ಸುಂದರ ಇಂದ್ರನ ಮಾಡಿದರಲ್ಲಿ....
ಕವನ
**೧**
ನೊರೆ ನೊರೆ ಮದಿರೆ
ಉದರದಿ ಇಳಿದರೆ
ತಿಳಿಯದೆ ಬರುವುದು ಮತ್ತು!
ಹಾಗೆಯೆ ಗೆಳೆಯ
ಚದುರೆಯ ಮೆದು ತುಟಿ
ಮುದದಲಿ ಬೆರೆಸಿರೆ
ಮತ್ತನು ತರುವುದು ಮುತ್ತು!
**೨**
ಹಣ್ಣಿನ ತೋಟಕೆ
ಚೆಂದದಿ ಕಟ್ಟಲು
ಚೆಂದದ ದಾರದ ಬೇಲಿ
ಹಣ್ಣುಗಳೆಲ್ಲಾ ಅಲ್ಲೇ ಇರದೆ
ಆಗುವುದಲ್ಲವೆ ಖಾಲಿ!
ಏನಾಗುವುದು?!
ಅಂದದ ಎಲ್ಲಾ ಸುಂದರಿಯರನು
ನಂದನವನದಲಿ ದೂಡಿ
ಸುಂದರ ಇಂದ್ರನ ಮಾಡಿದರಲ್ಲಿ
ಅವರನು ಕಾಯುವ ಮಾಲಿ!
-ಮಾಲು