ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ ) -೧೪
ಗುಂಡಣ್ಣ - ಎರಡೂ ಕಪಾಳಕ್ಕೆ ಕೊಟ್ಟ ಏಟುಗಳಿಗೆ ಮೈ ಎಲ್ಲಾ ತತ್ತರಿಸಿ, 'ಬೆಂಕಿ' ಮುನಿಯನ ಉದರ ಸೇರಿದ್ದ 'ಕಳ್ಳು' ಎಲ್ಲಾ, ಅಲ್ಲೇ 'ಕೆಳಗಡೆ' ಪ್ರವೇಶಿಸಿ ಕಾಲಗಳ ಮೂಲಕ 'ಧರೆ' ಮುಟ್ಟಿತು!!
ಗಡ- ಗಡಾ ನಡುಗುತ, ಸ್ಸಾರ್ ..ಸ್ಸಾರ್ ನನ್ ಬಿಟ್ ಬಿಡಿ ಸ್ಸಾರ್, ಏನೋ 'ವಸಿ' ಕಾಸು ಸಿಗುತ್ತೆ ಅಂತ, ಆ 'ಮಣ್ಣು' ತಿನ್ನೋ ಕೆಲಸ ಮಾಡ್ದೆ , ನಿಮ್ ದಮ್ಮಯ್ಯ ಅಂತೀನಿ, ನಾ 'ಮಕ್ಳು-ಮರಿ' ಇರ್ವವ, ಆ ಕುರ್ಚೀನ ನೀವೇ ಹೊಯ್ದ ಬಿಡಿ, ಆದ್ರೆ ನನ್ ಮಾತ್ರ ಬಿಟ್ ಬಿಡಿ ಸ್ಸಾರ್...
ಮುಚ್ಚೋ ಬಾಯ್ ......ರ್ರ್, !!
ಮಾಡೋದೆಲ್ಲ ಮಾಡಿ ಈಗ ಮಕ್ಳು-ಮರಿ ಮಣ್ಣು -ಮಸಿ, ಅಂತೆಲ್ಲ ಕಥೆ ಹೇಳ್ತೆಯ? ಆ ಕುರ್ಚಿ ಯಾರದು? ಅದ್ನ ಕದ್ದೊಯ್ದರೆ ಏನು ಶಿಕ್ಷೆ ಗೊತ್ತೆನ್ಲ? ಅದೂ ವಿಧಾನಸೌಧಕ್ಕೆ ಕನ್ನ ಹಾಕಿ ಕುರ್ಚಿ ಕದ್ದು ,ಇಲ್ಲಗ್ ತಂದು ಮಾರ್ತೀಯ 'ಮೂರ್' ಕಾಸಿಗೆ?
ಅದ್ಕೆ ನಿನ್ನ 'ಉರಿಗೆ' ಆಕ್ತಾರೆ, ಬುಟ್ ಬುದ್ಬೇಕಂತೆ!!
ಅಯ್ಯೋ ಸ್ಸಾರ್ ನಾ ಕದ್ದಿದ್ದು ನಿಜ, ಆದ್ರೆ ..ಆದ್ರೆ ಅದ್ನ ನಾ ಕದ್ದಿದ್ದು ಆ 'ಬಡಾ ಬೋರ' ನ ಮನೆಯಿಂದಲೇ ಹೊರತು, ನೀವೆಲಿದ ಹಾಗೆ 'ಇಧಾನ ಸವದ'ದಿಂದ ಅಲ್ಲ ಸ್ಸಾರ್ -ನನ್ನಂಬಿ ...
ಮುಚ್ಚೋ ಬಾಯ್ ಹಯ್ವಾನ್, ನಂಗೆ ಕಥೆ ಹೇಳ್ತೀಯ?
ನಿನಂತೋರ್ನ ನನ್ ಸರ್ವೀಸಲಿ 'ಅದೆಸ್ಟೋ' ಜನಾನ್ ನೋಡಿ, ಒದ್ದು ಹೊಳ ಹಾಕಿ 'ಕಂಬಿ' ಎಣಿಸೋ ಹಾಗ್ ಮಾಡಿದಿನಿ ಗೊತ್ತುಂಟೋ?
ಯಾವನ್ಲ ಅವ್ನು 'ಬಡಾ ಬೋರ'? ಅವ್ನು ನಿಂಜೊತೆ ಸೇರಿದ್ನೋ ಇದ್ನ ಕದಿಯೋ ಕೆಲಸದಲ್ಲಿ?
