ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ ) -೧೨

ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ ) -೧೨


ಬಸ್ಸು ಮಜೆಸ್ತಿಕ್ಕು ಸೇರಿ ಎಲ್ಲರೂ ಇಳಿದು ಮುನಿಯ ಮಾತ್ರ 'ಹಾಯಾಗಿ' ಮಲಗಿದ್ದ!..ನಿರ್ವಾಹಕ ಬಂದು ತಟ್ಟಿ ಎಬ್ಬಿಸಿ ಇಳಿಯಯ್ಯ ಎಂದ.ಒಹ್ ಇಸ್ತ್ ಬೇಗ ಬೆಂಗಳೂರು ಬಂತಾ? ಅಂತ ಸೋಜಿಗ ಪಡ್ತಾ ಮೆಜೆಸ್ಟಿಕ್ಕಿನ  ಒಳ ಬಂದು ಜೇಬಿಂದ ಒಂದು ನಾಣ್ಯ ತೆಗೆದು ಕಾಯಿನ್ಫೋನಿಗೆ ಹಾಕಿ 'ಕಾರ್ಪೇಂಟರ್  ಅರ್ಮುಗಂ' ಗೆ ಕಾಲ್ ಮಾಡಿ ಬಂದ ವಿಷ್ಯ ಹೇಳಿದ. ಅವನು ಮುನಿಯ ಎಲ್ಲಿಗೆಬರಬೇಕು ಎನ್ನುವ ಅದ್ದ್ರೆಸ್ಸುನೀಡಿದ.ಶಿವಾಜಿನಗರಕ್ಕೆ ಹೋಗುವ ಬಸ್ಸನ್ನುಅವರಿವರಿಂದ ಕೇಳಿ ಆ ಬಸು ನಿಲ್ಲುವ ಜಾಗದಲ್ಲಿ ಕಾಯ್ತಾ ನಿಂತ. .

೧೨೯ ನಂಬರಿನ ಬಸ್ಸು ಬಂದ ಕೂಡಲೇ  ಅಲ್ಲಿ ನಿಂತಿದ್ದ ಜನ ಎಗ್ಗ ಮಗ್ಗ ಯಾಕ್ತೀವ್ ಆಗಿ  ಸೀಟ್ ಹಿಡಿಯಲು ನಾ ತಾ ಅಂತ ಮಕ್ಕಳು-ವಯಸ್ಸದವ್ರೂ ಯಾರೊಬ್ಬರ ಬಗ್ಗೆ ಕೆರೆ  ಮಾಡದೆ  ತಳ್ಳಾಡುತ್ತಾ ಓಡ್ತಾ, 'ಮೆಲ್ಲಗೆ' ನಡೆದು ಹೋಗಿ ಸೀಟು ಹಿಡಿಯಬೇಕು ಎಂದಿದ್ದ  'ಮುನಿಯನನ್ನ' ನೂಕಿ ಬಕ್ಕ ಬಾರಲು ಬೀಲಿಸಿದರ್:)  ಬಿದ್ದ ಮುನಿಯನ ತುಳಿದುಕೊಂಡೇ  ಅವನ ಮೇಲೆ 'ಮತ್ತಸ್ತು' ಜನ ಬಿದ್ದಾಗ'ಮುನಿಯನಿಗೆ' ಪ್ರಾಣ ಹೋದಂತಾಯ್ತು:) ಅವರಿಗೆಲ್ಲ  ಸಹಸ್ರ ನಾಮಾರ್ಚನೆ ಮಾಡ್ತಾ ಬಸ್ಸೋಳು ಬಂದು ನಿಂತಾಗ  ಅನಿಸ್ತು: "ಈ ಜನಬೇರೆ ವಿಷಯಕ್ಕೆ ಹಿಂಗೆ 'ನಾ ಮುಂದು-ತಾ ಮುಂದು'  ಎಂದು ಓಡಿದ್ದರೆ- ದೇಶ ಅದೆಸ್ಟು ಚೆನ್ನಿರ್ತಿತ್ತು:)

ಬಸ್ಸು ಹೋಗ್ತಾ ಹೋಗ್ತಾ ಇನ್ನಸ್ಟು ಜನ ತುಂಬಿಕೊಂಡು ಭಾರತದ ಜನ ಸಂಖ್ಯೆಎಲ್ಲ  ಈ ಬಸ್ಸಲ್ಲೇ ಇದೆಯೋ ಎಂಬಂತಿತ್ತು!...  ಹೆಂಗೋ ನಿಂತಿದ್ದ ಮುನಿಯನ ಕಾಲಿಗೆ ಇನ್ನೊಬ್ಬನ ಕಾಲು ತಾಗಿದಾಗ, ಮುನಿಯ ತನ್ನ ಒಂದು ಕಾಲನ್ನು ಎತ್ತಿ ಪಕ್ಕಕ್ಕೆ ಇಡ ಹೋದ 'ಇದಕ್ಕೆ ಕಾಯ್ತಿದ್ದ' ಒಬ್ಬ ಒಂಟಿಗಾಲ  ಮೇಲೆ ಬ್ಯಾಲನ್ಸ್ ಮಾಡ್ತಾ ನಿಂತಿದ್ದವನು ' ಇದೆ ಚಾನ್ಸ್' ಅಂತ ತನ್ನ ಕಾಲನ್ನ ಅಲ್ಲಿ ಇಟ್ಟ:) ಪಾದವನ್ನ ಎತ್ತಿದ 'ತಪ್ಪಿಗೆ'  ಮೇಲಿನ ಕಂಬಿಯನ್ನ ಹಿಡಿದು  ನೇತಾಡ್ತಾ  ಒಂಟಿ ಗಾಲಲ್ಲೇ ಶಿವಾಜಿನಗರ ಗಂಟ  ಮುನಿಯ ಹೋಗಬೇಕಾಯ್ತು:(

