ಸೀಬೆ ಹಣ್ಣಿನ ಗೊಜ್ಜು

ಸೀಬೆ ಹಣ್ಣಿನ ಗೊಜ್ಜು

ಬೇಕಿರುವ ಸಾಮಗ್ರಿ

ಸೀಬೆ ಹಣ್ಣಿನ (ಪೇರಳೆ) ಹೋಳುಗಳು ೨ ಕಪ್, ಹುಣಸೆ ರಸ ೩ ಚಮಚ, ಬೆಲ್ಲದ ಹುಡಿ ೩ ಚಮಚ, ಮೆಣಸಿನ ಹುಡಿ ೩ ಚಮಚ, ಮೆಂತೆ ಹುಡಿ ೧ ಚಮಚ, ಎಣ್ಣೆ ೪ ಚಮಚ, ಸಾಸಿವೆ ೧ ಚಮಚ, ಇಂಗು ಸ್ವಲ್ಪ, ತೆಂಗಿನ ತುರಿ ೧/೪ ಕಪ್, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು - ೩ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ

ಸೀಬೆ ಹಣ್ಣಿನ ಹೋಳುಗಳನ್ನು ಬೇಯಿಸಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ-ಇಂಗಿನ ಒಗ್ಗರಣೆ ಮಾಡಿ. ಈ ಒಗ್ಗರಣೆಗೆ ಹುಣಸೆ ರಸ, ಬೆಲ್ಲದ ಹುಡಿ, ಮೆಂತೆ ಹುಡಿ, ಸೀಬೆ ಹಣ್ಣುಗಳು, ಮೆಣಸಿನ ಹುಡಿ, ಉಪ್ಪುಗಳನ್ನು ಹಾಕಿ ಕುದಿಸಿ. ಒಲೆಯಿಂದ ಕೆಳಗಿಳಿಸಿ ತೆಂಗಿನ ತುರಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಸೀಬೆ ಹಣ್ಣಿನ ಸ್ಪೆಷಲ್ ಗೊಜ್ಜು ತಯಾರು.