ಅಯ್ಯೋ ಅವ್ನು ನಮೂರ ''ಕೆಮ್ಮೀರಪ್ಪನ್' ಒಬ್ನೇ ಮಗ , ಒಳ್ಳೆ 'ಸಾಧು' ಮನುಷ್ಯ ಸ್ಸಾರ್, ಅದೊಂದಿನ ಅವ್ನು 'ಬಯಲು' ಕಡೆಯಿಂದ ಈ 'ಕುರ್ಚೀನ' ಹೊತ್ತು ತರೋದ್ನ ನಾ ನೋಡಿದೆ, ಅವ್ನ ಕೇಳ್ದಾಗ, ಇದು 'ಅಲ್ಲೆಲ್ಲೋ' ಬಿದ್ದಿತ್ತು, ಅದ್ಕೆ ಮನೆಗೆ ಹೊತ್ತೊಯ್ತಿದೀನ್, ಅಂದ, ಆಮೇಲೆ ಆದದ್ದ್ದೆಲ್ಲವನ್ನು 'ಗುಂಡಣ್ಣಗೆ' ಹೇಳಿದ ಮುನಿಯ..
ನೀ ಹೇಳಿದನ ನಾ ನಂಬಬೇಕ? ಕಲರ ಕಥೆ ಕೇಳಿ ಹಾಲದೊರೆ ಹೆಚ್ಚು!! ಇನ್ ನಾ ನಂಬ್ತೀನ,
ಅರ್ಮುಗಂ ನ ಸ್ನೇಹಿತನಿಗೆ ಹೇಳಿದ 'ಗುಂಡಣ್ಣ' ಏಯ್ ನೀ ,
ಆ ಮುನಿಯನ ಜೊತೆಗ್ ಹೋಗ್ ಆ ಬಡಾ ಬೋರನ್ನ ಮತ್ತು ಕರಿಯ-ನಾಣಿ-ಶೀನರನ್ನ ಇಲ್ ಕರ್ಕೊಂಡು ಬಾ..
ಬರ್ದಿದ್ರೆ ಎತ್ಕೊಂಡು - ಹೊತ್ಕೊಂಡು ಬನ್ನಿ...
ಅರ್ಮುಗಂ ನ ಜೊತೆ ಸೇರಿ ಆ ಗಾಡಿ ಹೊಳಗಡೆ ಕುಳಿತ ಗುಂಡಣ್ಣ , ತನ್ ವಯುಕ್ತಿಕ ಮೊಬೈಲ್ ನಿಂದ ಡೀ ಆಯಿ ಜೀ ಆಫೀಸಲಿ ಕೆಲಸ ಮಾಡ್ವ, 'ಟೈಪಿಸ್ಟ್ ಸುಂದರೀಗೆ' ಫೋನಾಯಿಸಿ, ಕುರ್ಚಿ ಸಿಕ್ಕ ಮಾಹಿತಿ ತಿಳ್ಸಿ, ಆದ್ರೆ ಅದ್ನ ಗುಟ್ಟಾಗಿ ಹೋಗಿ ಡೀ ಅಯಿ ಜೀ ಗೆ ಮಾತ್ರ ಹೇಳವಂತೆ ಹೇಳಿದ.. ಮುಂದೆ ತನಗೆ ಸಿಗಬಹುದಾದ ಬಹುಮಾನ, ಪ್ರೋಮೊಷನ್ನು ನೆನಸಿಕೊಂಡು ಕಲ್ಪಿಸಿಕೊಂಡು ಮುಕ್ದಲ್ ಕಳೆ ತಂದುಕೊಂಡ..
