ಸೀನ ಮತ್ತು ಅಣ್ಣೀನಾಯ್ಕನ ಪ್ರಸಂಗ ೧.

ಸೀನ ಮತ್ತು ಅಣ್ಣೀನಾಯ್ಕನ ಪ್ರಸಂಗ ೧.

 

 

 

 

ಸೀನ ಮತ್ತು ಅಣ್ಣೀನಾಯ್ಕನ ಪ್ರಸಂಗ

 

ಅಣ್ಣೀನಾಯ್ಕ ೧.

 

"ನಾಯ್ಕರೇ ಸಲ್ಪ ತಡಿನಿ ನಿಂತ್ಕಳಿ"

 

ಓಡಿ ಬಂದಿದ್ದ ಶೀನ ಏದುಸಿರು ಬಿಡುತ್ತಿದ್ದ. ನಾನೂ ಸೀನನೂ ಬರುವುದು ಸ್ವಲ್ಪ ತಡವಾಗಿದ್ದರೂ ಅಣ್ಣಿ ನಾಯ್ಕ  ಹೊರಟು ಹೋಗಿ ಆಗಿರುತ್ತಿತ್ತು.

 

"ಎ... ಏನಾಯ್ತಾ ಸೀನ"  ನಾಯ್ಕ ಗಾಬರಿಗೊಂಡ

 

"ಸಲ್ಪ ಲೆಕ್ಕ ತಪ್ಪಾಯ್ತ ಅಂತ್ ಕಾಣತ್ತ್..!!"

 

"ಆದ ಹೆಂಗಾ , ಅಲ್ದನಾ ದಿನ ಬೆಳ್ಗಾದ್ರ್ ಅವರದ್ ಅದೇ ಕೆಲಸ ಅಲ್ದಾನಾ ಆದ ಹೆಂಗ್ ತಪ್ಪತ್ ಅವ್ರ ಲೆಕ್ಕ"   ನಾನೆಂದೆ

 

ನಿನ್ ಶಾಲಿಗ್ ಹೊತಿಲ್ಲೇ ಎನಿಲ್ಲೇ ನಿಂಗ್ ಎಂತ ಗೊತ್ತಿತ್ ಅಡ್ಕಿ ಲೆಕ್ಕ..? ಇದು ಅವನ ಅಮ್ಮನ ಲೆಕ್ಕಾಚಾರ

 

ನಾನ್ ಹೇಳುದ್ ಎಂತ ಅಂದ್ರೆ....

 

"ನಿ ಎಂತ ಹೇಳುದು ಬ್ಯಾಡ ನಾಯಕರೆ ನಿವ ಲೆಕ್ಕ ಹೇಳಿ ಎಷ್ಟಾಯ್ತ್ ..? " ಅಮ್ಮ

 

"ಹೌದಮ್ಮ, ನಿಮ್ಮದು ಸಾವಿರ ಅಡ್ಕಿಗೆ ನೂರಕ್ಕೆ ಹತ್ ರುಪಾಯಿ ಲೆಕ್ಕದಂಗೆ ನೂರ್ ರುಪಾಯ್ ಆತ್ತ, ತಕಣಿ ನಿಮ್ ನೂರ್ ರುಪಾಯಿ"

 

ಅಲ್ದೆ ನಾಯಕರೆ ನಮ್ಮನಿ ಅಡ್ಕಿ ತಂದಿರಲ್ಲೇ ನೀವ ಅದ್ರಂಗೆ ಸಾವಿರದಿಪ್ಪತ್ ಅಡ್ಕಿ ಇದ್ದಿತ ನೀವ್ ಎರಡ್ ಸಾವಿರದ ಹ್ಯಾಂಗ್ ಅಮ್ಮಂಗ್ ದುಡ್ ಕೊಟ್ಟಿರಲ್ಲೇ ... ಮರ್ರಾಯ್ರೆ

 

ಇಲ್ಯಲೇ ನಾನ್ ಸರಿ ಲೆಕ್ಕ ಮಾಡಿ ಹಾಕಿನಲ್ಲೇ ಮಾರಾಯಾ

 

ಅಲ್ಲ ಅಮ್ಮ ನಿನ್ ಬೇರೆ ಕಡಿದ ಅದ್ರಂಗೆ ಸೇರ್ಸಿದ್ಯಾ ಮಾರಾಯ್ತಿ..? ಶಿನ ಅಮ್ಮನನ್ನು ಕೇಳಿದ

 