ಈ ಕಷ್ಟ ನಸ್ಟ ಎಲ್ಲ ವನ್ನ 'ಸಮ್ಮಿಶ್ರ ಸರಕಾರದ ಮುಖ್ಯಸ್ತ'  ಅದೆಂಗೋ ತಡೆದುಕೊಂಡು ಇರೋ ಹಾಗೆ  ಮುನಿಯ ನಿಂತಿರಬೇಕಾದರೆ, 'ಅದ್ಯಾರೋ' ಇದ್ದಕ್ಕಿದ್ದ  ಹಾಗೆ ನನ್ನ 'ಮೊಬೈಲು' ಕಾಣಿಸ್ತಿಲ್ಲ ಯಾರೋ 'ಹೊಡೆದು' ಬಿಟ್ಟವ್ರೆ ನಿಲ್ಲಿಸಿ ಬಸ್ಸು ನಿಲ್ಲಿಸಿ ಎಂತ ಒಂದೇ ಸವನೆಅರಚೋಕೆ ಶುರು ಮಾಡಿದ:( ಕಳ್ಳ ಇದೆ ಬಸ್ಸಲ್ಲಿ ಇರಬೇಕು ಬಾಗಿಲು ಲಾಕ್ ಮಾಡಿ ಎಂದರೊಬ್ಬರು 'ಬೃಹಸ್ಪತಿಗಳು'! ಬಾಸು ಆಲ್ಲಿಯೇಸೈಡಿಗೆ  ಹಾಕಿ  ಆ ಕಳೆದ ಮೊಬೈಲಿಗಾಗಿ  ಎಲ್ಲರ ಕ್ಷಮೆ ಕೊರತ ಅವರ ಜೇಬುಗಳನ್ನ ಮುತ್ತಿ ನೋಡಾಯ್ತು, ಯಾರೊಬ್ಬರೂವಿರೋಧಿಸಲಿಲ್ಲ! ವಿರೋಧಿಸಿದರೆ 'ತಾವೇ' ಕಳ್ಳ ಎಂಬ ಪಟ್ಟ  ಸಿಕ್ಕರೆ?

ಯಾರೊಬ್ಬರ ಹತ್ತಿರವೂ ಅದು ಸಿಗದೇ ಇದ್ದಾಗ, ಮೊಬೈಲು ಕಳೆದುಕೊನ್ದವನನ್ನ ಸಂತೈಸಿ  ಎಲ್ಲರೂ ಹೇಳಿದರು, ನೀ ಆಗ್ಲೇನೋಡಬೇಕಿತ್ತು, ಕೂಗಬೇಕಿತ್ತು, ಅದನ್ನು ಎಗರಿಸಿದವನು 'ಎಲ್ಲೋ' ಇಳಿದು ಹೋಗಿರಬೇಕು, ಅದರ ಜೊತೆಗೆ ಬಸ್ಸಿನಲ್ಲಿ ಹೇಗೆಲ್ಲಜಾಗರೂಕರಾಗಿರಬೇಕು, ಹಿಂದೆ ತಮಗೆ ಏನಾಗಿತ್ತು, ಎಂದೆಲ್ಲ  ಹಳೆ ಪುರಾಣಗಳನ್ನು ಕೆಲವರು ಶುರು ಮಾಡಿದರು, ಇನ್ನು ಕೆಲವರುಜಾಗರೂಕರಾಗಿರುವುದರ ಬಗ್ಗೆ 'ಬಿಟ್ಟಿ' ಸಲಹೆ ಕೊಡಲು ಶುರು ಹಚ್ಕೊಂಡರು.

'ಮೊಬೈಲು' ಸಿಗದೇ ಕಂಗಾಲಾಗಿ ಪಿಚ್ ಆಗಿ ನಿಂತಿದ್ದ  ಆ ಮೊಬೈಲು ಕಳೆದು ಕೊಂದ ವ್ಯಕ್ತಿಯನ್ನ 'ಮೊಬೈಲು'  ಹೇಗೆ ಕಳೀತು ಎಂದುವಿಚಾರಿಸಲಾಗಿ ಅವನು ಹೇಳಿದ್ದು ಕೇಳಿ  ಎಲ್ಲರಿಗೂ 'ಅವಾ' ಮೇಲೆ ನಖ ಶಿಖಾಂತ  ಕೋಪ ಬಂತು, ಇವ್ನು ಸುಮ್ಮನೆ ನಮ್ಮ ಸಮಯ ವ್ಯರ್ಥಮಾಡಿದನಲ್ಲ, ಇವನ ಮನೆ ಹಾಳಾಗ:) ಎಂದು ಎಲ್ಲರೂ ಅವನಿಗೆ ಬಯ್ಯಲು ಶುರು ಹಚ್ಕೊಂಡ್ರು. ಹೌದು ಇಷ್ಟಕ್ಕೂ 'ಅವನು' ಹೇಳಿದ್ದು ಏನು?

ನೋಡಿ ಸ್ವಾಮೀ ನಾ ಮೊಬೈಲಿನಲ್ಲಿ  ಎಫ್ ಎಂ ರೇಡಿಯೋ  ಕೇಳುತ್ತಿದ್ದೆ  ಆಗ ಆ ಮೊಬೈಲು  ಅದೇಗೆ ಮಾಯವಾಯ್ತೋ ನಾ ಅರಿಯೆ? (ಮೆಜೆಸ್ಟಿಕ್ಕಿನಲ್ಲಿ ಅದೊಮ್ಮೆ ನನ್ನ ಬಸ್ಸಿನಲ್ಲಿ  ನನ್ನ ಕಣ್ಣೆದುರೇ ನಿಜವಾಗಿ ನಡೆದದ್ದು) ಆ ಉತ್ತರ ಕೇಳಿದವರೆಲ್ಲ 'ಅಲ್ಲಯ್ಯ' ದಡ್ಡ ಶಿಖಾಮಣಿ ಮೊಬೈಲಿನಲ್ಲಿ  ಎಫ್ ಎಂ ಕೆಳುತ್ತಿದ್ದೆನ್ ಅಂತೀಯ , ಅವನು ಮೊಬೈಲು ಎಗರಿಸಿ ಎಫ್ ಎಂ ನ ಹಾಡು ನಿಂತದ್ದು ನಿನ್ನ ತಲೇಗ್ ಬರಲಿಲ್ಲವ?ಸರಿ  ಹೋಯ್ತು ಬಿಡು :)(
 