ಕಾಸೂ ಹೋಯ್ತು, ಕುರ್ಚಿ ಹೋಯ್ತು, ಜೊತೆಗೆ ಈಗ ಠಾಣೆಗೆ ಹೊಯ್ದು ಒದ್ದು ಹೊಳ ಹಾಕಿ 'ಥರ್ಡ್' ಡಿಗ್ರಿ 'ಆತಿಥ್ಯ' ಕೊಟ್ಟು ದುಬಾಯೀ ಏರೋ ಪ್ಲೇನು ಹತ್ತಿಸುವ 'ಊಹೆ' ಮಾತ್ರದಿಂದ, ಅರ್ಮುಗಂ ಮೈ ಮನ 'ಹಾಳು' ದೆವ್ವ ಹೊಕ್ಕಂತಾಯ್ತು :) ಆ ಮುನಿಯನ್ನ ನೆನೆಸಿಕೊಂಡು ಮೈ- ಮನ ಧಗ -ಧಗ ಉರಿಯಿತು, ಅಲ್ಲ ಕುರ್ಚಿ ಕದ್ದುಕೊಂಡು ಬಂದು, ಅದು ವಿಧಾನ ಸೌಧ ದಿಂದ ! ನನಗೆ 'ಯಾಮಾರ್ಸೀ' ಆ ಕುರ್ಚೀನ್ ನಂಗ್ ತಳ್ಳಿ ನನ್ನ 'ಬರ್ಬಾದ್' ಮಾಡಿದನಲ್ಲ ಆ ಹಾಳಾದ್ ಮುನಿಯ.. ಪ್ಚ್ಚ್ 'ಅನ್ದಾಲಮ್ಮ ' ಏನ್ ಕಾಪಾಡ್ ಎಂದ ಮನದಲ್ಲೇ!!!
ಮುನಿಯನಿಗೆ ಅರ್ಮುಗಂ ನ ಸ್ನೇಹಿತನ ಜೊತೆ ಊರೊಳು ಹೋಗಬೇಕಾದರೆ ಒಂದು ಬೊಂಬಾಟ್ ಐಡಿಯಾ ಬಂತು, ಇವನು ಹೆಚ್ಚ್ ಕಡಮೆ ತನ್ನಸ್ತೆ ಆಳು, ಅವ್ನ ಕಣ್ಣಿಗ್ 'ಮಣ್ಣು' ತೋರಿ ಓಡಿ ಹೋದರೆ ಹೆಂಗೆ?
ಸ್ಸಾರಿ ಯಾಕ್ ತಡ, ಮೆಲ್ಲಗೆ ಹಿಂದೆ ತಿರ್ಗಿ ನೋಡಲು ಮುನಿಯನ ಹಿಂದೆ ಎತ್ತಲ್ಲೋ ನೋಡ್ತಾ ಬರ್ತಿದ್ದ ಅರ್ಮುಗಂ ನ ಸ್ನೇಹಿತ ಕಂಡ , ಒಹ್ ಇದೆ ಸುಸಮಯ ಅಂತ ಕೆಳಗೆ ಬಗ್ಗಿ ಮಣ್ಣು ತೆಗೆದುಕೊಂಡು ಸರ್ರನೆ ಹಿಂದಕ್ಕೆ ತಿರ್ಗಿ ಮಣ್ಣು ತೂರಿದ..
ಆಗಲೇ ತನ್ನ ಕಾಲಿಗೆ ಚುಚಿದ 'ಮುಳ್ಳು' ಕಿತ್ತು ಎಸೆಯಲ್ಲೂ 'ಬಗ್ಗಿದ' ಅರ್ಮುಗಂ ಸ್ನೇಹಿತನ ತಲೆ ಮೇಲೆ ಮಣ್ಣು ಬಂದು ಬಿತ್ತು!!
ತಲೆ ಮೇಲೆ ಬಿದ್ದ ಮಣ್ಣು ನೋಡಿ ಅರ್ಮುಗಂ ಸ್ನೇಹಿತನಿಗೆ ಗೊತ್ತಾಯ್ತು ಈ ಮುನಿಯ ಕಣ್ಣಿಗ್ ಮಣ್ಣು ತೋರಿ 'ಎಸ್ಕೇಪ್' ಆಗೋ ಪ್ಲಾನ್ ಹಾಕಿದ್ದ ಅಂತಾ, ದೇವ್ರು 'ದೊಡ್ಡವನು' ಹೆಂಗೋ ನಾ ಮುಳ್ಳು ತೆಗೆಯೋಕ್ ಬಗ್ಗಿದ್ದು ಒಳ್ಳೆದಾಯ್ತು, ಎದ್ದು ಮುನಿಯನ ಕೆಳಗೆ 'ಡಬ್ಬಾಕಿ' ಪೆಕ ಪೆಕನೆ ಒದ್ದು, ಮಗನೆ ನಮಗೆ ಆ 'ಶನಿ' -ಪೀಡೆ ಕುರ್ಚೀನ ತಗುಲಾಕಿ ಕಾಸು ಇಸ್ಕೊಂಡು ಯಾಮರ್ಸಿದ್ದು ಅಲ್ದೆ, ಈಗ ಎಸ್ಕೇಪ್ ಆಗಿ ನಮಗೆ ಆ ಪೋಲೀಸಪ್ಪನ ಕೈಲಿ 'ಹೊಗೆ' ಹಾಕಿಸಬೇಕು ಅನ್ಕೊನ್ದೀಯ?
