ಸುಂದರ ಗಝಲ್ ಗಳು

ಸುಂದರ ಗಝಲ್ ಗಳು

ಕವನ

೧.

ಮನವು ಅರಳಿತು ನೋಡು ಗೆಳೆಯ

ತನುವು ಹೊರಳಿತು ನೋಡು ಗೆಳೆಯ

 

ಒಸರು ಬಂದರು ಸೋಲು ಏತಕೊ

ಹಸಿರು ಮರಳಿತು ನೋಡು ಗೆಳೆಯ

 

ಬಯಕೆ ತಂದಿತು ಕಾಣು ಸುಖವ 

ಸವಿಗೆ ಕೆರಳಿತು ನೋಡು ಗೆಳೆಯ

 

ಮೋಹವು ಹಸಿವಿಗೆ ಉಸಿರ ಬಿಟ್ಟಿತು

ಸುಖವು ನರಳಿತು ನೋಡು ಗೆಳೆಯ

 

ಒಲವು ಕಾಣಲು ಬಾಳುವೆ ಈಶಾ

ಕನಸು ತೆರಳಿತು ನೋಡು ಗೆಳೆಯ

೨.

ಜಡತೆಯನು ಬದಿಗಿಟ್ಟು ಮೈದೂಳನು ತೆಗೆಯುತಲಿ ಏಳುತಲೆ ಬಾ ಮಗುವೆ 

ಚಿಮ್ಮಿರಲು ಹೊಮ್ಮಿರಲು ಧ್ಯೇಯ ಮನದೊಳು ಕರೆಯುತಲೆ  ಬಾ ಮಗುವೆ 

 

ಕರಿನೆರಳು ಚಾಚಿರಲು ಹೊಸಕಿ ಹಾಕಲು ಬೇಕು ಮುನ್ನುಗ್ಗು ಕ್ಷಣದಲೀ ಇಂದು

ಅತಿಯಾದ ಭ್ರಮೆಗಳನು ಕನಸಿನಲೆ ಸರಿಸಿಟ್ಟು ನೀಗುತಲೆ ಬಾ ಮಗುವೆ 

 

ಉತ್ಸಾಹ ಕಾರಂಜಿ ದೇಶದಗಲಾ ಹರಿಸಿ ನಾಡೊಳಗೆ ಮುದ ನೀಡುತಲಿ ಬಂದು

ಬಾಳುಸಿರ ಹೊನಲನ್ನು ಜೀವದೊಳು ತುಂಬಿಟ್ಟು ಸವಿಯುತಲೆ ಬಾ ಮಗುವೆ 

 

ಮೊಳಗುತಿಹ ಸ್ಪೂರ್ತಿಗಳ ಪ್ರೇರಣೆಯ ಮಿಂಚಿನಲಿ ಮತ ಸಾಗರವಾಗಲೀಯೆಂದು

ಅರಳುತಿರುವಾ ನನಸು ಶಕ್ತಿಯೊಳಗಿನಾ ಗುಟ್ಟು ತಿಳಿಯುತಲೆ ಬಾ ಮಗುವೆ 

 

ರಾಷ್ಟ್ರದುಳಿವಿಗೆಯಿಂದು ಸಾಗುವನು ಮುಂದಕೆ ವೀರ ಯೋಧನಾ ರೀತಿಯಲಿ ಈಶಾ

ನೆಲವುಳಿಯಲೀಯೆಂದು ಜಯಿಸಿ ಇರುವೆವು ಪ್ರಕೃತಿ ಮಿಡಿಯುತಲೆ ಬಾ ಮಗುವೆ 

 

.-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್