ಕಷ್ಟ ಪಟ್ಟು  ಶಿವಾಜಿನಗರ ತಲುಪಿ ಅವರಿವರನ್ನ  ಕೇಳಿ 'ಕಾರ್ಪೇಂಟರ್  ಅರ್ಮುಗಂ' ನನ್ನ   ಶಿವಾಜಿನಗರದಲ್ಲಿ  ಗಲ್ಲಿಯೊಂದರಲ್ಲೀ ಹುಡುಕಿತನ್ನೆಲ್ಲ ಕಥೆ ಹೇಳಿ ಉಸ್ಸಪ್ಪ ಸಾಕಪ್ಪ ಈ ನಗರದ ಸಾಹ್ವಸ್ವ!  ಎಂದ:) ಹೆಂಗೋ ನಮ್ ಹಳ್ಳೀಲೇ ಖಾರ -ರೊಟ್ಟಿ ತಿಂದು ಶಿವ ನೀಮಡಗಿದಂಗೆ ಅಂತ ಇರಬಹುದು ಆದ್ರೆ ಈ ಹಾಳು ನಗರದ್ ದಾವಂತದ್  ಜೀವನವೇ ಬೇಡಪ್ಪ ಶಿವ್ನೇ ಎಂದ::( ಇವನ ಕಥೆ ಕೇಳಿ ಅರ್ಮುಗಂ ಬಿದ್ದು ಬಿದ್ದು ನಕ್ಕ. ಆಮೇಲೆ ಆ ಕುರ್ಚಿ ಬಗ್ಗೆ ಎಲ್ಲ ಹೇಳಿ  ಅದು ತನ್ನ ಊರಲ್ಲಿದ್ದರೆ ಸೇಫ್ ಅಲ್ಲ  ಅದರ ಮೇಲೆ ಯಾರದಾರ 'ವಕ್ರಧೃಸ್ಟಿ ' ಬೀಳ್ವ ಮುಂಚೆ ಸಾಗಿಸಬೇಕು ಎಂದ...

ಮುನಿಯ ಹೇಳಿದ ಎಲ್ಲವನ್ನು ಕೆಳಾದಮೇಲೆ ಅರ್ಮುಗಂ ಗೆ ಅನ್ನಿಸ್ತು 'ಈ ಬಡ್ಡಿ ಮಗ' ಮುನಿಯ ಅದ್ನ ಎಲ್ಲಿ0ದಲಾರ ಎತಾಕೊಂಡುಬಂದವ್ನ?  ಅದ್ನ ಕೊಂಡುಕೊಂಡು  ನಾ ಆಮೇಲೆ ಪೋಲೀಸರ 'ಅತಿಥಿಯಾಗಿ'  ಅವರು ನನ್ನನ  ಆ 'ಏರೋ ಪ್ಲೇನ್' ಹತ್ತಿಸಿ ಬಿಟ್ಟರೆ:)

ಮುನಿಯನೈಗೆ ಗೊತ್ತಾತು 'ಅರ್ಮಿಗಂ' ಮನದಲ್ಲಿ ಏನು ಆಂದೋಲನ ನಡೆಯುತ್ತಿದೆ ಅನ್ತ, ನಗತ್ ಹೇಳಿದ ನೋಡು ಅರ್ಮುಗಂ ಈ ವಿಷ್ಯನಂಗೆ ನಮ್ಮೊರವ್ರಿಗ್ ಬಿಟ್ರೆ ಬೇರೆ ಯಾರ್ಗೂ ಗೊತ್ತಿಲ್ಲ,  ಮಜಬೂತಾದ ಆ ಕುರ್ಚೀನ  ನೀ ತೆಗೆದು ಕೊಂಡು ಯಾರ್ಗಾರ ಶ್ರೀಮಂತರಿಗೆಮಾರಿ ಒಳ್ಳೆ ಕಾಸು ಮಾಡಿಕೊಳ್ಳಬಹುದು. ಏನೋ  ನಂಗೆ 'ಕೊಂಚ'ಕಾಸು  ಸಿಗುತ್ತಲ್ಲ ಅನ್ತಸ್ಟೆಯ!

ಆ ಕುರ್ಚಿ ದೆಸೆಯಿಂದ ಖಂಡಿತವಾಗ್ಲೂನುವೆ  ಏನೂ ಪ್ರಾಬ್ಳಮು ಬರಲ್ಲ ಅಲ್ಲವೇ?  ಏನೋ ನಿನ್ನಮ್ಬಿಕೊಂಡು  ಅದ್ನ ತೆಗೆದುಕೊಳ್ಳೋಕೆಒಪ್ತಿದೀನ್, ಆದ್ರೆ ಒಂದು ಷರತ್ತು  ಅದ್ನ ನಾ ಕಣ್ಣಾರೆ  ನೋಡಿ ಇಷ್ಟ ಆದ್ರೆ ಮಾತ್ರ್.  ಸರೀನಾ, ಎಲ್ಲಿ ನಾ ಒಳ್ಳೆ ಅಂದು ಬಿಡ್ತಾನೋ ಅಂತಯೋಚಿಸ್ತಿದ್ದ  ಮುನಿಯಂಗೆ 'ಅರ್ಮುಗಂ'ನ ಅ ಮಾತುಗಳಿಂದ  ಭಲೇ ಖುಷಿಯಾಗ  ಆಯ್ತು ಅದ್ಕೆನಂತೆ  ಸಂಜೆ ಬಸ್ಸಿಗ್ ಹೊರಟರೆ  ಅದ್ನನೋಡಿ ನೀ ರಾತ್ರಿ ಕೊನೆ ಬಸ್ಸಿಗ್ ವಾಪಾಸು ನಗರಕ್ ಬರಬಹುದು ಎಂದ. ಕೊಂಚ ಕಾಸಿದ್ರೆ  ಕೊಡನ್ನೋ ಹೊಟ್ಟೆ 'ಚುರುಗುಡುತ್ತಿದೆ',ಹಂಗೆ ಹೋಗಿ ಕೊಂಚ 'ಏನಾರ' ಹೊಟ್ಟೆಗ್ ಹಾಕ್ತೆನ್:)

