ಸುಂಟರಗಾಳಿ
ಕವನ
ಅಬ್ಬರಿಸಿ ಉಬ್ಬರಿಸಿದೆ..
ಏದುರಿಸಿರು ಬಿಡುತ್ತಾ,
ಬುಸುಗುಟ್ಟುವ ಹಾವಿನಂತೆ
ಬಿರುಬಿಸಿಲನ್ನು ಸೀಳಿ,
ಬರುತ್ತಿದೆ ನೋಡು ಸುಂಟರಗಾಳಿ...!!
ಸಣ್ಣಸಣ್ಣ ಸೂಡಿಗಳು
ಆರಿಹೋಗಿವೆ,
ಮನೆಮಠಗಳು ಜಖಂಗೊಂಡು,
ಬಾಳು ನೆಲಕ್ಕಚ್ಚಿದೆ,
ಕಣ್ತೆಗೆದರು,ಮುಚ್ಚಿದರು,
ಅಕ್ಷಿಗೆ ಗೋಚರ ರೌದ್ರನರ್ತನದ
ವಿಚಿತ್ರ ಆ ಸುಂಟರಗಾಳಿ...!!
ವಿನೀತ ಭಾವವಿಲ್ಲದ
ವಿಷಾದ ಛಾಯೆಯಲ್ಲಿ,
ಅವಕಾಶಕ್ಕೆ ಹೊಂಚುಹಾಕಿ
ಕಾತುರದಲ್ಲಿ ಕಾಯುತ್ತಲಿದೆ
ಹೊಟ್ಟೆಬಾಕನಂತೆ,
ಥೈ,,,ಥೈ,,,,ಎಂದು ಹಾರಿ,
ಜಿಗಿದು,ಕುಣಿದು,ನೆಗೆದು ಬರುತ್ತಿದೆ..?
ಮೈನಡುಗಿಸುವ ಸುಂಟರಗಾಳಿ...!!
ಗಗನದ ಮಾಯಾ ಕಂಬವಿದು,
ಐಫೆಲ್ ಟವರಿಗಿಂತ ಎತ್ತರ,
ಕೂಪರಕ್ಕಿಂತಲೂ ಆಳ
ವಾಚಾಮಗೋಚರದ,
ಚಮತ್ಕಾರ ತೋರುತಿದೆ
ರಕ್ಕಸನಲೆಯ ಸುಂಟರಗಾಳಿ...!!
ತನ್ನೊಡಲ ತೆಕ್ಕೆಗೆ
ಸೆಳೆದುಕೊಳ್ಳುತಿದೆ,
ಮಕ್ಕಳು ಮರಿಯೆನ್ನದೆ
ನಿಷ್ಕರುಣಿಯಾಗಿ,
ನಿಲ್ಲಿಸು ನಿನ್ನಾಟವನ್ನು,
ಶಾಪವದು ಕೊರಳ ಕುತ್ತಾಗಿ
ಅಪತ್ತು ತರುವದು ಇನ್ನಾದರು
ಬಿಟ್ಟುಬಿಡು,
ಸುಂಟರಗಾಳಿ..
ನಿನ್ನ ಕೆಟ್ಟ ಚಾಳಿ...!!
-*ಶಂಕರಾನಂದ ಹೆಬ್ಬಾಳ*
ಚಿತ್ರ್