ಮುನಿಯನ ಎಬ್ಬಿಸಿ ಅವನ ಹೆಗಲ ಮೇಲೆ ಕೈ ಹಾಕಿಕೊಂಡು, ಊರೊಳು ಹೊರಟ... ಕೈ ಹಾಕಿದರೆ ಎಷ್ಟು 'ಸುರಕ್ಷತೆ' ಇರ್ತೆ ಅನ್ನೋ ಜ್ಞಾನವೂ ಅವನಿಗೆ ಬಂತು!!
ಕಾಳಪ್ಪನ ಕಳ್ಳು ಅಂಗಡೀಲಿ ನಡೆದ ಆ ಅಚಾನಕ 'ಮಲ್ಲ ಯುದ್ಧದಿಂದ' ಕಂಗಾಲಾಗಿ ಜೀವ ಉಳಿದರೆ ಸಾಕು ಅಂತ ಓಡಿ ಮನೆಗ್ ಬಂದು 'ಗಪ್ಪನೆ' ಬಿದ್ದುಕೊಂಡಿದ್ದ ಶೀನ -ನಾಣಿ- ಕರಿಯ ತಮ್ಮ ಹೆಂಡ್ತೀರಿಗೆ ಹೇಳಿದ್ರು ಯಾರು ಬಂದು ಕೇಳಿದರು ನಾ ಮನೇಲಿ 'ಇಲ್ಲ' ಅಂತ ಹೇಳು ಅಂತ..
ಮೊದಲು ಬೋರನ ಮನೆ ತಲುಪಿ, ಅಲ್ಲಿ ಬೀಡಿ- ಬಾಯಲ್ಲಿಟ್ಟು, ಕ್ವಯ್ಯಕ್- ಕ್ವಯ್ಯಕ್ ಅಂತ ಕೆಮ್ತಾ ಕೂತಿದ್ದ ಕೆಮ್ಮೀರಪ್ಪ ಈ ಆಗಂತುಕ, ಮತ್ತು ಮುನಿಯನ್ನ ನೋಡಿ, ಏನ್ಲ ಮುನಿಯ ಯಾರ್ಲಾ ಇವ್ರು:? ನಿಂಗ್ ನಮ್ ಮನೆ ತಾವ್ ಏನ್ ಕೆಲ್ದ್ಸ ಎಂದ...
ಅಣ್ಣ ಇವ್ರು ನಮಗೆ ಗೊತ್ತಿರೊರೆಯ, ನಗರದೊರು,, ವಸಿ ನಾವ್ ಬೋರನ ಹತ್ತಿರ ಮಾತಡೋದಿತ್ತಲ್ಲ, ಹೌದ? ಏನ್ ವಿಷ್ಯ? ಎಂತ? ಹೋಗೋಗಿ ಅಲ್ಲಿ ಹೊಳ ಅವ್ನೆ, ನಿಂಗೆ ಗೊತ್ತಲ್ಲ, ಆ ಕುರ್ಚಿ ಕಳೆದಂದಿನಿಂದ ಅವ್ನಿಗ್ ಊಟ ನಿದ್ರೆ ಯಾವ್ದೂ ಬೇಡವಾಗಿದೆ, ಸದಾ 'ಅದರದೇ' ಚಿಂತೆ..
ನೀವಾರ ಅವ್ನಿಗ್ ಬುದ್ಧಿ ಹೇಳಿ, ಆ ಹಾಳಾದ್ದು ಕುರ್ಚಿ ಅದೆಲ್ಲಿಂದ ಬಂತೋ ನಾ ಕಾಣೆ!! ಅದ್ರ ದೆಸೆಯಿಂದ ನಮ್ ಹುಡುಗ ಹಾಳಾಗ್ ಹೋದ, ಹುಟ್ತಂದಿನಿಂದ ಈ ಕುರ್ಚಿ ಬರೋ ಗಂಟ ನಾವ್ ನೆಲದ ಮೇಲೆ ಬಿದ್ದು -ಎದ್ದು ಬದುಕ್ತಿದ್ವು, ಈ ಹಾಳಾದು ಪೇಎದೆ ಕುರ್ಚಿ ಬಂತೇ -ಬಂತು, ಅವ್ನು ನೆಲದ ಮೇಲೆ ಕೂರಲೆ ಒಳ್ಳೆ ಅಂತಾನೆ, ಈಗ ಅವ್ನಿಗ್ 'ಕುರ್ಚೀನೆ' ಬೇಕಂತೆ..
