ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ... (ಹಾಸ್ಯ)-೭
'ಸಾಬರ ಹಾಜಿ' ಎದ್ದೋ-ಬಿದ್ದೋ ಅಂತ ಅಲ್ಲಲಿ ಬೀಳ್ತಾ-ಏಳ್ತಾ 'ಬೋರನ' ಮನೆ ಮುಂದೆ ಬಂದು ಬೋರ-ಬೋರ ಅಂತ ಒಂದೇ ಸವ್ನೆ ಬಿಟ್ಟು ಬಿಡದೆ ಕಿರುಚಿದ, ೨ ಕೈಯಿಂದ ನಾಯಿಗಳೆಡೆಗೆ 'ಕಲ್ಲು ತೂರೋದ್' ಮಾತ್ರ ನಿಲ್ಲಿಸಲಿಲ್ಲ:))... 'ಯಾವ್ ಕೆಲಸವನ್ನು ಮಾಡದೆ' ಅದಾಗಲೇ ಸ್ವಲ್ಪ ಹೊತ್ತು ಹಿಂದೆ 'ಹಿಟ್ಟು' ತಿಂದು ಹಾಯಗ್ ಚಾಪೆಲಿ ಅಡ್ಡ ಬಿದ್ದಿದ್ದ ಬೋರನಿಗೆ ;ಅದ್ಯಾರೋ ಖಳರು' ತನ್ನ ಕುರ್ಚೀನ 'ಪಟಾಯ್ಸಿ ಎತ್ಕೊಂಡ್' ಹೋದ ಹಾಗ್ ಕನಸು 'ಮಟ ಮಟ ಮಧ್ಯಾಹ್ನವೇ ' ಬಿದ್ದು ,ದಡಬಡಿಸಿ ಎದ್ದು 'ಆ ಕುರ್ಚೀನ;' ಗಟ್ಟಿಯಾಗ್ ಹಿಡಿದು ,ನಾ 'ಇದನ ಕೊಡಲ್ಲ-ಕೊಡಲ್ಲ' ಅಂತ ಹೇಳ್ದ.
ಬ್ಬೋರ- ಥೂ ಹಾಳಾದವ್ನೆ ಬ್ಬೋರ, ನಿನ್ ಮನೆ ಕ್ವಾಯೋಗಾ ಎಲ್ಲೋ ಹಾಳಗೊಗ್ದಿಯ? ಹೊರಗಡೆ ಬಾರೋ, ಈ ನಾಯ್ಗಲ್ನ ಓಡ್ಸೋ, ಬ್ಬೋರ-ಬ್ಬೋರ-ಬ್ಬೋರ , ಕುರ್ಚೀನ್ ತಬ್ಬಿ ಹಿಡಿದ ಕುಳ್ತಿದ್ದ, ಬೋರಂಗೆ 'ತನ್ನ ನಿದ್ದೆ ಮುಗಿದದ್ದು,ಕನಸ' ಕೊನೆಯಗ್ದ್ಕೆ ಕಾರಣ ಈಗ ಗೊತ್ತಾತು, ಹೊರಗಡೆ ಯಾರೋ ತನ್ನೆ ಕರಿತವ್ರೆ, ಧ್ವನಿ ಹಾಜೀದ್ ಇದ್ದಂಗಿದೆ..
ನೋಡೋಣ ಯಾರ್ ಅಂತ ಬಾಗಿಲ್ ಸರ್ಸಿ ಕಣ್ಣು ತಿಕ್ಕಿಕೊಳ್ತಾ ಬಂದು ನೋಡ್ತಾನೆ, ಸಮಸ್ತ ಶರೀರವನ್ನ 'ಕೊಚ್ಚೆ ಕಪ್ಪು ಕಲರ್ ಮಯ' ಮಾಡ್ಕೊಂಡು ನಡುಗುತ್ತ ,ಆದರೂ ಕೈಯಿಂದ ಕಲ್ಲುಗಳನ 'ನಾಯ್ಗಲ್ಗೆ' ಎಸೀತಿದ್ದ ವ್ಯಕ್ತೀನ ನೋಡಿ 'ಮಧ್ಯಾಹ್ನವೇ ಯಾವ್ದೋ ದೆವ್ವ-ಗಿವ್ವ' ಬಂತಾ ಅಂತ ತೊಡೆಗಲ್ ಗಡಗಡ ನಡುಗೊದ್ಕೆ ಶುರುವಾದವು:)) ಎದೆಗ್ ಕೈ ಹಿಕ್ಕೊಂಡ್ ತನ್ನನ್ ತಾನೇ ಸಮಾಧಾನ ಪಟ್ಕೊಳ್ತಾ 'ಆ ವ್ಯಕ್ತಿನೆ' ಕಣ್ಣು ಹಿರಿದಾಗ್ಸಿ ನೋಡಿದ.
