ಇಲ್ಲ.. ಅಂತ ಆಟೋ ಸ್ಟಾರ್ಟ್ ಮಾಡ್ ಹೊರಟ. ಗುಂಡಣ್ಣ ಆಫೀಸಿನ ಹೊಳಹೊಕ್ಕು ಸಹಾಯಕ ಕಮೀಶನರಿಗೆ ವಂದಿಸಿ 'ಮುಖ' ನೋಡಲು ,ಅವರು ಹೇಳಿದರು ಒಂದು ಮುಖ್ಯವಾದ 'ಸೀಕ್ರೆಟ್ ಆಪರೇಶನ್' ಗಾಗ್ ನಿಮ್ಮನ್ ಆಯ್ಕೆ ಮಾಡಿದಿವ್, ಆಪರೇಷನ್ಗೆ ನೀವೇ 'ಹೆಡ್ಡು.'.

 

ಕುರ್ಚಿ ಸಂಬಂಧಿ ವಿವರಗಳನ್ನು ಕೊಟ್ಟು ಅದರ ಫೋಟೋ ಸಹಾ ಕೊಟ್ಟು ವಿಷ್ಯ ಗುತ್ತಗಿರ್ಬೇಕ್  ರಹಸ್ಯ ಕಾರ್ಯಾಚರಣೆ ಮಾಡ್ಬೇಕ್, ಕಳ್ಳರ ಕಿವಿಗ್ ಯಾವದೇ ಕರನ್ಕೂ ಆದ ಗೊತಗ್ಬರ್ದು ಅಂದ್ರು.. ಆಗಾಗ ಪ್ರೊಮೋಷನ್ ಸಿಗ್ತೆ, ಬಹುಮಾನ ಸಿಗ್ತೆ ಅಂತೆಲ್ಲ ಹೇಳಿ ಆಶೆ ಹುಟ್ಸಿ ಕೊನೆಗ್ 'ಕೈ ಎತ್ತಿದ್'  ನೆನಪಿತ್ತಲ್ಲ, ಅದ್ಕೆ 'ಅವ್ರ ' ಮುಖ ನೋಡಲು, ಅವ್ರು ಹೇಳಿದ್ರು, ಅದ್ನ ಹುಡುಕಿದರೆ ನಿಮ್ಮನ್ನ 'ಇನ್ಸ್ಪೆಕ್ಟರ್' ಮಾಡಬಹುದು, ಬಹುಮಾನವೂ ಇದೆ ಎಷ್ಟು ಗೊತ್ತೇ? ಕೋಟಿ.. ವಾಹ್ವ್: ಕೋಟಿ! ಇನ್ಸ್ಪೆಕ್ಟರು  ಯಪ್ಪಾ ಶಿವ್ನೇ' ನೀ ನನ್ ಮೇಲ  ಬೇಜಾನ್ 'ದಯೆ 'ತೋರ್ಸ್ತಿದಿಯ, ಇವ್ರೆಲಿದಂಗೆ ಆದ್ರೆ ನೀ 'ಸಹಕರಿಸ್ದ್ರೆ' ನಿಂಗೆ ಒಂದು ಘಂಟೆ ಕಟ್ಟುತೆನ್:)) ಇವತ್ತು ಸಂಜೆಯೇ ಬೆಂಗಳೂರಿನ ಪಕ್ಕದ ಕೆಲ ಹಳ್ಳಿಗಳನ್ನ ಬಸ್ಸಲ್ಲಿ ಹೋಗ್ ನೋಡ್ಕೊಂಡ್ ಬರ್ವ ಏರ್ಪಾಡು  ಮಾಡ್ಕಳಿ, ಬಸ್ಸಲ್ಲೇ ಹೋಗ್ಬೇಕು, ಚಕ್ಕಡಿ, ಎತ್ತಿನ ಗಾಡಿ ಆದರೂ ಪರವಾಗಿಲ್ಲ ಆದ್ರೆ ಪೋಲೀಸ್ ಗಾಡಿ ಮಾತ್ರ ಇಲ್ಲ.. ಸ್ಸರಿ ಸ್ಸಾರ್. ಹೊರ ಬಂದು ಹೆಂತಿಗ್ ಫೋನ್ ಮಾಡ್ ಹಿಂಗಿಂಗೆ ಒಂದು ಕೆಲಸ ಇದೆ ಮುಖ್ಯವಾದದ್ದು  ಅದ್ನ ನಾ ಯೆಶಶ್ವಿಯಗ್ ಮುಗ್ಸಿದ್ರೆ ಒಳ್ಳೆ 'ಭವಿಷ್ಯ 'ಇದೆ ಅಂದ,ಯಾವದೇ ಕಾರಣಕ್ಕೂ 'ಗುಟ್ಟು ರಟು' ಮಾಡಲಿಲ್ಲ, ಮಾಡಿದ್ರೆ 'ಅವ್ಳು' ಸುಮ್ನಿರಲ್ಲ ಎಲ್ಲರ್ಗೂ ಟಾಂ-ಟಾಮ್ ಮಾಡ್ತಾಳೆ ಮೊದ್ಲೇ ನಂಗೆ 'ಆಗದವರೂ ಬೇಜಾನ್' ಅವ್ರೆ, ಆಮೇಲ್ 'ಸುರ್-ಸುರ್ ಬತ್ತಿ  ಇಟ್ರೆ:)

 

ಮಜೆಸ್ತಿಕ್ಕಿಗೆ ಬಂದು ಬೆಂಗಳೊರಿನ ಸಮೆಪವಿರ್ವ 'ಬೋರನ ಊರಿಗ್' ಹೊರಟ ಗುಂಡಣ್ಣ, ಮೊದಲು 'ತಾನೊಬ್ಬನೇ ಹೋಗ್ ನೋಡಿಕೊಂಡು ಆಮೇಲೆ 'ದಂಡಿನೊಂದಿಗೆ ಧಾಳಿ ' ಮಾಡಲು:)  ಇತ್ತ ಮುನಿಯ ರೆಡಿ ಆಗ್ ಬಸ್ಸು ಸ್ತ್ಯಾನ್ದಿಗ್ ಬಂದು ಬಸ್ಸಿಗಾಗ್ ಕಾಯ್ತಿದ್ದ, ಜೇಬಲ್ಲಿ ಚಿಕ್ಕೀರಿನ್ ಕಾಡ್-ಬೇಡ್-ಆಶೆ ತೋರ್ಸಿ  ಇಸ್ಕೊಂಡಿದ್ದ(ಕಸ್ಕೊಂಡಿದ್ದ::))  ನೂರ ೫೦  ಇತ್ತಲ್ಲ, ಅದ್ನ ಮುಟ್ಟಿ ಮುಟಿ ನೋಡ್ತಾ  ಪಟ್ಟಣಕ್ಕೊದ್ಮೆಲ್ 'ಹುಷಾರ್' ಇರಬೇಕ್ 'ಕಣ್ಮುಚ್ ತೆರೆಯೋದ್ರೋಲ್ಗದೆ' ಹಣ ಲಪತಾಯ್ಸ್ತಾರೆ:) ಬಸ್ಸು ಬರಲು ತಡವಾಗ್ ಮನ್ಸಿಗ್ ಬೇಜಾರಾಗ್, ಅಲ್ಲಿಯೇ ಸಮೀಪದಲ್ಲಿದ 'ಬರಮನ ಗೂಡ್ ಅಂಗ್ಡಿಗ್'  ಹೋದ, ಬರ್ಮ ಇವನನ್ನ ನೋಡಿ 'ಗಣೇಶ' ಬೀಡಿ ಕೊಡ ಹೋದರೆ, ಅಡ್ಡಡ್ಡ ತಲೆ ಅಲ್ಲಾಡಿಸಿದ 'ಮುನಿಯ್' ಹೇಳಿದ, ಲೋ ಬರ್ಮಾ  ಆ ಗಣೇಶ ಬೇಡ, ಆ 'ಬ್ಲಾಕ್' ಸಿಗರೆಟ್ ಕೊಡು,ಇದ್ದುದರಲ್ಲಿ ಒಳ್ಳೆ ಡ್ರೆಸ್ ಹಾಕ್ ತಲೆಗ ಆಯಿಲ್ ಹಾಕೊಂಡು ಒಪವಾಗ್ ಬಾಚ್ಕೊಂಡು   ಬಂದು ಬಸ್ಸಿಗಾಗ್ ಕಾಯ್ತಿದ್ದ ಮುನಿಯನ್ನ ನೋಡಿದಾಗ, ಬರಮನಿಗೆ ಅನ್ಸ್ತು ನಾ ಕೊನೆದಗ್ 'ಮುನಿಯನ್ನ' ಇದೆ ತರಹ ಗೆಲುವಾಗ್ ಮತ್ತು ನೀಟ್ ಆಗ ನೋಡಿದ 'ಅವ್ನು'  ತನ್ನ ಹೆಂಡ್ತಿ 'ಚಿಕ್ಕೀರಿನ ನೋಡೋಕ್ 'ಹೋದ ದಿನ:)) ಇವ್ನಿಗ್ ಯಾವ್  'ಸಿರಿತನ್' ರಾತೋ-ರಾತ್ರಿ ಬಂತು? ಹೊಗೊಗ್ ಒಂದೊಂದು ೭ ರುಪಾಯ್ ಬಾಳೋ 'ಬ್ಲಾಕ್' ಸಿಗರೆಟ್ ಕೆಳ್ತಾವ್ನಲ್ಲ:)) ಏನ್ಲ ಮುನಿಯಾ 'ಲಾಟ್ರೀ -ಗೆಟ್ರೀ' ಹೋದೀತ ಹೆಂಗೆ? ಬ್ಲಾಕ್ ಅಂತ ಇದ್ದೀಯ?