ಅರ್ಮುಗಂ ಸ್ನೇಹಿತನಿಗೆ ಕಣ್ಣು ಸನ್ನೆ ಮಾಡಿ ,ಹೊಳ ಹೋಗಿ ನೋಡಲು ಅಲ್ಲ್ಲಿ ಮೂಲೇನೆ ನೋಡ್ತಾ 'ಅನ್ಯಮನಸ್ಕನಾಗಿ' ಕುಳಿತಿದ್ದ ಬಡಾ ಬೋರ, ಅವ್ನ ಹತಿರ ಹೋಗಿ ಲೋ ಬೋರ , ಬೋರ, ಎ ಹಾಳದೋನೆ ಬೋರ!! ಅದೇನ್ಲ ಅ ಮೊಳೆ ನೋಡ್ತಾ ಕುಳಿತೀಯೇ ? ಎನ್ನಲು
ಬೋರ ಧದಬಡಿ ಎದ್ದು ಹಾಗೆಯೇ ಬಡಬಡಿಸಿದ, ನನ್ನ ಕುರ್ಚಿ ನನ ಕುರ್ಚಿ:)
ಕುರ್ಚಿ ಬಗ್ಗೆ ಹೇಳೋಕೆನೆ ನಾವ್ ಬಂದಿದ್ದು
ಹಾ ಕುರ್ಚಿ ಸಿಕ್ತ?
ಎಲ್ಲಿ?
ಯಾವಾಗ?
ಯಾರು ಕದ್ದಿದ್ರು? ಎನ್ನಲು
ಅದ್ನ ವಿವ್ರ್ವಾಗ್ ಹೇಳ್ತೆನ್ ಈಗ ನೀ ನಂಜೊತೆ ಬಾ ಅಲ್ಲೋಗಿ ಮಾತಾಡುವ ಅಂದ...ಮುನಿಯ..
ಬೋರ ಹೊರ ಬಂದು ಅಪ್ಪಯ್ಯ -ನಾ ಈಗ ಊರೊಳಗೆ ಹೋಗ್ತಿವ್ನಿ, ಆಮೇಲ್ ಬತ್ತೀನಿ ಅಂದ.. ಯಾಕಲ? ಏನ್ಲ ಕೆಲಸ ಊರೊಳಗೆ ನಿಂಗೆ? ಮೊದ್ಲೇ ಕೆಲಸ ಇಲ್ಲ ಎನ್ತಾದ್ದು ಇಲ್ಲ, ಸುಮ್ನೆ ತಿರ್ಗಿ ಹಾಳಗೀಯೇ ಎನ್ನಲು,
ಮುನಿಯ ಮತ್ತು ಆಗಂತುಕನ ಕಡೆ ಕಣ್ಣು ಮಿಟುಕಿಸಿ ಹೊರ ನಡೆದ ಬೋರ..
ಏನ್ ಹುಡುಗರೋ ಏನೋ? ಹೆಲ್ಡ್ ಕೇಳೋಲ್ಲ, ತಂದೆ ಹಠ ಅಂತವೇ, ಬಡ್ದೆತ್ತಾವು, ಹಿರೀರ ಬಗೆ ಗೊರವ ಇಲ್ಲ ಭಯ ಬಕ್ತಿ ಅಂತ್ರೂ ಉಹೂ, ಕಾಲ ಕೆಟ್ ಹೋಯ್ತು !!