ಹಾಜೀಗ್ 'ರೇಗೊಯ್ತು', ಅಲ್ಲಾ ನಾ ಇಲ್ ಈ ನಾಯಿಗಳಿಂದ ಹೆಂಗಪ್ಪ ಪಾರಾಗ್ಲಿ? ಆ ಕುರ್ಚೀನ ಉಳ್ಸೋದ್ರ' ಬಗ್ಗೆ ಯಾವಾಗ್ ಹೇಳಲಿ? ಅಂತ ನಾ ಇಲ್ ತತ್ತರಿಸ್ತಿದ್ರೆ 'ಈ ಹಾಳಾದ್' ಬೋರ 'ಮುಂಡೇ ಗಂಡ' ನಾಯ್ಗಲ್ನ ಓದ್ಸಿ ನನ್ನ ಕಾಯ್ದೆ ಕೆಕ್ಕರ್ಸ್ಕೊಂಡ್ ನೋಡ್ತವ್ನಲ್ಲ! ಲೋ ಬ್ಬೋರ ನಾ ಕಣೋ ಹಾಜೀ ಬೇಗನೆ ಆ ನಾಯ್ಗಲ್ನೆಲ್ಲ ಓಡ್ಸಿ 'ಪುಣ್ಯ ' ಕಟ್ಕಳೋ ನನ್ ಕೊಂದೇ ಹಾಕ್ಬುಡ್ತವೆ ಹಾಳದ್ವು.
ಬೋರಂಗೆ ಗೊತ್ತಾತು ಒಹ್! ಅವ್ನು'ಹಾಜೀ' ಲ್ಲೋ ಹಾಜೀ ಏನೋ ಇದು? ನಾಯ್ಗಲ್ ಯಾಕಲ ನಿನ್ನ ಹಿಂದೆ ಬಿದ್ದವೆ? ಯಾವ್ದರ 'ನಾಯ್ ಕುನ್ನೀನ' ಎತಾಕೊಂಡ್ ಬಂದೆಯೇನೋ? ಹಿಂದೊಮ್ಮೆ ತಾ ಮತ್ತು ಹಾಜೀ ಅದೇ ತಾನ್ ಜನಿಸಿದ್ದ ನಾಯ್ ಮರಿಗಳನ ತಾಯಿ ನಾಯಿಗ್ 'ರೊಟ್ಟಿ ತೋರ್ಸಿ' ಹೊರಗೆ ಬರೋ ಹಾಗ್ ಮಾಡ್, 'ಒಂದು ನಾಯ್ ಕುನ್ನೀನ' ಎತ್ಕೊಂಡಿದ್ದು ಅದ್ನ ಕಂಡ್ ಅದ್ರ 'ತಾಯಿ' ತಮ್ಮ ಹಿಂದೆ ಒಡಿ ಬಂದದ್ದು 'ಅದ್ನ' ನೋಡ್ ಎಲ್ಲ ಇದ್ದಬದ್ದ ನಾಯ್ಗಳೆಲ್ಲ ಅಟ್ಟಾಡಿಸಿಕೊಂಡು ಬಂದದ್ದು , ತಾವಿಬ್ರು ಕುನ್ನೀನ ರಸ್ತೆಲ್ ಬಿಸಾಕ್, 'ಮರ ಹತ್ತಿದು' ನೆನಪಿಗ್ ಬಂತು.. ಆದರೂ ಇದ್ ನಾಯ್ 'ಮರಿ ಹಾಕೋ ಕಾಲವಲ್ಲವಲ್ಲ':)
ತಾ ಇಲ್ ಬೋಬ್ಬಿಡ್ತಿದ್ರೂ ಕೇರ್ ಮಾಡದೆ 'ಒಳ್ಳೆ ದೆವ್ವ ಹಿಡಿದವ್ನಂಗೆ' ಅದೆಲ್ಲೋ ನೋಡ್ತವ್ನಲ್ಲ ಏಎ ಬ್ಬೋರ,ಇವ್ನು ಅದ್ಯಾವ್ ಧ್ಯಾನದಾಗವ್ನೋ ಯಾ ಅಲ್ಲಾ. ಲ್ಲೋ ಲೋಫಾರ್ ಬೋರ, ಬೇವಕೂಫ್, ನಾ ಇಲ್ ಸಾಯ್ತಿದ್ರೆ ನೀ ಕನಸು ಕಾನ್ತಿದ್ಯೆನೋ? ' ಹಾಜೀ ಚೀರಾಟ ಕೇಳ; 'ಗತದಿಂದ' ಪ್ರಸ್ತುತಕ್ಕೆ ಬಂದ ಬೋರ ಒಂದು ದೊಡ್ಡ ದೊಣ್ಣೆಯಿಂದ ಎಲ್ಲ ನಾಯ್ಗಲ್ನೂ ಓಡಿಸಿದ, ಮನೆ ಮುಂದಿದ್ದ ಮಡ್ಕೆಯಲ್ಲಿದ್ದ್ ಅನೀರಿಂದ ಹಾಜೀಗ್ ಸ್ನಾನ ಮಾಡ್ಸಿ ಬಟ್ಟೆ ಒಗ್ದು ಹಾಕ್ಸಿ, ಒಣಗಿಸ್ತ ಕುಳಿತರು.