ಅರ್ಮುಗಂ ಅದ್ನ ಅದ್ಯಾವಾಗಲೋ ನಿರೀಕ್ಷಿಸಿದ್ದ ಮುನಿಯನ  ಈ ಮಾತುಗಳನ್ನ!  ಅರ್ಮುಗಂ ನಗ್ತಾ ಜೇಬಿಂದ  ನೂರರ ಒಂದು ನೋಟನ್ನ ಮುನಿಯನಿಗೆ ಕೊಟ್ಟು ಸಾಗ ಹಾಕಿದ!  ಅಲ್ಲಿಂದ ನೇರ  ಶಿವಾಜಿನಗರದ  ಬಾರ್ ಒಂದರಲ್ಲಿ ಒಂದು ಲೋಕಲ್ ವಿಸ್ಕಿ ನ ನೀರ್ ಜೊತೆ ಬೆರಸಿಕುಡಿದು  ಅಲ್ಲೇ ಪಕ್ಕದ ಫೆಮಸ್ಸ್ ಮಾಂಸಹಾರಿ ಹೋಟೆಲಿಗೆ  ಹೋಗಿ  ಪರೋಟ ಸಮೇತ ಮಾಂಸಾಹಾರ ಊಟವನ್ನ 'ಬರಗೆಟ್ತವನ'ಹಾಗೆ  ಮಾಡಿ ಮುಗಿಸಿ -'ಡರ್ರ್'   ಅಂತ ತೇಗಿ 'ಬ್ಲಾಕ್  ಸಿಗಾರೆಟ್' ಒಂದನ್ನ ತೆಗೆದ್ಕೊಂದು 'ದಂ ಮಾರೋ ದಂ' ಪ್ರೋಗ್ರಾಮ್ ಶುರುಹಚ್ಕೊಂಡ):)
ಅಲ್ಲಿ ಇಲ್ಲಿ ಅಡ್ಡಾಡಿ ಸುಸ್ತಾಗಿ 'ಒಂದಪ' ನಿದ್ದೆ ಮಾಡುವ ಅಂತ ಅರ್ಮುಗಂ ಅಂಗಡಿಗ್ ಬ0ದು, ಅಲ್ಲೇ ಮೂಲೇಲಿ  ಪವಡಿಸಿದ..
ಹೊತ್ತು ನಾಲ್ಕು ಆದಾಗ  ಅರ್ಮುಗಂ ,ಮುನಿಯನನ್ನ  ತಟ್ಟಿ  ಎಬ್ಬಿಸಿದ,  ಹೊರ ಹೋಗಿ ಮುಖ ತೊಳೆದುಕೊಂಡು  ಒಂದು ತೀ ಕುಡಿದು  'ಫ್ರೆಶ್' ಆದಂಗೆ ಬಂದ  ಮುನಿಯನ ಜೊತೆಗೂಡಿ  ಶಿವಾಜಿನಗರದಿಂದ  ಮೆಜೆಸ್ತಿಕ್ಕೆಗೆ  ಅಲ್ಲಿಂದ  ಮುನಿಯನ ಹಳ್ಳಿಗೆ  ಹೊರಟರುಇಬ್ಬರೂ........ಶಿವಾಜಿನಗರದಿಂದ  ಮೆಜೆಸ್ತಿಕ್ಕೆಗೆ  ಹೋಗಬೇಕಾದರೆ  ಆ 'ಜನಸಂದಣಿಯಲ್ಲೇ' 'ಮುನ್ನುಗ್ಗಿ' ಸಾಹಸ ಮಾಡಿ ಮತ್ತು 'ಪರ್ಸು  -ವಾಚು  -ಫೋನ್' ಕಳೆದುಕೊಳ್ಳದೆ 'ಅದೇಗೆ' ಸೀಟು ಹಿಡಿಯಬೇಕು ಅಂತ  'ಅರ್ಮುಗಂ' ಮುನಿಯನಿಗೆ ತೋರಿಸಿದ- 'ಬಿಡಿಗಾಸಿನ' ಫೀಜು ಪಡೆಯದೇ:)

ಮೆಜೆಸ್ಟಿಕ್ಕಿಗೆ  ಹೋಗಿ ಹಳ್ಳಿಗ ಹೋಗೋ ಬಸು ಹತ್ತ ಹೋದ ಮುನಿಯನಿಗೆ ಅರ್ಮುಗಂ ಹೇಳಿದ, ಏನೋ ಮುನಿಯ  ಮನೆಗ್ ಏನೂತಗಲ್ಲಲ್ವೇನ್ಲ? ಆಗ್ಲೇ ಮುನಿಯನಿಗೆ ಹೊಳೆದದ್ದು 'ಒಹ್' ದೇವ್ರೇ  ನಂ ಮತೀಗ್ ಏನಾಗಿತ್ತು? ಇದ್ ಹೊಳೆದೇ ಇರಲಿಲ್ಲವೆ? ಬರವಾಗಚಿಕ್ಕೀರಿಗ್  ಹೇಳಿದೀನ್ ' ಹೊಸ ಸೀರೆ 'ತರ್ತೀನ್ ಅತ್ತು ಮಕ್ಕಳಿಗ ತಿಂಡಿ ತಿನಿಸು, ಮತ್ತೆ ಅರ್ಮುಗಮ್  ನಿಂದಲೇ ಕೊಂಚ ಕಾಸುಇಸ್ಕೊಂಡು ಹೆಂಡತಿಗೆ 'ಪೂಸಿ' ಹೊಡೆಯಲು ೩ ಮೊಳ ಮಲ್ಲಿಗೆ  ಹೂ ತೆಗೆದುಕೊಂಡು   ಮಕ್ಕಳಿಗೆ ಬೆಂಡು ಬತ್ತಾಸು  ಬದಲಿಗೆ ಬ್ರೆಡ್ಡು -ಬನ್ನು ಹಣ್ಣು ತೆಗೆದುಕೊಂಡ. ಇಬ್ಬರೂ ಬಸ್ಸು ಹತ್ತಿ ಕೂತರು.
ಮುನಿಯನ ಮನದಲ್ಲಿ  ದೇವ್ರೇ 'ಹೆಂಗಾರ' ಮಾಡಿ  ಈ 'ಅರ್ಮುಗಂ' ಆ ಕುರ್ಚೀನ ಕೊಂಡ್ಕೋ ಹಾಗ ಮಾಡಪ್ಪ  ಎಂದ. ಅರ್ಮುಗಂ ಗೆ  ಆಕುರ್ಚಿ ಹೆಂಗಿರಬಹುದು? ಎಸ್ತಕ್ಕೆ ತೆಗೆದ ಕೊಳ್ಳಬಹುದು?  ಎಸ್ತಕ್ಕೆ ಮಾರಬಹುದು? ಲಾಭ ಎಷ್ಟು ಬರಬಹುದು? ಎನ್ನುವ ಯೋಚನೆ:) ಬಸ್ಸುಊರು ತಲುಪಿ  ಬಸ್ಸಿಂದ ಮುನಿಯನ ಜೊತೆಗೆ ಕೆಳಗೆ ಇಳಿದ  'ಅರ್ಮುಗಂ' ನ ನೋಡಿ  ಬಸ್ಸು ಸ್ಟಾಂಡಿನ  ಕಟ್ಟೆ ಮೇಲೆ ಕುಳಿತ  ಹಾಳು  'ಹರಟೆ' ಕೊಚ್ಚುತ್ತ್ತಿದ್ದ  ಜನ ಒಮ್ಮೆ  ನೋಡಿ, ಒಹ್ ಈ ಮುನಿಯ ಈ ಊರವ್ರನ ಯಾಮಾರ್ಸಿ 'ಮಂಕು ಬೂದಿ ಎರಚಿ'  ಮನೆ ಹಾಳ್ಮಾಡಿದ್ದು ಅಲ್ದೆ  ಈಗ ಅದು ಸಾಲದು ಅಂತ  ಈಗ ನಗರದ ಅದ್ಯಾವನೋ  'ಗೂಬಾಲ್' ನ ಬೇರೆ  ಜೊತೆಗ  ಮಡಗಿಕೊಂಡು ಬಂದವೆ