ನಾಣಿ -ಶೀನ- ಕರಿಯನ ಮನೆಗೆ ಹೋಗಿ ಕೇಳಲು ಅವ್ರು ಮನೆಗೆ ಬಂದಿಲ್ಲ , ಎಲೋಗ್ವರೋ ಯಾರಿಗ್ಗೊತ್ತು , ಅಲ್ಲೇ ಕಳ್ಳು ಅಂಗಡಿಲಿ ನೋಡಿ ಎಂದ ಯಾರೊಬ್ಬರ ಮಾತಿನಲ್ಲೂ 'ಸತ್ಯದ ಅಂಶ' ಕಾಣದೆ ಬೋರ ಸಂಶಯ ಪಟ್ಟು - ಸೀದಾ ಹೊಳ ಹೊಕ್ಕವನೇ ಅಲ್ಲಿ ಮೂಲೇಲಿ ಇವರ ಮಾತು ಕೇಳ್ತಾ ಮಲಗಿದ್ದ ಕರಿಯನ ದರ ದರ ಎಳೆದುಕೊಂಡು ಹೊರ ಬಂದ..
ಆಮೇಲೆ ನಾಣಿ ಶೀನನಿಗೂ ಅದೇ ರಿಪೀಟ್ ಆಯ್ತು..
ಅದಾಗಲೇ ದಾರೀಲಿ ತನ್ನ ಕುರ್ಚಿ ಕದ್ದ ಕಳ್ಳರು ಇವರೇ ಅಂತ ನಾಣಿ ಶೀನ ಕರಿಯನ ಬಗೆಗೆ ರಂಜಿತವಾಗಿ ಹೇಳಿದ್ದ ಈ ಕೊಳ್ಳಿ ಮುನಿಯ ಅಪ್ಪಿ ತಪ್ಪಿಯೂ ತಾನೇ ಆ ಪ್ಲಾನ್ ಮಾಡಿದ ಲೀಡರ್ ಅಂತ ಹೇಳಿರಲಿಲ್ಲ!!..
ನಾಣಿ-ಶೀನ- ಕರಿಯರನ್ನ ಆ ರೀತಿ ದರ ದರ ಎಳೆದ ಕೊಂಡ್ ಇವರು ಹೊರಡಲು ಅಣಿಯಾದಾಗ, ಅವ್ರ ಹೆಂಡತೀರು ಅಡ್ಡ ಬಂದು, ಎಂತಕ್ಕೆ ನಮ್ವ್ರ್ಣ ಕರ್ದೊಯ್ತಿರದು? ಅವರೇನು ಮಾಡಿದರ? ಎನ್ನಲು
ಮ್ಮೋ ಇವ್ರು ಯಾರು ಗೊತ್ತ? ಪೋಲೀಸು, ನಿಮ್ಮೆಜಮಾನ್ರು 'ಮುಕ್ಯಮಂತ್ರಿ' ಕುರ್ಚೀನ ಕದ್ದು ಹೊತ್ಕೊಂಡು ಬಂದವರೆ, ಅದ್ಕೆ ಅವರ್ನ ಟೆಶನಿಗೆ ಹೊಯ್ತವ್ರೆ ತಿಳೀತ?
ದಾರಿ ಬಿಡು, ಇಲ್ಲವಾದರೆ
ನಿಮ್ನೂ ಕರ್ದೊಯ್ಬೇಕಗ್ತೆ…
ಅಯ್ಯೋ ಶಿವನೆ!!
ನಮ್ಮೆಜಮಾನ್ರು ಅಂತ ಕೆಲಸ ಮಾಡೋರಲ್ಲ, ಯಾರೋ 'ತಾವ್' ಮಾಡಿ ಅವ್ರ ಮೇಲೆ ಅಪವಾದ ಮಾಡ್ತಾವ್ರೆ , ದಮ್ಮಯ್ಯ ಅನ್ತೀನ್ ಬಿಟ್ ಬಿಡಿ, ಬಿಟ್ ಬಿಡಿ ಎನ್ನಲು, ಮ್ಮೋ ಈಗೇನು ಕಾಲು ಬಿಟ್ಟು ಮೇಲೆ ಎದ್ದು , ನಮಗೆ ಹೋಗ ಬಿಡ್ತೀರೋ ಇಲ್ಲ ನಿಮ್ನೂ ಆ ಕುರ್ಚಿ ಕಳವ ಕೇಸಲ್ಲಿ ಟೇಶನ್ನಿಗೆ ಕರೆದೊಯ್ಬೇಕೆ?
ನಿಮವ್ರದ್ದು ಏನೂ ತಪ್ಪಿಲ್ಲ ಅಂದ್ರೆ ವಾಪಾಸ್ಸು ಕಲಿಸ್ತೀವಿ, ಅಂದು ನಾಣಿ ಶೀನ ಕರಿಯನ ಕರೆದುಕೊಂಡು ಬೋರನ ಜೊತೆಗೂಡಿ ಪೋಲೀಸು ಗುಂಡಣ್ಣ ಅರ್ಮುಗಂ ಇರ್ವೆಡೆ ಬಂದರು.
