ಸುಂಕದವನ ಹತ್ತಿರ ಸುಖ ದು:ಖ ಹೇಳಿದರೆ , ಕಂಕುಳಲ್ಲಿ ಇರೋದು ಏನು ಅಂದನಂತೆ.
ಬರಹ
ಹುಟ್ಟಾ ಸತ್ತಿಲ್ಲ , ಸ್ವರ್ಗ ಕಂಡಿಲ್ಲ.
ಹಾದಿ ಬಿಟ್ಟವನಿಗೆ ಹದಿನೆಂಟು ಹಾದಿ
ಹತ್ತು ಆಡಬಹುದು , ಒಂದು ಬರೆಯಲಾಗದು. ( ಆಡಿದ್ದನ್ನು ಅಲ್ಲಗಳೆಯಬಹುದು , ಬರೆದದ್ದನ್ನು ಅಲ್ಲಗಳೆಯಲಾಗದು)
ಹಂಗಿನರಮನೆಗಿಂತ ಇಂಗಡದ ಗುಡಿ ಲೇಸು.
ಸೆಟ್ಟರೇ ನಿಮ್ಮ ಮಗ ಬಿದ್ದ ಅಂದರೆ ಫಾಯದೇ ಕಾಣದೆ ಬಿದ್ದಿರಲಾರ ಅಂದರಂತೆ.
ಸೌಟು ಬಲ್ಲದೆ ಸಾರಿನ ರುಚಿಯ ?
ಸೆಟ್ಟಿ ಸಿಂಗಾರವಾಗುವದರೊಳಗೆ ಪಟ್ಟಣ ಹಾಳಾಯಿತಂತೆ.
ಸುಂಕದವನ ಹತ್ತಿರ ಸುಖ ದು:ಖ ಹೇಳಿದರೆ , ಕಂಕುಳಲ್ಲಿ ಇರೋದು ಏನು ಅಂದನಂತೆ.
ಸಿಪ್ಪೆ ತಿಂದವ ಸಿಕ್ಕೊಂಡ , ಹಣ್ಣು ತಿಂದವ ಜಾರಿಕೊಂಡ
ಸಿಡಿಲು ಹೊಡೆವಡೆ ಹಿಡಿದ ಕೊಡೆ ಕಾಯುವುದೆ?
ಸಿಟ್ಟಿನಲ್ಲಿ ಕೊಯ್ದ ಮೂಗು ಶಾಂತಿಯಲ್ಲಿ ಬಂದೀತೇ?
ಸಾವಿರ ಚಿತ್ತಾರವನ್ನು ಒಂದು ಮಸಿ ನುಂಗಿತು.