ಹಾಜೀ ಏನ್ಲ ಆತು? ಲ್ಲೋ ಬ್ಬೋರ ಅದನ ಆಮೇಲ್ ಹೇಳ್ತಿನ್, ಈಗ ಕೇಳ, ನಾ ನಿಂಗೊಂದ್ ಗುಟ್ಟು ಹೇಳ್ತಿನ್, ನಾ ಈಗ ತಾನೇ ಊರ್ ಹೊಳ್ಗದೆಯಿಂದ ಬಂದೆ, ಹಿರೀರ್ಗೆಲ್ಲ ಗೊತಾಗೈತೆ 'ಆ ಕುರ್ಚಿ' ಅದೇ ಅಂತ, ನನುನವೇ ಕೇಳ್ದ್ರು, ಆದ್ರೆ ನಾ ಅದಲ, ಇದ್ ಬೇರೆದ್ ಅಂತೆಳ ಅವರ್ನ ಯಾಮಾರ್ಸ್ದೆ, ಆದ್ರೆ ಅವ್ರು ನಿಮ್ಮಪ್ಪನನ್ನ ಕೇಳ್ದ್ರೆ, ಅವ್ರು ಬಾಯ್ ಬಿಟ್ರೆ 'ಈ ಕುರ್ಚಿ' ಹೋದಂಗೆಯ.. ಅದೇ ತಾನೇ ಕುರ್ಚಿ ಕೈ ತಪ್ಪಿದಂಗೆ ಕನಸನ್ ಕಂಡು ದಿಗಿಲಾಗಿದ್ದ ಬೋರಂಗೆ ಹಾಜೀ ಮಾತ್ಗಲ್ ಗುಡುಗು-ಸಿಡಿಲಂತೆ ಒಟ್ಒಟ್ತಾಗ್ ಎದೆಗ್ಬಬಂದ್ ಬಡಿದ್ವು... .ಇಲ್ಲ ಇಲ್ಲ ಅದ್ನ ನ ಕೊಡಲ್ಲ, ಅದು ನಂಗೆ ಬೇಕು, ಳೋ ಹಾಜೆ ನಿ ನಿಜ ಹೆಲಿತ್ವೆನ್ಲ? ಈ ಗ ಏನ್ಲ ಮಾಡುದು? ನೀನೆ ಏನಾರ ಆಯ್ಡಿಯ ಹೇಳಳಾ..
ನೀ ನಿಮ್ಮಪ್ಪ ಅದ್ನ ಕೊಡು ಅಂದ್ರು, ಬಿಸಾಕು ಅಂದ್ರೂ, ಅದ್ನ ನಾ ಯಾರಾರ ನಂದು ಅಂತ ಕೇಳ್ಕಂಡು ಬಂದ್ರೆ ಮಾತ್ರ ಕೊಡ್ತೀನಿ ಅಂತ ಹೇಳು, ಸಧ್ಯಕ್ಕೆ ಇಸ್ಟೇ ನಂಗೆ ಹೊಳೆದದ್ದು. ಮಿಕ್ಕಿದು ಅಮೇಲ್ ಯೋಚ್ಸೋಣ. ಹೌದು ನಿಮ್ಮಪ್ಪ ಎಲ್ಲವ್ನೆ? ಗೊತ್ತಿಲ್ಲ ಕಣ್ಲ ಇಲ್ಲೇ ಇದ್ರೂ, ಎಲ್ಲೋ 'ಹೊರಗಡೆ' ಹೋಗಿರಬೇಕು. ಹುಷಾರ್ ಕಣ್ಲ ಬೋರ, ನ 'ಹೇಳಿದ್ದು' ನೆನಪಿದೆ ತಾನೇ?
