ಸೀರೆ ತಂದ ಭಾಗ್ಯ
ಕವನ
ತಾಯಿ ಕೊಡಿಸಿದ ಸೀರೆ ಕಲಿಸಿತು ತಾಳ್ಮೆಯನ್ನು ಬಾಳಲಿ
ತಂದೆ ಕೊಡಿಸಿದ ಸೀರೆ ತಂದಿತು ಹಿರಿಮೆಯನ್ನು ಜೀವನದಲ್ಲಿ
ಅಣ್ಣ ನೀಡಿದ ಸೀರೆ ತಂದಿತು ರಕ್ಷಣೆಯ ರಕ್ಷಾ ಬಂಧನ
ತಮ್ಮ ನೀಡಿದ ಸೀರೆ ನೀಡಿತು ತನ್ಮಯತೆ ಯ ಭಾವನಾ
ಅಕ್ಕ ಕೊಟ್ಟ ಸೀರೆ ನುಡಿಯಿತು ಅಕ್ಕರೆಯ ಸವಿ ಸಕ್ಕರೆ
ತಂಗಿ ಕೊಟ್ಟ ಸೀರೆ ತೋರಿತು ಅಮರ ಪ್ರೇಮದ ಚಿಗುರೆಲೆ
ಅತ್ತಿಗೆಯ ಪ್ರೀತಿಯ ಸೀರೆಗೆ ಮೂಕವಿಸ್ಮಿತಳು ಆದೆ ನಾ
ನಾದಿನಿಯ ಪ್ರೀತಿಯ ಸೀರೆಗೆ ಮರುಳಾಗಿ ನಿಂತೆನು ನಾ
ಪತಿಯು ನೀಡಿದ ಸೀರೆಯಲ್ಲಿ ಕಂಡಿತು ಜೀವನ ಪಾವನ
ಅತ್ತೆ ಮಾವ ನೀಡಿದ ಸೀರೆಯಲ್ಲಿ ಅಮೃತಮಯ ಜೀವನ
ಮಗಳು ನೀಡಿದ ಸೀರೆಯಲ್ಲಿ ಸಂತೃಪ್ತಿಯ ಸಡಗರ
ಮಗನು ನೀಡಿದ ಸೀರೆಯಲ್ಲಿ ಮಮತೆಯ ಆಗರ
ಸೊಸೆಯು ಉಡಿಸಿದ ಸೀರೆಯಲ್ಲಿ ವಂಶದ ಮುನ್ನಡೆ
ಮನಸು ಮೆಚ್ಚಿ ಕೊಂಡ ಸೀರೆಯಲ್ಲಿ ಆತ್ಮ ತೃಪ್ತಿಯ ಪಡೆ
ಬಂದುಬಳಗದ ಸೀರೆಯಲ್ಲಿ ಸೇರಿದೆ ಬಾಂಧವ್ಯದ ಬೆಸುಗೆ
ಗೆಳತಿಯರು ಕೊಟ್ಟ ಸೀರೆಯಲ್ಲಿದೆ ಅಂತರಂಗದ ಅಪ್ಪುಗೆ
-ಕೃಷ್ಣಾಂಗಿನಿ