ಅಂತ ಮುಸಿ-ಮುಸಿ  ನಕ್ಕರು:() ಮುನಿಯನಿಗೆ  ಅದು ಗೊತ್ತಾತು ಆದರೂ 'ರಾಜ ಟ್ಹೀವಿಯಿಂದ'  ನಡೆದು ಹೋಗ್ತಾ ಒಮ್ಮೆ ಅವ್ರೆಲ್ಲರತ್ರನೋಡ್ತಾ ಮನದಲ್ಲೇ ಹೇಳ್ಕೊಂಡ  'ಮಕ್ಳ' ಇರಿ ಇರಿ ನನ್ನೇ ಅಡ್ಕೊಂತೀರ? ನಿಮ್ಮಗಳಿಗೆ ಇನ್ನಿ ಸ್ವಲ್ಪವೇ ದಿನಗಳಲ್ ತೋರಿಸ್ತೀನ್ ಈಮುನಿಯ ಅಂದ್ರೆ ಏನು ಅಂತ? ಅರ್ಮುಗಂ ಗೆ ಮೊದಲು ಆ ಕುರ್ಚಿ ನೋಡೋ ಆತುರ, ಆದರೆ  ಮುನಿಯ ಮೊದಲು ನಮ್ಮನೆಗ್ ಹೋಗಿಕತ್ತಲಾದ ಮೇಲೆ  'ಅಲ್ಲಿಗ್'' ಹೋಗ ಅದ್ನ ನೋಡೋಣ, ಯಾರಗೂ ಗೊತ್ತಾಗೊಲ್ಲ ಎಂದ. ಮನೆಗ್ ಹೋಗ  ಹೆಂಡ್ತಿಗ್ ಹೂವು ಕೊಟ್ಟುಆತುರದಲ್ಲಿ ಬಂದೆ ಕಣಮ್ಮಿ, ನೆಕ್ಷ್ತ ಟೈಮು ತಪ್ಪದೆ ಸೀರೆ ತರ್ತೀನ್ ಎಂದ. ಅವ್ಳು ಅದ್ನ ಅದಾಗಲೇ ಊಹಿಸಿದ್ದಳು ಹೂ ತಂದ  ಗಂಡನ ಕೈಯಿಂದಲೇ  ಹೂ ಮುಡಿದು ಕೊಂಡು 'ನಾಚುತ್ತ'  ಹೊರ ನಡೆದಳು ?-ಎಲ್ಲರ್ಗೂ  ತೋರಿಸಬೇಕ್ಲ್ಲ ತನ್ನ ಗಂಡ ತನ್ನೆಸ್ಟು ಮುದ್ದು ಮಾಡ್ತವ್ನೆ ಅಂತ?:)

ಕೊಂಚ ಕತ್ತಲಾಗ್ ಅದಾಗಲೇ ಕುರ್ಚಿ ನೋಡಲು ತತ್ತರಿಸುತ್ತಿದ್ದ  ಅರ್ಮುಗಂ ಜೊತೆಗೂಡಿ  ಆ ಕುರ್ಚಿ ಇದ್ದ ಬಯಲು ಜಾಗದ ಪಕ್ಕದಪೊದೆಯತ್ತ ಹೋದರು. ಅಲ್ಲಿ ಕುರ್ಚಿ ಯಥಾ ಸ್ಥಾನದಲಿರ್ವದು  ಕಂಡು  ಸಮಾಧಾನವಾಯ್ತು.. ಅಸ್ಟರಲ್ಲಿ ಪಕ್ಕದಲ್ಲೇ ಉಸ್ಸ್ ಪಸ್ಸ್ ಅಂತಸದ್ದಾಗಲು ಹಾವೋ ಇನ್ನೇನೋ ಅಂತ ದಿಗಿಲಾಗಿ ಇಬ್ಬರೂ ಹವ್ವಾರಿ ದೂರ ಹರಿ ನಿಲ್ಲಲು, ಮೆಲ್ಲಗೆ ಪೊದೆಗಳ ನಡುವಿಂದ ಮೂರುಮನುಷ್ಯರ ತಲೆಗಳು ಕಾಣಿಸಿ ಪೂರ್ತ ಹತ್ತಿರ ಬಂದಾಗ ಗೊತ್ತಾತು ಆ 'ಮೂರು ತಲೆಗಲ '  ಒಡೆಯರು 'ನಾಣಿ-ಶೀನ-ಕರಿಯ' ಅಂತಾ :)