ಆಯ್ತ್ ಕಣ್ಲ ಹಾಜಿ ನೀ ಹೇಳ್ದಂಗೆ ಹೇಳ್ತಿನ್, ನಾ ಮಾತ್ರ 'ಅದ್ನ' ಬಿಟ್ಟು ಕೊಡಲ್ಲ..ಚಡ್ಡಿ ಮೇಲಿದ್ದ ಹಾಜಿ ಒಣಗಿದ ಬಟ್ಟೆ ಹಾಕೊಂಡು ಅಲಿಂದ ಹೊರಟ.
ಅಲ್ಲಿ ಹಾಜಿ ಮತ್ತು ಬೋರನ ಮಧ್ಯೆ ನಡೆದದ್ದು ಅದು,
ಇತ್ತ 'ಕೆಮ್ಮೀರಪ್ಪ' ಬೀಡಿ ತೆಗೆದ್ಕೊಲೋಕ್ ಊರ್ ಅಗಸೆ ಬದಿ ಇರೋ ಅಂಗಡಿಗೆ ಹೋದ., ಅಲ್ಲಿ ಅದಾಗಲೇ 'ಕಟ್ಟೆ ಮೇಲೆ' ಹನುಮ, ಶೀನ, ಗಡ್ಡೆಪ್ಪ ಕುಳತು 'ಮಾಡೋಕ್ ಬೇಜಾನ್ ಕೆಲ್ಸ ಇದ್ರೂ ಮಾಡದೆ' ಹಾಳು ಹರಟೆ ಹೊಡೆಯುತ್ತಿದ್ದರು, ಅವ್ರಿಗ್ 'ಆ ಕುರ್ಚಿ' ಬಗ್ಗೆ ಹೇಳ್ತಾ 'ಬಿಟ್ಟಿ ಬೀಡಿ' ಸೇದ್ತ ಇದ್ದವನು 'ಬೆಂಕಿ ಮುನಿಯ'. 'ಕೆಮ್ಮೀರಪ್ಪನ್ನ ನೋಡಿದ ಕೂಡಲೇ 'ಅವನನ್ನೇ' ಅದ್ರ ಬಗ್ಗೆ ಕೆಳಿದ್ರಾಯ್ತು, ಅಂತ , 'ಕೆಮ್ಮೀರಪ್ಪ' ಬೀಡಿ ತೆಗೆದ್ಕೊಂದು ಕಟ್ಟೆ ಮೇಲೆ ಬಂದು ಕುಳಿತು 'ಕಟ್ಟಿಂದ ಒಂದು ಬೀಡಿ ತೆಗೆದು ಬಾಯ್ಗಿಟ್ಟು ಬೆಂಕಿ ಹೊತ್ತಿಸಿ ಒಂದು ದೀರ್ಘ ಧೂಮ ಶ್ವಾಸ ತಗಂಡು 'ಡೀಸೆಲ್ ಟ್ರೈನಿನ' ಹೊಗೆಯನ್ನು ಮೀರಿಸುವಂತೆ ಹೊಗೆಯನ್ನ 'ಮೂಗಿಂದ -ಬಾಯಿಂದ' ಹೊರ ಬಿಟ್ಟ...
ಕೆಮ್ಮೀರಪ್ಪನ ಬಳಿ ಸಾರಿ ಬಂದು ಕುಳಿತಾ 'ಬೆಂಕಿ ಮುನಿಯ' ಮತ್ತು ಗ್ಯಾಂಗು ಮೆಲ್ಲಗೆ ಕೇಳ್ದ್ರು, ಈರಪ್ಪಣ್ಣಾ ನಿಮ್ 'ಬೋರ' ಅದ್ಯಾವ್ದೋ ಕುರ್ಚೀನ ಹೊತ್ತುಕೊಂಡು ಬಂದನಲ್ಲ ಅದ್ನ ಎಲ್ಲಿಂದ ಕೊಂಡು ತಂದ? ನಮಗೂ ಆ ತರ್ಹದ್ದೊಂದು ಬೇಕಿತ್ತಲ್ಲ.