ಅಲ್ಲಿ ಬಂದ ಬಡ ಬೋರ ನ್ನಿಗ್ರ್ ಆ ಕುರ್ಚಿ ನೋಡಿ ಹಾಲು ಕುಡಿದಸ್ಟೇ ಸಂತೋಸ ಆಗಿ ಅದ್ನ ಕೈನಿಂದ ಮುಟ್ಟಿ ಅದ್ರ ಮೇಲೆ ಕೂರೋಕೋದ, -ಏಯ್ ಯಾವನೋ ನೀ ಹಳ್ಳಿ ಮುಕ್ಕ, ಅದೇನ್ ನಿಮ್ 'ಸಿಂಹಾಸನ' ಅನಕೊಂಡ?
ಅದು ಮುಕ್ಯಮಂತ್ರಿ ಕುರ್ಚಿ,
ಅದ್ನ ಕದ್ದಿದ್ದು ಅಲ್ದೆ, ನನ್ ಮುಂದೆಯೇ ಹತೊಕ್ ಹೋಗ್ತ್ಯೀಯ,
ನಿನ್ನ 'ಚಮಡಾ' ಸುಲ್ದು, ಹಗ್ಗಕ್ ಕಟ್ಟಿ ನೇತಾಕಿ
....ರ
..ಕಿ
.... ಸಿ
.... ಹೊಡೀಲಿಲ ಅಂದ್ರೆ ನಾ 'ಗುಂಡಣ್ಣ ಅಲ್ಲ' ಅಂತ ರೌದ್ರಾವೇಶದಿಂದ ಗುಡುಗಲು ,ಬೋರನಿಗೆ ೧-೨ ಎಲ್ಲಾ ಅಲ್ಲೇ..:೦
ತರಗುತ್ತುತ್ತಿದ್ದ ಬೋರನಿಗೆ ಅಸಲು ಇಲ್ಲಿ ಏನು ನಡೀತಿದೆ?
ಈ ಮೂವರು ಆಗಂತುಕರು ಯಾರು?
ಈ ಗಾಡಿ ಹುಲ್ಲು ಹೊಯ್ಯಲು ಬಂದಿದ್ದು, ಇಲ್ಲಿ ನಿ0ತದ್ದು, ಮುನಿಯನ ....ದಿದ ಕಪಾಳ, ನಾಣಿ ಶೀನ ಕರಿಯ ಗಡ ಗಡ ನಡುಗುತಿರೋದು ನೋಡಿ ಇಲ್ಲೇನೋ 'ಆಗಬಾರದ್ದು ಆಗಿದೆ' ನಡೆಯಬರದ್ದು ಏನೋ ನಡೆಯಲಿದೆ ನ ಏನೋ ತೊಂದ್ರೆಗ್ ತಗುಳಕಂಡೆ ..
ಅವ್ನು ವಾಸ್ತವಕ್ಕೆ ಬರೋದ್ರೊಳಗೆ
ನಾಣಿ ಶೀನ, ಕರಿಯನ ಮುನಿಯನ್ನ ಕೈ ಕಾಲಿಗ್ ಹಗ್ಗ ಕಟ್ಟಿ ಗಾಡಿ ಹೊಳಗೆ ಬಿಸಾಕಿದ್ದ್ ಅರ್ಮುಗಂ ಬಡ ಬೋರನ ಹೆಡೆ ಮುರಿ ಕಟ್ಟಿ ಗಾಡಿ ಹೊಳಗೆ ಎತ್ತಿ ಎಸೆದ..
ಬಿದ್ದ ಸ್ಪೀಡಿಗೆ, ಮುಖ ಕಿವ್ಚಿ, ಯೆಮ್ಮೋ ನಾ ಸತ್ತೆ ಎಂದ ಬೋರ,,,
ಅದಾಗಲೇ ಅಲ್ಲಿ ಬಿದ್ದಿದ್ದ ನಾಣಿ -ಶೀನ -ಕರಿಯ -ಮುನಿಯನ ಕಡೆಗೆ ನೋಡ್ತಾ, ಏನ್ರೋ ಇದೆಲ್ಲ?
ಅವ್ರು ಯಾರು?