ಅವ್ರ ಮುಖ ನೋಡ್  ಇವ್ರು ಈ ಸಮಯದಲ ಇಲ್ಲಿಗ್ ಬರ್ಬರ್ದಿತು ಕೆಲಸ ಕೆಡಬಹುದು ಎಂಬ ಶಂಕೆ ಮನದಲ್ಲಿ ಮೂಡಿತು.  ನಾವ್ ಅಸ್ತುಸೀಕ್ರೆತಾಗ್  ಬಂದರೂ ಇವ್ರಿಗ್ ಗೊತ್ತಾತ? ಎನ್ನುವ ಆಲೋಚನೆಯೂ ಬಂತು. ಆದರೂ ಸಾವರಿಸಿಕೊಂಡು  ಹೇಳಿದ - ಥೂ ಹಾಳದವ್ರೆ!ನಾವು ಅಂತ ವಸಿ ಕೂಗ ಹೇಳೋಕ್ ಏನ್ಲ  ಬಾಯಿ ಸೀದು ಹೋಗಿತ್ತ? ಡಬ್ಬಾ ನನ್ ಮಕ್ಳಾ:)  ನೋಡ್ರಲ  ಇವರೇ ಅರ್ಮುಗಂ ಅಂತ ನಗರದಲ್ಲಿ 'ಕಾರುಪೇನ್ಟ್ರು' ಅಂದ. ಒಹ್ ಗೊತ್ತ ಬಿಡಲ ಅದೇ 'ಕಾರು ಪೇಂಟು' ಮಾಡ್ತಾರಲ್ಲ ಅವ್ರೆಯ? ಎಂದ ಕರಿಯನ ಮಾತು ತಡೆದುಶೀನ ಹೇಳಿದ -ಲೋ ಅವರಲ್ಲ ಬಿಡ್ ಮಗ, ಇವ್ರು ಕತ್ತಿಗೆನ್ ಕತ್ತರಿಸಿ ಕೆತ್ತಿ ಬಾಗ್ಲು, ಕುರ್ಚಿ ಮಾಡ್ತಾರೆ   ಉಳಿದವರು ಅವ್ನ ಮುಖ ನೋಡಲು'ಶೆನ್ನನಿಗೆ' ಬೊ ಎಮ್ಮೆಯಾಯ್ತು ತನ್ನ    'ಜೆನರಲ್  ನಾಲೆಜ್'  ಬಗ್ಗೆ.!  ಅದಾಗಲೇ ಮುನಿಯ ಬಂದ ಸುದ್ಧಿ ಕೇಳಿ  ತಮಗೆ ಹೇಳ್ದ ಕೇಳ್ದೆ'ಅದ್ಯಾವನ್ನೋ'  ಜೊತೆ  ಮಾಡಿಕೊಂಡು ಹೋಗ್ತವ್ನೆ ಅಂತ ಸಿಟ್ಟು ಸೆಡವೋ ಬಂದು  ಮೆತ್ತಗ್ ಆ ಪೋದೆಲ್ ಬಂದು ಅಡಗಿದ್ದರು"(

): ಅವರೆಲ್ಲ ಸಹಾಯದಿಂದ ಕುರ್ಚಿ ಮೇಲಿನ ಎಲೆ  ಎಲ್ಲ ತೆಗೆದ  ಅವ್ರು ತೋರ್ಸಿದ  ಆ ಕುರ್ಚೀನ ನೋಡಿ ಅರ್ಮುಗಂ ಗೆ ಅನ್ನಿಸ್ತು, 'ಎಸ್ತಾರ'ಆಗ್ಲಿ ಅದ್ನ ನಾ ಖರೀದಿಸ್ಲೆಬೇಕು,

ಈ 'ದಡ್ಡ ಮುನ್ದೆವ್ಕೆ'  ಅದ್ರ ಬೆಲೆ ಏನು ಗೊತ್ತು? ನಾ ಬರಿ 'ಕಟ್ಟಿಗೆ ನೋಡಿ' ಹೇಳ್ತೀನ್ ಅದೆಷ್ಟು ಬಾಳುತ್ತೆ ಅಂತ? ಕಡಮೆ ರೇಟಿಗ್ ಅದ್ನಇವರಿಂದ   ಕೊಂಡು  ಅದ್ನ ಯಾರ್ಗಾರ ಒಳ್ಳೆ ರೇಟಿಗ ಮಾರಬೇಕು.:)

ಹೇಗೆ ಏನೇನೋ' ಮನ್ಸಲ್ಲೇ ಮ0ಡಿಗೆ'  ತಿಂತಿದ್ದ  ಅರ್ಮುಗಂ  ಮುಖ ಅದ್ರ ಕಲ್ಪನೆ ಮಾತ್ರವಾಗ್ 'ವಿಧ-ವಿಧವಾದ್' ಬಣ್ಣಕ್ ಬದ್ಲಾಗ್ತಿತ್ತು, ಅವ್ನಆ ಹಾವ-ಭಾವ ನೋಡ್ ಮುನಿಯಂಗೆ ಗೊತ್ತಾತು  'ವ್ಯವಹಾರ' ಕುದ್ರೋ ಹಾಗೈತೆ:) ಒಳ್ಳೆ ರೇಟಿಗೆ ಜಮಾಯ್ಸಿ ಬಿಡುವ!ಎಷ್ಟುಸಿಗಬಹುದು? ೫ ಸಾವ್ರ? ಹತ್ತು? ೨೦ ಸಿಕ್ರೆ ಹೆಂಗೆ:) ೫೦ ಒಹ್ ದೇವ್ರೇ ನೀ ಕರುಣಮಯೀ:( ಮುನಿಯನ ಗೆಲುವಾದ ಮುಖ ನೋಡಿಕರಿಯ-ನಾಣಿ-ಶೀನರ ಮುಖವೂ ಪ್ರಸನ್ನವಾಗಿ ಅಲ್ಲೆಲ್ಲ '೧೦೦೦ ವ್ಯಾಟ್ಸ್' ಬೆಳಕು ಬಿತ್ತು:()

ಇದೆಲ್ಲ ಆಗ್ತಿರ್ಬೇಕಾರ, ಸಡನ್ನಾಗಿ ಎಚ್ಚೆತ್ತ  ಅರ್ಮುಗಂ 'ಈ ನನ್ಮಕ್ಕಳಿಗ್' ನನ್ನ ಆಲೋಚನೆ ಗೊತ್ತಗ್ಬರ್ದು ಅಂತ ಅನ್ಕಂಡು  ಒಮೆಕರಿಯ-ಮುನಿಯ-ನಾಣಿ-ಶೀನರ ಮುಖ ನೋಡಿ  'ಲೋಚಗುಟ್ಟಿದ', ಏನೋ ಆಗ್ತೆ 'ಎಸ್ಟೋ' ಸಿಗ್ತೆ  ಅಂತ ಬಾಯ್ ಜೊಲ್ಲು ಸುರಿಸ್ತ ನಿಂತಿದ್ದ ಆ ನಾಲ್ವರಿಗೆ ಅರ್ಮುಗಮ್ನ' ಲೋಚಗುಟ್ಟುವಿಕೆ' ಯಾವ್ದೋ 'ಅಪಶಕುನ' ಅನ್ಸ್ತು:()

