ಸೀತೆ ಮತ್ತು ಶಾಕುಂತಲೆ...

ಸೀತೆ ಮತ್ತು ಶಾಕುಂತಲೆ...

ಬರಹ

ಸೀತೆಗೂ ಶಾಕುಂತಲೆಗೂ ಸಿಕ್ಕಿತೇನು

ಪ್ರೀತಿಯಿಂದ??

ಪಡುವಂತಾಯಿತೇ ಇಲ್ಲದ ನೋವಿನ ಭಾದೆ...

ಪತಿ ರಾಮ - ದ್ಯುಷಂತರು ಏನು ಕಳೆದರು?

ಕಳೆದುದು ಎಲ್ಲವು ಈ ಎರಡು ಹೆಣ್ಣಿಗೆ...

ಪತಿಯ ಮಾತನ್ನು ಮನ್ನಿಸಿ ನೆಡೆದಳು

ಒಬ್ಬಳು,

ಪತಿಯು ಬಿಟ್ಟು ಹೋದ ಪ್ರೇಮದ ನೆನಪಲಿ ಕಾಲವ ಕಳೆದಳು

ಮತ್ತೊಬ್ಬಳು...

ಪತಿಯ ಏಲ್ಲಾ ಕಷ್ಟಗಳಿಗೆ ಹೆಗಲಾದಳು ಒಬ್ಬಳು,

ಪತಿಯ ಪ್ರೇಮಕ್ಕಾಗಿ ಹಾತೊರೆದಳು ಇನ್ನೊಬ್ಬಳು...

ಅಂತು ಕೊನೆ ಬಂದಾಗ, ಒಳಪಟ್ಟರು ಇಬ್ಬರು ಸತ್ವಪರೀಕ್ಷೆಗೆ,

ಪರೀಕ್ಷೆಯೇನೋ ಗೆದ್ದರು, ಅದರೂ ಏನಾಯಿತು ಅವರ ಪತಿದೇವರಿಗೆ!!!

ಒಬ್ಬಳ ಪತಿ ತನ್ನ ಮರೆವನ್ನು ಬಿಟ್ಟು, ಬಂದು ಒಪ್ಪಿದ ಮರಳಿ ಇವಳನ್ನು...

ಅದರೆ... ಮತ್ತೊಬ್ಬಳ ಪತಿ, ಇನ್ನೊಮ್ಮೆ ಅವಳನ್ನು ಬಿಟ್ಟನು,

ಇಲ್ಲದವನ ಮಾತು ಕೇಳಿ....!

ಹೀಗೆ ಸೇರಿದಳೊಬ್ಬಳು ತನ್ನ ಪತಿಯ ತೋಳಿನಲ್ಲಿ, ಮತ್ತೊಬ್ಬಳು ಸೇರಿದಳು ತನ್ನ ತಾಯಿ

ಭೂದೇವಿಯ ಒಡಲಿನಲ್ಲಿ...

ಹೀಗೆ ಮುಗಿಯಿತು ಇಬ್ಬರ ಕಥೆ, ಒಬ್ಬಳಿಗೆ ದಕ್ಕಿತು ಪ್ರೇಮ,

ಮತ್ತೊಬ್ಬಳಿಗೆ ದಕ್ಕಿ, ನಂತರ ಬೇಡವಾಯಿತು ಪ್ರೇಮ...!