ತಮ್ಮ 'ಧೂಮ ಯಜ್ನವನ್ನ' ಸಾಂಗವಾಗಿ ನೆರವೇರಿಸಲು ಬಿಡದೆ ಈ 'ಪಡ್ಡೆ ಹೈಕಳು' ಅಡಿಯುಂಟು ಮಾಡುತ್ತಾ 'ಆದಾಗಲೇ' ತಾ ದ್ವೆಶಿಸ್ತಿರೋ' ಆ ಕುರ್ಚಿ ಬಗ್ಗೆ ಕೇಳಿದ್ದು ಸರಿ ಬರದೆ, ಹೇಳಿದ್ರು-ನಾ ಕೂಡ ಕೇಳ್ದೆ ಬೋರಂಗೆ, ಅದು ಎಲ್ಲೋ 'ಬಯಲಲಿ ಸಿಕ್ತಂತೆ', 'ಅದ್ರ' ದೆಸೆಯಿಂದ ವನು ಈಗ ಶುದ್ಧ ಸೋಮಾರಿಯಾಗಿ ಸದಾ ಅದನ್ನೇರಿ ಕುಳತು ಕೆಲ್ಸ ಕಾರ್ಯ ಮಾಡದೆ, ಅದೂ ಸಾಲದೆಂಬಂತೆ' ನಮ್ದೂಂತ' ಎನ್ನಿಲ್ಲದಿದ್ದರೂ,ಯಾರ್ಯಾರಿಗೋ 'ಯಾರ್ಯಾರದೋ ಏನನ್ನೋ' ದಾನ ಮಾಡ್ತಾ 'ದಾನ ಶೂರ' ಆಗ್ಬುತ್ತವ್ನೆ . ನಂಗಂತೂ ಆ ಕುರ್ಚಿ ಮನೆಯಿಂದ ಹೊರಗೆ ಹೋದ್ರೆ ಸಾಕು ಅನ್ಸ್ತೈತೆ...
'ಬೆಂಕಿ ಮುನಿಯಂಗೆ' ಗೊತ್ತಾಗೋಯ್ತು, 'ಇದು' ಅದೆನೆಯ.. ಇನ್ನು ತಡ ಮಾಡಬಾರದು ಈ ವಿಷಯವನ್ನ 'ಪಟ್ಟಣಕ್ಕೊಗ್' ಪೋಲೀಸರ್ಗೆ ಹೇಳ್ಬೇಕು. ಏನಾರ ಒಳ್ಳೆ 'ಬಹುಮಾನ' ಸಿಕ್ಕರೂ ಸಿಗಬಹುದು.
ಕೆಮ್ಮೀರಪ್ಪ ಮನೆಗೋಗಲು ಎದ್ದ, ಆಗ 'ಬೆಂಕಿ ಮುನಿಯ' ಅಣ್ಣಾ ನಾ ನಿನ್ ಸಂಗಡವೇ ಬರವೆ ನಿಮ್ಮನೆಗೆ ನಾ ಒಮ್ಮೆ 'ಅದ್ನ' ನೋಡ್ಬೇಕಿತ್ತಲ್ಲ.. ಅದ್ಕೆನೋ ಬಾರೋ ನೋಡೋದೆನು, ಅದ್ನ 'ನೀನೆ ತೆಗೆದ್ಕೊಂಡ್ ಹೋಗ' ಬೇಕಾರೆ, ನಮಗೆ ಯಾಕ್ ಅದು ?
ಇದನ್ನ ಮುನಿಯ ನಿರೀಕ್ಷಿಸಿರಲಿಲ್ಲ, 'ಬಯಸದೆ ಬಂದ' ಭಾಗ್ಯ ಅನ್ಕಂಡು ಮೌನವಾಗ್ ಕೆಮೀರಪ್ಪನ ಫಾಲೋ ಮಾಡಿದ 'ಮನದಲ್ಲೇ ಹಿಗ್ಗಿ ಹೀರೆಕಾಯಾಗ್ತಾ', ಮತ್ತದಾಗಲೇ ಆಕಾಶದಲ್ಲೇ ತೇಲ್ತ...