ಕೈ ಚಾಚಿ ಬೀಸಿ 'ಕಪಾಳಕ್ಕೆ' ಚಟೀಲ್ ಅಂತ  ಹೊಡೆದನ್ಗಾಯ್ತು:(  'ಅರ್ಮುಗಮ್ನ' ಲೋಚಗುಟ್ಟುವಿಕೆಯ  ನೂರಾರು ಅರ್ಥವನ್ನ ಅವರೆಲ್ಲಮನದಲ್ಲೇ 'ಅರ್ಥೈಸಲು' ವಿಪಲ ಪ್ರಯತ್ನ ಮಾಡಿದರು! ಕೊನೆಗೆ ಅವನ ಮುಖವನ್ನೇ ಏನಿದ್ರ ಅರ್ಥ ಎಂಬಂತೆ ನೋಡಲು, ಅರ್ಮುಗಂಗಮ್ನ್ಹೀರ ಮಿಖ ಮಾಡಿ, ನೋಡಿ ಇದು ಮಾಮೂಲಿಕತ್ತಿಗೆಯಿಂದ ಮಾಡಿದ್ದು, ಕೆಲವೇ ದಿನಗಳಲ್ಲಿ ಹುಳು ಹಿಡಿಯುತ್ತೆ, ಅದ್ಕೆ ಇದ್ನಖರೀದ್ಸೋಕೆ ನಂಗೆ ಇಷ್ಟ ಇಲ್ಲ, ಅವ್ನ ಆ ಕತ್ಹೊರವಾದ!  ಮಾತುಗಳನ್ನ ಕೇಳಿ ಎಲ್ಲರ್ಗೂ ಕತ್ತಲ್ಲಲ್ಲಿ  'ಸಿಡಿಲು' ಬಡಿದನ್ಗಾಯ್ತು:)ನಾಣಿ-ಶೀನ-ಕರಿಯರಿಗೆ ಮೈ ಎಲ್ಲ ಉರಿದು ಹೋಯ್ತು, ತತ್ ಈ ದರಿದ್ರ ಕುರ್ಚೀಗಾಗ್  ನವದೆಸ್ಟು ಕಷ್ಟ ಪಟ್ಟಿವಿ  ಈಗ ನೋಡಿದರೆ ಈವಯ್ಯ ಒಂದು ಬತ್ತಾಸು ಕೊಡಲ್ಲ ಅಂತಾನಲ್ಲ:(  ಆ ಕೊಳ್ಳಿ ಮುನಿಯನ್ನ ನಂಬಿ ನಾವ್ ಹಾಲ್ದ್ವು ಅಂತ ಅಲವತ್ತುಕೊಂಡರು, ಅವರ್ನೆಲ್ಲ ಸಮಾಧಾನಮಾಡಿದ ಮುನಿಯ, ನೀವು 'ಬಂದದ್ದಕ್ಕೆಯ' ಹಿಂಗಗಿದ್ದು:( ನೀವು ಹೋಗಿ ನಾ ಅರ್ಮುಗಂ ಗೆ ಕಾಡಿ-ಬೇಡಿ ಕೊಂಚ ಕಾಸು ಇಸ್ಕೊಂಡ್ ಅದಮಾರ್ಟೀನಿ ನಿಮಗೂ ಪಾಲು ಕೊಡ್ತೆನ್ ಅಂದ(: )

ಅವರೆಲ್ಲ ಅವ್ನ ಮುಖವನ್ನೇ  ದೈನೇಸಿಯಾಗಿ ನೋಡಲು ಅವ್ರಿಗ್ ಹೋಗಲು ಹೇಳಿ ಅರ್ಮುಗಂ ನ ಪಕ್ಕಕ್ಕೆ ಕರೆದೊಯ್ದು  ಗುಟ್ಟಾಗಿಮಾತಾಡಿ  ಕೊನೆಗೆ ೩ಸಾವಿರಕ್ಕೆ ಒಪ್ಪಿಕೊಂಡ): ಆಗಲೇ ಜೇಬಿಂದ  ಫೋನು ತೆಗೆದು  ತನ್ನ ಬೆಂಗಳೊರಿನ ಸ್ನೇಹಿತನೋಬ್ಬನಿಗ್ ಫೋನ್ಮಾಡಿ, ಚಿಕ್ಕ ಗಾಡಿಯೊಂದನ್ನು ತರ ಹೇಳಿ ಆ ಗಾಡಿಗಾಗಿ ಕಾಯ್ತಕುಲಿತರು ಎಲ್ಲರೂ..  ಒಂದು ವರೆ ಘಂಟೆ ಆದ ಮೇಲೆ  ಆ ಗಾಡಿ ಬಂದುಅದರಲ್ಲಿ  ಕುರ್ಚಿಯನ್ನ 'ನಾಜೂಕಾಗಿ' ಹಾಕಿ, ಯಾರ್ಗೂಅನುಮಾನ ಬರದ ಹಾಗೆ  ಅದರ ಮೇಲೆ ಎಲ್ಲ 'ಹುಲ್ಲು ' ಹರಡಿ  ಮುಚ್ಚಿಟ್ಟರು..ಊರೊಳಗಿಂದ ಆ ಗಾಡಿ ಹೋಗಬೇಕಾದರೆ  ನೋಡಿದ ಜನ ಅದ್ರಲ್ಲಿ 'ಏನಿದೆ' ಎಂದು ಕೇಳಲು  ಅರ್ಮುಗಂ ಮುನಿಯನತ್ತ ನೋಡಿದ,ಮುನಿಯ ಬ್ಬಯ್ತೆರೆದು  ಏನಿಲ್ಲ ಇವ್ರು ನಂಗೆ ಗೊತ್ತಿರೊರೆಯ , ನೆನ್ನೆ ನಗರಕ್ ಹೋದಾಗ  ಅವರ ಹಸೀಗ್  ವಸಿ ಹುಲ್ಲು ಬೇಕಿತ್ತ್ಯು ಅಂದಿದ್ರುಅದ್ಕೆ ನಾನೂನುವೆ ಮತ್ತು  ಈ ನಾಣಿ ಶೀನ ಕರಿಯ ಎಲ್ಲ ಸೇರಿ ಬಯಲಲ್ಲಿ ಹುಲ್ಲು ಕೆತ್ತಿ  ಇದ್ರಲ್ಲಿ ಹಾಕಿ ಕಳಿಸ್ತಿದಿವ್ ಎಂದ... ಊರವರೆಲ್ಲಆಗ್ತಾ, 'ಈ  ಮುನಿಯ' ಬಲೆ 'ಅಇನಾತಿ' ಅಡ್ಡ ಕಸುಬಿ   ನಂ ಮಗ ಕೊನೆಗೂ 'ಹುಲ್ಲೂ' ಬಿಡೋಲ್ಲ ಅಂತಾನಲ್ಲ) ಅದನ್ನು ಕಾಸಿಗ್ಮಾರೋದ? ಶಿವನೆ ಇವ್ನು ಉದ್ಧಾರ ಆದಂಗೆಯ?  ಸ್ವಲ್ಪ ದೂರದವರೆಗೆ ಗಾಡಿಯಲ್ಲೇ ಹೋದ ನಾಲ್ವರೂ(ನಾಣಿ-ಶೀನ-ಕರಿಯ-ಮುನಿಯ)ಒಂದೆಡೆ ಗಾಡಿ ನಿಲ್ಲಿಸಿ ಅರ್ಮುಗಂ ಹತ್ತಿರ್ರ  'ಕಾಸು 'ಇಸ್ಕೊಂದು ಕೆಳಗಿಳಿದು ಟಾ - ಟಾ ಹೇಳಿದರು.

