ಸುಂದರವಾದ ‘ಗಝಲ್’

ಸುಂದರವಾದ ‘ಗಝಲ್’

ಕವನ

ಹೃದಯದಲಿ ಮೆಲ್ಲಗೆ ಕುಳಿತು

ಕಂಪಿಸುತಿರುವೆ ಗೆಳತಿ||

ಮದನನ ಕಣ್ಣೋಟ ನಿನ್ನತ್ತ

ಸೆಳೆಯುತಿರುವೆ ಗೆಳತಿ||

 

ಚಾರುಹಾಸದ ಸುಮವಾಗಿ

ಲತೆಯಲ್ಲಿ ಅರಳಿ ನಗುವೆ|

ಹಾರುವ ಹಕ್ಕಿಯಂತೆ ಆಗಸದಿ

ನಲಿಯುತಿರುವೆ ಗೆಳತಿ||

 

ಕಿಂಕಿಣಿಯ ನಾದದೊಳು ರಂಗದಲಿ

ಕುಣಿಯುತ್ತ ಬರುವೆ|

ಡೆಂಕಣಿಯ ಬಾರಿಸುತ ದೇಗುಲದಿ

ಸ್ಮರಿಸುತಿರುವೆ ಗೆಳತಿ||

 

ಪದವ ಹಾಡುವ ಸಮ್ಮೋಹನ

ಗಾಯಕಿಯೆ ಸುರಮಣಿ|

ಎದೆಯ ಬಾಂದಳದಿ ನಕ್ಷತ್ರವಾಗಿ

ಮಿನುಗುತಿರುವೆ ಗೆಳತಿ||

 

ಕೋಮಲ ತನುವಿನ ಕುಮಾರಿ

ಸ್ವಪ್ನದಲಿ ಅಪ್ಪುವೆನು|

ಪ್ರೇಮಕವಿ ಅಭಿನವನ ಕವನದಿ

ಓಲಾಡುತಿರುವೆ ಗೆಳತಿ||

 

-ಶಂಕರಾನಂದ ಹೆಬ್ಬಾಳ 

 

ಚಿತ್ರ್