ಕುರ್ಚಿ ಮೇಲೆ ಕುಳಿತ ಧ್ವಾರವನ್ನೇ ನೋಡ್ತಿದ್ದ 'ಬಡ ಬೋರಂಗೆ' ಇದ್ದಕ್ಕಿದ್ದಂತೆ ' ಹೇಳ್ದೆ- ಕೇಳ್ದೆ ಸುಳಿವು ಕೊಡದೆ ಬಂದ ಸುನಾಮಿಯಂತೆ' ಈ 'ಬೆಂಕಿ ಮುನಿಯ' ತಮ್ಮ ಮನೆಗ್ ಪಾದ ಬೆಳೆಸಿದ್ದು ಕೆಡೆನಿಸಿತು, ದಿಗ್ಗನೆ 'ಕುರ್ಚಿಂದ' ಎದ್ದು ಕೆಳಗಿಳ್ದು ನಿಂತ.
ಕೆಮ್ಮೀರಪ್ಪ ಗಂಭೀರವಾಗ್ ಹೇಳ್ದ್ರು, ನೋಡು ಬೋರ 'ನಾವ್ ಬಡವರು' ಮೈ ಮುರ್ದು ದುಡಿದ ತಿಂದರೆ ಗೆಯ್ಮೆ ಮಾಡಿದ್ರೆ ಬಂದ ಕಾಸಲ್ಲಿ 'ಹಿಟ್ಟು' ಉಂಡ್ 'ಶಿವ ನೀ ಮಡಗಿದಂಗೆ' ಅಂತ ಬದ್ಕೊರು,ಈ ಕುರ್ಚಿ-ಗಿರ್ಚಿ ಎಲ್ಲ 'ದೊಡ್ದವ್ರ್ಗೆ', ಅದ್ರ ಮೇಲೆ ಕೂರೋಕೆ ನಾವ್ ತಕ್ಕವ್ರಲ್ಲ, ಅದ್ಕೆ ನಾ ಮುನಿಯಂಗೆ ಹೇಳಿವ್ನಿ 'ಅದ್ನ' ತೆಗೆದ್ಕೊಂಡು ಹೋಗೋಕೆ. 'ಬೋರನ' ಹ್ರುದಯವೆ ಹೊಡೆದು ಬಾಯ್ಗೆ ಬಂದಂತಾಯ್ತು', 'ಆ ಕುರ್ಚಿ' ಇನ್ಮೇಲೆ ನಂದೇ, ಅದು ನನ್ನೊಡನೆಯೇ ಸದಾ ಇರ್ತೈತೆ ಅಂತ ಹಗಲಿರುಳು ಕನಸ ಕಂಡಿವ್ನಿ, ಈಗ ನಮ್ಮಪ್ಪ ಹೊಗೊಗ್ 'ಈ ಹಾಲೂರ್ ಬೆಂಕಿ ಮುನಿಯಂಗೆ' ಅದ್ನ ಕೊಡ ಅಂತವ್ರಲ್ಲ.
ಛೆ ಛೆ ನಮ್ಮಪ್ಪ 'ಕುರ್ಚೀನ' ಹೊಗೂಗ್ 'ಆ ಹಾಲೋರ್ ಬೆಂಕಿ ಮುನಿಯಂಗೆ' ಕೊಡ್ ಅಂತವ್ರಲ್ಲ. 'ಅದ್ರ' ಮೇಲೆ ಕೂರೋಕು ಒಂದು 'ಯೋಗ್ಯತೆ' ಇರ್ಬೇಕು, 'ಗತ್ತು ಗಾಂಭೀರ್ಯತೆ' ಇರ್ಬೇಕು ಮತ್ತು ಅದು ನನ್ನಲ್ಲಿ ಮಾತ್ರವೇ ಇದೆ. ಯೋಚಿಸ್ತಿದ ಬೋರಂಗೆ ಮತ್ತೊಮ್ಮೆ ಹೇಳ್ದ್ರು' ಲೋ ಬೋರ' ಹೇಳಿದ್ದು ಕೆಳಲಿಲ್ಲವೆನ್ಲ? ಅದ್ನ ಮುನಿಯಂಗೆ ಕೊಡು ಹೊತ್ತೊಯ್ತಾನೆ 'ಅದ್ನ' ಅವನಾರ ಮಡಗಿಕೊಳ್ಳಲಿ ಇಲ್ಲ ಯಾರ್ಗಾರ ಮಾರಿ ಕಾಸು ಮಾಡ್ಕೊಳ್ಳಲಿ. ಅಪ್ಪ ಅದು ಇಲ್ಲಿದ್ರೆ ಏನ್ ಪ್ರಾಬ್ಲಮ್ಮು? ನಾ ಅದ್ನ ಅಸ್ಟ್ ಕಷ್ಟ ಪಟ್ ಹೊತ್ಕೊಂಡ್ ಬಂದಿವ್ನಿ,ಇಸ್ಟಕು ಅದ್ನ ನಂದು ಅಂತ ಯಾರು ಕೆಳ್ಕಂಡ್ ಬಂದಿಲ , ಬಂದ್ರೆ ಕೊಟ್ ಬಿಡೋಣ..