"ಹೌದೇನೋ ಹಂಗಾರೆ"   ಅಮ್ಮ

 

ಹಂಗಾರ್ ಅದ್ ಎರಡ ಸಾವಿರವೂ ಅಲ್ಲ ಮೂರ್ ಸಾವ್ರ ಆತ್ತೆ!!! ನೀವೇ ಸಾವರ್ ಅಡ್ಕಿ ದು ದುಡ್ ಕೊಡ್ಕಾತ್ತಲೇ,

 

"ಅದಲ್ಲ ಮಾರಾಯಾ.......... ನಾನ್ ಸರಿ ಲೆಕ್ಕ ಮಾಡಿ ಹಾಕಿನಲ್ಲೇ ಹಂಗಾರೆ " ನಾಯ್ಕ

 

"ಹಾಂಗಾರ್ ಒಂದುಪಾಯಾ ಮಾಡುವ , ಯಾವ್ದ ನಮ್ಮನಿ ಚೀಲ ಹೇಳಿ ನಾನ್ ಲೆಕ್ಕ ಮಾಡ್ತೆ " ಸೀನ

 

"ಅದೆಲ್ಲ ಬ್ಯಾಡ್ದಾ..ಸೀನ,  ನಾನೇ ನಿಂಗ್ ಸಾವಿರ ಅಡ್ಕಿ ದುಡ್ ಕೊಟ್ಟರ್ ಸೈ, ಅಲ್ದಾ ಇಗಾ ತಕಾ ನೂರ್ ರುಪಾಯಿ" .ನಾಯ್ಕ

 

"ನಂಗ್ ದುಡ್ ಬ್ಯಾಡ ಮಾರಾಯ್ರೆ ಅಡ್ಕಿ ಲೆಕ್ಕ ಮಾಡುವ ಸರಿ ಅಂದ್ರ ಸೈ ಇಲ್ಲೇ ಅಂದ್ರೆ ನೀವ ದುಡ್ ಕೊಡಿ , ಎಂತ ಅಂತ್ರಿ ಅಮ್ಮ " ಸೀನ

 

"ಹೌದಾ ನಾಯಕರೆ ಅಂವ ಹೇಳುದು ಸರಿಯೇ , ನೀವ ಒಂದ್ಸಲಿ ಲೆಕ್ಕ ಮಾಡಿ ಗೊತ್ತಾತ್ತಲೇ "  ಅಮ್ಮ.

 

ಅಣ್ಣಿ ನಾಯ್ಕ ಮೀನ ಮೇಷ ಎಣಿಸುವ ಹೊತ್ತಿಗೆ  ಸರಿಯಾಗಿ....

 

 ಗಣಪ ಗಣಪನ ತಾಯಿ ಅಂಗಳಕ್ಕೆ ಬಂದರು, ಗಣಪನ ತಾಯಿಯ ಕೈ ಗಣಪನ ಕಿವಿ ಗಟ್ಟಿಯಾಗಿ ಹಿಡಿದಿತ್ತು..

 

**********************                                      *********************

 

೨-  ಗಣಪ


 

ಎಲ್ಲಿಟ್ಟಿದ್ದ್ ಹೇಳಾ ಬಿಕನಾಸಿ, ಇನ್ನೂ ಬಿತ್ತು ಬೆನ್ನಿಗ್ ನಾಲ್ಕು.....


 

ಇಲ್ಲಮ್ಮಾ ಇಲ್ಲೇ ಯಾವ್ದೋ ಚೀಲ್ದಂಗ್ ಇಟ್ಟಿದ್ದೆ.....


 

ಯಾವ್ದ್ರಂಗೆ   ಇಟ್ಟಿದೆ ಬಗುಳೋ, ಕಿಚ್ ಹಿಡಿವವ್ನೇ...


 

ಯಾವ್ದ್ರಂಗೆ ಗೊತ್ತಾತಿಲ್ಲೆ ಎಲ್ಲಾ ಬಿಚ್ಚಿ ಕಾಣ್ಕಾ ಅಂದೆಳಿ, ಹೊಡಿ ಬ್ಯಾಡ ನಾನೇ ಹುಡ್ಕ್ತೆ......


 

ಈಗ ನಿಜವಾಗಿಯೂ ಅಣ್ಣಿ ನಾಯ್ಕ ಬೆಚ್ಚಿ ಬಿದ್ದ

 

(ಮುಂದುವರಿಯುವುದು)