 

 

ಹ್ಹೆ ಹ್ಹೆ ಹಂಗೇನಿಲ್ಲ ಕಾಣಲ ಬರ್ಮಾ, ಯಾವ್ ಲಾತರೀನು  ಹೊಡೆದಿಲ್ಲ, ನಮ ಸಂಬಂಧಿಕರೋಬ್ರು ಅವ್ರ ಮನೇಲ್ ಕೆಲಸ ಇದೆ ಬಾ ಮಾಡು ಒಳ್ಳೆ ಕಾಸು ಕೊಡ್ತೆನ್ ಅಂದ್ರು ಅದ್ಕೆ ಹೋಗ್ತಿವ್ನಿ, ' ಗಣೇಶನನ್ನ'  ಎಷ್ಟು ದಿನಾಂತ ಹೊಡಿಯೋಕಾಗ್ತೆ? ಸ್ವಲ್ಪ ನಾವೋನು ವಸಿ ನ್ನಗರ್ದೊರ್ ತರ್ಹ 'ಚೇಂಜ್ 'ಆಗಬೇಕಲ್ಲ ಅದ್ಕೆಯ 'ಬ್ಲಾಕ್', ಅದು ವಾಸ್ನೇನು ಅಸ್ಟೊಂದು ಬರಲ್ಲ, ಒಂಥರಾ ಸಖತಾಗಿರ್ತೆ(ಧೂಮಪಾನ ಆರೋಗ್ಯಕ್ಕೆ ಹಾನಿಕರ)ಎಂದ.. ಬರ್ಮ ಬ್ಲಾಕ್ ಒಂದನ್ನು ಕೊಟ್ಟು ಕಾಸು ಇಸ್ಕೊಂಡ.. ಅದ್ನ ಹಚ್ಚಿ ದೀರ್ಘ ಉಸಿರೆಳೆದು ಕೊಂಡು ' ಕಾರ್ಖಾನೆ ಚಿಮಣಿ' ಹೊರ ಹಾಕೋ ಹಾಗ ಬೂದು ಬಣದ  ಹೋಗೆ ಬಿಟ್ಟ. ಇನ್ಮೇಲೆ ಬರೇ 'ಬ್ಲಾಕೇ -ಬ್ಲಾಕು', ನನ್ನ ಜೀವನವೇ ಚೇಂಜ್ ಆಗ್ತೆ.. ಹಗಲುಗನಸು ಕಾಣ್ತಾ, ಸಿಗರೆಟ್ ಅದ್ಯಾವಾಗ್ 'ಮುಗೀತೋ' ಗೊತಗ್ಲೆ ಇಲ್ಲ. ಅದು ಕೈ ಬೆರಳ ಸುಟ್ 'ಚುರ್' ಅಂದಾಗಲೇ ಗೊತಾಗಿದ್:)) ಆಗಲೇ ಬಸ್ಸು ಬಂತು ನಾಲ್ಕೋ ಆರು ಜನ ಇದ್ರಸ್ತೆ  ನಗರಕ್ಕೆ ಹೊಗೊರ್, ದುಡಿಯೋರೆಲ್ಲ ಊರಲ್ಲಿ ಮೈ ಬಗ್ಸಿ ದುಡೀತಾರೆ, ಏನೋ ಮುನಿಯನ ತರಹದ್ ಶುಧ್ಹ ಸೋಮಾರಿಗಳು ನಗರಕ್ ಪೋಸ್ ಕೊಡೋಕ್ ಹೋಗ್ತಾರೆ:)) ಕಂಡಕ್ಟರ್ಗೆ  ಕಾಸು ಕೊಟ್ಟು  ಟಿಕೆಟ್ ಪಡೆದು ಕಣ್ಣು ಮುಚಿ ಕುಳಿತ, ಬೆಂಗಳೂರಲ್ಲಿ ತನಗೆ ಗೊತ್ತಿರೋ 'ಕಾರ್ಪೇಂಟರ್  ಅರ್ಮುಗಂ' ನನ್ನ   ಶಿವಾಜಿನಗರದಲ್ಲಿ ಹುಡುಕಿ ಅವಂಗೇ ಕುರ್ಚಿ ಬಗ್ಗೆ ಎಲ್ಲ ಹೇಳ್ವ,ಸಿ ಕಾಸು ಇಕ್ಕೊಂಡು ಅವಂಗೆ ಮಧ್ಯ ರಾತ್ರಿ ಬಂದು ಅದ್ನ ಎತ್ತಿಕೊಂಡು ಹೋಗೋಕ್  ಹೇಳ್ಬೇಕ್ ….

ಕಣ್ಣು ಮುಚ್ಚ್ಚಿ 'ಹಗಲುಗನಸು' ಕಾಣ್ತಾ ಮುನಿಯ 'ಅದೆಲ್ಲೋ' ಕಳೆದು ಹೋದ...

 

ಚಿತ್ರದ ಮೂಲ/ಸಂಗ್ರಹ : < http://www.biblepicturegallery.com/Pictures/Moneywar.htm

>

 

 

 

 

>>>>>>>>>>>> ಇಂಟರ್ವಲ್ J