ಅರ್ಮುಗಂ ೫ ಸಾವಿರವನ  ಮುನಿಯಿಗೆ ಕೊಟ್ಟ ಗುಟ್ಟಾಗಿ, ಆದರೆ ಆ ಆಇನಾತಿ ಮುನಿಯ ತಲೆಯನ್ನ  ಓಡಿಸಿ, ನಾಣಿ-ಶೀನ-ಕರಿಯಂಗೆ ತಲಾ ೫೦೦ ಕೊಟ್ಟು, ಆ ಅರ್ಮುಗಂ ಕೊಟ್ಟಿದ್ದು ಬರೀ ೨ ಸಾವಿರ್ವೆ, ಸಧ್ಯ ಇಸ್ತಾರ್ ಅಕೊತ್ನಲ್ಲ, ಅವ್ನು ಅದು ಬೇಡವೇ ಬೇಡ ಅಂದ, ನಾನೇಕಾಡಿ ಬೇಡಿ ಕಾಲಿಗ್ ಬಿದ್ದು!  ಕೈ ಮುಗಿದು ಬೇಡಿ ಅವನನ್ನ  ಆ ಉರ್ಚಿ ಕೊಲ್ಲೋ ಹಾಗ ಮಾಡಿದೆಎಂದ. ಅವರಿಗೂ ಸಧ್ಯ ಅ ಕುರ್ಚಿ ತೊಲಗಿಕಾಸು ಸಿಕ್ರೆ ಸಾಕಪ್ಪ ಅನ್ಸಿತ್ತು, ಸಧ್ಯ ೫೦೦ ಸಿಕ್ಕಿತಲ್ಲ, ಇನ್ನು ಕಲ್ಲು ಕಾಳಪ್ಪನ  ಅಂಗ್ದೀಲ್ ಫುಲ್ಲು ಬಾಟಲಿ ಏರಿಸಿಕೊಂಡು ಬೇಯ್ಸಿದ್ ಮೀನ್ವ ತಿನ್ತಿದ್ರೆ ಅಹ ಏನ್ ಕೇಳ್ತೀರಾ ಆ ಸುಖ್ವ?:) ನಾಲವ್ರೂ ಒಂದೊಂದು ದಿಕ್ಕಿಗ್ ಚದುರಹೋದರು...

 ಗಾಡಿಯ ಮುಂದಿನ ಸೀಟ್ನಲ್ಲಿ  ಸ್ನೇಹಿತ -ಕಂ -ಚಾಲಕನ ಜೊತೆ ಕುಳಿತಿದ್ದ  ಅರ್ಮುಗಂ ಅದಾಗಲೇ 'ಆಕಾಶದಲ್ಲಿ'ಹಾರ್ತ ಹೋಗ್ತಿದ್ದ  ಕನಸುಗಳನ್ನಕಾಣ್ತಾ:) ಆ ಕುರ್ಚಿಮಾರಿ ತನಗೆ ಬರಬಹುದಾದ  ಬೇಜಾನ್ ಕಾಸಿನ ಬಗ್ಗೆ!.... ಸ್ವಲ್ಪ ದೂರ ಸ್ಪೀದಲ್ಲೇ ಹೋಗುತ್ತಿದ್ದ ಆ ಗಾಡಿ ದಡ್-  ಬಡ ಅಂತ  ಗಕ್ಕನೆ  ನಿಂತಿದು  ಯಾಕೋ ಅಂತ ಕಣ್ಣು ತೆರೆದು ನೋಡಿದ  ಅರ್ಮುಗಮ್ನಿಗೆ ಕಾಣಿಸಿದ 'ಒಬ್ಬ ವ್ಯಕ್ತಿ' ಸರಿಯಾಗಿ -ರಸ್ತೆ ಮಧ್ಯದಲ್ಲಿನಿಂತು ಅಡ್ಡಡ್ಡಲಾಗಿ ಕೈ ಆಡಿಸುತ್ತಿದ್ದ ಗಾಡಿ 'ನಿಲ್ಲಿಸಿ' ಎಂಬಂತೆ:) ಅದ್ಯಾಕೋ ಭಲೇ 'ಅಪಶಕುನದ' ಹಾಗೆ ಅನ್ಸ್ತು ಅರ್ಮುಗಂ ಗೆ ...ಅವನ ಆ'ಊಹೆ' ಸಂದೇಹ' ಸುಳ್ಳೂ ಆಗಿರಲಿಲ್ಲ?...................

'ಮುಂದೈತೆ ಮಾರಿ ಹಬ್ಬ' ......ಎಲ್ರಿಗುನೂವೆ................... ?
ಚಿತ್ರ ಮೂಲ: http://rvsueandcrew.wordpress.com/