ಕೆಮೀರಪ್ಪಂಗೆ ಮಗ ಹೇಳೋದ್ರಲ್ಲೂ 'ನ್ಯಾಯ' ಆಇತೆ ' ಅನ್ನಿಸಿತು.. ಮುನಿಯಂಗೆ ಹೇಳ್ದ್ರು, ಮುನಿಯ ನೀ ಈಗ ಹೋಗ್, ಒಂದೊಮ್ಮೆ ಯಾರು ಅದು ನಂದು ಅಂತ ಕೇಳ್ಕೊಂಡ್ ಬರ್ದಿದ್ರೆ ಅದ್ನ 'ನಿಂಗೆ' ಕೊಡ್ತೀನಿ..
'ಕೈಗೆ ಬಂದ ತುತ್ತು -ಬಾಯ್ಗಿಲ್ಲ' ಅಂತ ಗಾದೆನ್ ನನಗೋಸ್ಕರವೇ ಮಾಡಿದರೆನೋ ತತ್! ಆ ಬೋರ ಎಂತ ಪಾಯಿಂಟ್ ಹಾಕ್ ಮಾತಾಡಿದನಲ್ಲ, ಪರವಾಗಿಲ್ಲ, 'ಅದ್ನ' ಹೆಂಗೆ ತೆಗೆದ್ಕೊಂಡ್ ಹೋಗೋದು ನಂಗೊತ್ತು, 'ಬಡ್ಡಿ ಮಗ ಬೋರ' ನಿಂಗಿದೆ ಹಬ್ಬ ನನ್ನ ಕೈಲಿ ನೋಡ್ತಿರು. ಮನದಲ್ಲೇ ಹೀಗಂತ ಅನ್ಕೊಳ್ತಾ ಮುನಿಯ 'ತೆಪ್ಪಗೆ' ಜಾಗ ಖಾಲಿ ಮಾಡಿದ 'ಆ ಕುರ್ಚೀನ' ಕಣ್ಣಲ್ಲೇ ತೂಗ್ತ,ಅಂದಾಜ್ ಮಾಡ್ತಾ - ಕಣ್ಣು ತುಂಬಿಕೊಳ್ತಾ..
ಮುನಿಯನ ಉದ್ದೇಶ ಮೊದಲಿಗೆ ಪಟ್ಟಣಕ್ಕೊಗ್ ಪೋಲಿಸರ್ಗೆ ಹೇಳ್ಬೇಕು ಅಂತ ಇತ್ತಲ್ಲ, ಅಮೇಲ್ ಕೆಮ್ಮೀರಪ್ಪ ಕುರ್ಚೀನ ನೀನೆ ಇಟ್ಕೋ ಅಂದಾಗ್, ಅದ್ನ ಮನೆಲಿಟ್ಟು ಪಟ್ಟಣಕ್ಕೊಗ್ ಪೋಲೀಸರನ್ ಕಂಡ್ ವಿಷ್ಯ ತಿಳ್ಸಿ ಬವ್ಮಾನ್ ಪಡಿಬೇಕುಂತ ಯೋಚಿಸದ, ಆರೇ ಬೋರ ಆ ಪಾಯಿಂಟ್ ಹಾಕ್ ಕೆಮೀರಪ್ಪ ಮುಂದೇ ನೋಡೋಣ ಅಂದ್ನಲ್ಲ, ಆಗ ಒಂದು ಆಇನಾತಿ ಆಯ್ದಿಯಾ ಬಂತು ಮುನಿಯನ ತಲೆಯಲ್ಲಿ, ಅದ್ನ ಕಾರ್ಯಗತ ಮಾಡೋಕ್, ಧೈರ್ಯ ತೆಗೆದ್ಕೊಲ್ಲುವುದಕ್ಕಾಗ್ ಮತ್ತು ಅದ್ನ ಸ್ಸಾಧಿಸೋಕ್ ತನಗೆ ಯಾರು ನೆರವಾಗಬಹುದು ಅಂತ ಯೋಚಿಸ್ತಾ, 'ಆ ತರ್ಹದವ್ರೆಲ್ಲ' ಸಿಗೋದು ಒಂದೇ ಜಾಗದಲ್ಲ್ಲಿ ಅಂತ ತೆರ್ಮಾನ್ಸಿ 'ಅಲ್ಲಿಗೆ' ಹೊರಟ.
ಹೋಗ್ತಾ ಜೆಬ್ ತಡಕಾಡಿದರೆ ಏನಿತ್ತು ಅಲ್ಲಿ? ಸೇದಿ ಅರ್ಧಕ್ಕೆ ಬಿಟ್ಟು ಜೆಬಲ್ಲಿಟ್ಟಿದ್ದ 'ಮೋಟು ಬೀಡಿ':) ತತ್! ಈ ಜೇಬಲ್ಲಿ ಅದ್ಯಾವಾಗ ನಾ 'ಸಾವಿರ-ಸಾವಿರ್' ನೋಟ್ಗಲ್ನ ಇಕ್ತೀನೋ ಶಿವನೆ ಕಣ್ಣು ತೆರೆಯಪ್ಪ, ಅಂದ. ಜೇಬಲ್ಲಿ ಕಾಸಿಲ್ದೆ 'ತನ್ನ' ಪ್ಲಾನ್ ಕಾರ್ಯಗತಗೊಳಿಸಲು ಇವ್ನು ಹೊರಟಿದ್ದು 'ಆ ಜಾಗಕ್ಕೆ', ಅಲ್ಲಿಗ್ ಎಂಟರ್ ಆಗೊಕ್ ಮುಂಚೆ 'ಇಲಿಯಾಗ್' ಹೋದವರು, 'ಅದ್' ಒಳಗಡೆ ಹೋಗ್ತಿದ್ದ ಹಾಗೆ 'ಹುಲಿ' ತರಹ ಆಡ್ತಾ , ಸಂತೋಷ ಸಂಭ್ರಮದಿಂದ ಇದ್ದು, ಚಿಂತೆ ಮರೀತಿದ್ದ ಅ ಸ್ಥಳದ ಹೆಸರು ' ಪೈಲ್ವಾನ್ ಕಾಳಪ್ಪನ ಕಳ್ಳು ಅಂಗಡಿ':)೦,
ಆ 'ಪೈಲ್ವಾನ್ ಕಳ್ಳು ಕಾಳಪ್ಪನೋ' ಸಾಕ್ಷಾತ್ 'ಯಮನ ಪ್ರತಿರೂಪಿ', ದಯೆ- ದಾಕ್ಷಿನ್ಯ ಅವ್ನ ದಿಕ್ಸ್ನರಿಲೆ ಇಲ್ಲ, ಮೊಡ್ಲಿಗ್ ಸಲ ಕೊಟ್ಟು, ''ಅದ್ರ' ರುಚಿ' ಹತ್ತಿಸ್ 'ಮನೆ- ಮಠ' ಮಾರ್ಕೊಂಡ್ ಹಲವ್ರ್ನ ಬೀದಿಗ್ ಬರೋ ಹಾಗ ಮಾಡಿದ 'ಕುಖ್ಯಾತಿ' ಅವಂಗೆ ಇತ್ತು.. ಇಂತಿಪ ಆ 'ಪೈಲ್ವಾನ್ ಕಾಲಪ್ಪನ್ ಕಳ್ಳು ಅಂಗಡಿಗ್ ' ಈ ಮುನಿಯ ಜೇಬಲ್ಲಿ 'ಬಿಡಿ ಗಾಸಿಲ್ಲದೆ' ಹೋಗ್ 'ಅದೇನ್' ಕಾರ್ಯಗತ' ಮಾಡ್ತಾನೆ? ಅಲ್ಲಿ ಅವಂಗೆ' ಯಾರು ಸಿಗ್ತಾರೆ?
ಅವ್ರು 'ಅದ್ಕೆ' ಒಪ್ತಾರ?
ಮುಂದೇನಾಗುತ್ತೆ?
ಬನ್ನಿ 'ಕಳ್ಳು ಕಾಳಪ್ಪನ ಕಳ್ಳು' ಅಂಗಡಿಗ್,
.