ನಮ್ಮನ್ನೇಕೆ ಕೈ ಕಾಲು ಕಟ್ಟಿ ಈ ಗಾಡಿಗ್ ಹಾಕಿದರು?
ನಾವೆಲ್ಲಿಗ್ ಹೂಗ್ತಿದಿವ್?
ಯಾಕೆ?
ನಂಗೆ ಸುಳ್ಳು ಹೇಳಿ ಇಲ್ಲಿಗ್ ಕರ್ದು ತಂದು ಹಿಂಗಾ ಮಾಡೋದು ಧೋಖಾ?
ನಿಮ್ನ ಆ ದೇವ್ರು ಚಮಿಸೋಲ್ಲ..
ಬಾಯ್ ತೆರೆದ ಮುನಿಯ,
ಲೋ ಬೋರ ನನ್ನ ಚಮೀಸೋ, ಇದಕೆಲ ನಾನೇ ಕಾರಣ, ಆ ಕುರ್ಚೀನ ಅವತ್ತು ನೋಡಿ, ನಿಮ್ಮನೆಗ್ ಬಂದು ನೀ ಕೊಡಲ್ಲ ಅಂದಾಗ, ಈ ನಾಣಿ- ಶೀನ -ಕರಿಯನ ಜೊತೆಗೂಡಿ ನಾವೇ ಕದ್ದೊಯ್ದು, ಬಯಲಲ್ಲಿ ಅಡಗ್ಸಿಟ್ಟು ನಗರಕೊಗ್, ಅರ್ಮುಗಮ್ನ ಕಂಡು ಕುರ್ಚೀನ ತೋರ್ಸಿ ಮಾರಿ -ಕಾಸು ಇಸ್ಕೊಂಡೆವು, ಈಗ ಎ ಪೋಲೀಸಪ್ಪ ಅರ್ಮುಗಮ್ನ ಎಲ್ಲೋ ದಾರೀಲಿ ಅಡ್ಡ್ ಗಟ್ಟಿ ಕುರ್ಚಿ ನೋಡಿ ನಮೂರ್ಗೆ ಬಂದು ನಮನ ಹೊತ್ಕೊಂಡು ನಗರಕೆ ಟೆಶನಿಗೆ ಹೊಯ್ತವ್ನೆ...
ಏನು ಅದ್ನ ನೀವಾ ಕದ್ದದ್ದು?
ಅದ್ನ ಕಾಸಿಗ್ ಮಾರಿಕೊಂಡಿರೆನೋ?
ತತ್!! ಡಬ್ಬ ನನ್ ಮಕ್ಳ!!
ಈ ವಯ್ಯ ನಮ್ಮನ್ನ ಟೇಶನ್ನಿಗೆ ಕರ್ದೊಯ್ತವ್ನ?
ಲೋ ಅಲ್ಲಿ ನಮಗೇನು ರಾಜ್ಮರ್ಯಾದೆ ಸಿಗ್ತೆ ಅನ್ಕೊನ್ದೀಯೇ?
ಅಲ್ಲಿ ನಮ್ನ ಕೈ ಕಾಲು ಕಟ್ಟಿ ಹಗ್ಗಕೆ ನೇತು ಹಾಕಿ, ಚಮ್ಡಾ ಸುಲಿಯೋ ಹಾಗೆ ಹೊಡೆದು 'ಖಾರ' ಅರೆದು ಗಾಯಕ್ ಹಾಕಿ ....
ಅಬ್ಬಬ್, ನಿಲ್ಸೋ
ನೀ ಹೇಳೋದ್ನ ಕೇಳಿಯೇ ನಂಗೆ 'ಎದೆ' ನಿನ್ತಕಂಡನ್ಗಿದೆ-
ಎಂದ ಮುನಿಯ ಬೆವರುತ್ತ.. ."))))
--------------------------------------------
ಮುಂದಿನ ೨ ಭಾಗದಲ್ಲಿ ಕುರ್ಚಿ ಕಥೆ ಕೊನೆಯಾಗಲಿದೆ ... ...
ಚಿತ್ರ ಮೂಲ :
ಹಗ್ಗಕ್ಕೆ ನೇತು ಹಾಕಿದ ಮನುಷ್ಯ:
http://www.clipartof.com/gallery/clipart/failure_2.html
Comments
ಉ: ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ ...
ಉ: ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ ...
In reply to ಉ: ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ ... by venkatb83
ಉ: ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ ...