ಸುಂದರ ತಾಣ..ಪ್ರಜ್ವಲ್ ಗಾನ...

ಸುಂದರ ತಾಣ..ಪ್ರಜ್ವಲ್ ಗಾನ...

ಬರಹ

 ಮುರಳಿ ಮೀಟ್ಸ್ ಮೀರಾ...


ಪ್ರಜ್ವಲ್ ದೇವರಾಜ್ ಹೊಸ ಸಿನೆಮಾ. ಕಳೆದ ಒಂದು ಒಂದೂವರೆ ತಿಂಗಳ ಹಿಂದೆ ಮಹೂರ್ತ ಮುಗಿದಿತ್ತು. ಈಗ ನೋಡಿದ್ರೆ, ಚಿತ್ರವೇ ಸಿದ್ಧವಾಗಿದೆ. ಒಂದೇ ಸ್ಕೆಡ್ಯೂಲ್ ನಲ್ಲಿ ಚಿತ್ರ ಪೂರ್ಣಗೊಳಿಸುವ ಪ್ಲಾನ್ ಚಿತ್ರ ತಂಡದ್ದಾಗಿತ್ತು. ಆದ್ರೆ, ಮಳೆಯೋ...ಎಲ್ಲವನ್ನೂ ಏರು-ಪೇರು ಮಾಡಿತು. ಅಂದುಕೊಂಡದ್ದಕ್ಕಿಂತ ಕೆಲವು ದಿನ ಹೆಚ್ಚೇ ಆಗಿದೆ. ಆದರೂ ನೋ ಪ್ರಾಬ್ಲಂ ಅಂತಲೇ ನಿರ್ದೇಶಕ ಯೋಗೇಶ್ ಹುಣಸೂರು ಮೊದಲ ನಿರ್ಮಾಣದ ತಮ್ಮ ಚಿತ್ರಕ್ಕೆ ಅದೇ ಉತ್ಸಾಹದಲ್ಲಿಯೇ ಸಾಗುತ್ತಿದ್ದಾರೆ.ಚಿತ್ರದ ಹಾಡುಗಳಿಗಾಗಿ ಅದ್ಭುತವೆನಿಸುವ ತಾಣವನ್ನೇ ಹೆಕ್ಕಿ ತೆಗೆದಿದೆ ಇವರ ತಂಡ....

ಹೌದು...! ಈಗ ಇಲ್ಲಿ ಹೆಚ್ಚು ಮಾತನಾಡಲು ಹೊರಟಿರೋದು ಇದನ್ನ. ಬೆಂಗಳೂರಿನ ಹೆಸರಗಟ್ಟದಲ್ಲಿ ಒಂದು ಪ್ಲೇಸ್ ಇದೆ. ಇಲ್ಲಿ ಆದರ್ಶ ಫಿಲ್ಮ ಇನ್ಸ್ ಟಿಟ್ಯೂಟ್ ಸಹ ಇದೆ. ಹಾ!!! ಇದರ ಪಕ್ಕದಲ್ಲಿಯ ಬಯಲು ಪ್ರದೇಶ ನಿಜಕ್ಕೂ ಸುಂದರ ತಾಣ. ಕೆಮ್ಮಣಗುಂಡಿ..ಇಲ್ಲವೋ ಸಕಲೇಶಪುರದ ಹಚ್ಚಹಸಿರ ಅನುಭವ ಇಲ್ಲಿಗೆ ಬಂದವರಿಗೆ ಕಂಡಿತ ಆಗುತ್ತದೆ. ಅಂತಹ ಚೆಂದನೆಯ ಜಾಗದಲ್ಲಿ ಹೆಚ್ಚು ಫೈಟ್ ಸೀನ್ ಗಳೆ ಶೂಟ್ ಆಗುತ್ತವೆ.

ಆದ್ರೆ, ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ಗೆ ಅದ್ಯಾವಾಗ ಹೊಳೆಯಿತೋ ಏನೋ. ಹೆಸರಗಟ್ಟದ ಸ್ಥಳಕ್ಕೆ ಬಂದು ಪಕ್ಕಾ ಪ್ಲ್ಯಾನೇ ಹಾಕಿಕೊಂಡಿದ್ದಾರೆ. ರಾಜಸ್ಥಾನಿ ಬ್ಯಾಕ್ ಡ್ರಾಪ್ ನಲ್ಲಿ ತಮ್ಮ ಚಿತ್ರದ ಹಾಡೊಂದನ್ನ ಚಿತ್ರೀಕರಣಿಸಲು ಶುರು ಮಾಡಿದ್ದಾರೆ.

ುಜ್ಜರು
ತೊಡುವ ಉಡುಗೆಯನ್ನ ಧರಿಸಿದ ಮಕ್ಕಳು. ಅಲ್ಲಿಯ ಸಂಸ್ಕೃತಿಯನ್ನ ಬಿಂಬಿಸುವ ಮಹಿಳೆಯರು ಮತ್ತು ಪುರುಷರು ಹೆಸರುಗಟ್ಟದ ಮನಮೋಹಕ ಜಾಗದಲ್ಲಿ ಕಂಗೊಳಿಸುತ್ತಿದ್ದರು. ಕನ್ನಡ ಚಿತ್ರಕ್ಕೊಂದು ಸಿಂಪಲ್ ಬ್ಯಾಕ್ ಡ್ರಾಪ್ ಥರ ಕಾಣಿಸುತ್ತಿದ್ದರು...


ಇವರ
ಮಧ್ಯೆ ಪ್ರಜ್ವಲ್ ದೇವರಾಜ್ ಮತ್ತು ಹರ್ಷಿಕಾ ಪೊನ್ನಚ್ಚ ಕುಣಿಯುತ್ತಿದ್ದರು. ಧರಿಸಿದ ವೈಟ್ ಅಂಡ್ ವೈಟ್ ಡ್ರೆಸ್ ಇಲ್ಲಿ ಮಿರ..ಮಿರನೇ ಮಿಂಚುವಂತೆ ಮಾಡಿತ್ತು. ನ್ಯಾಚುರಲ್ ಲೈಟ್ಸ್ ಜೊತೆ..ಜೊತೆಗೇನೆ ಸೆಟ್ ಹುಡುಗರು ಸಟ್ ಮಾಡುವ ಲೈಟ್ಸ್ ಜೋಡಿಯ ಮಿಂಚಿನ ಮೋಡಿಯನ್ನ ಇನ್ನಷ್ಟು ಹೆಚ್ಚಿಸುತ್ತಿದ್ದವು. ದನ್ ಕುಮಾರ್ ಮಾಸ್ಟರ್ ಹೇಳಿಕೊಟ್ಟ ಹೆಜ್ಜೆಗೆ ಹೆಜ್ಜೆ ಹಾಕುವಾಗ ನವ ಜೋಡಿ ಕಣ್ಮಣ ಸೆಳೆಯುತ್ತಿತ್ತು. ಕಾರಣ, ಅಷ್ಟು ಚೆನ್ನಾಗಿದೆ ತೆರೆ ಮೇಲಿನ ಫೇರ್...


ಸಂಗೀತ
ನಿರ್ದೇಶಕ ಅಭಿಮಾನ್ ರಾಯ್ ಒಂದು ಹಾಡು ಬರೆದುಕೊಟ್ಟಿದ್ದಾರೆ. ಇದು ಇಲ್ಲಿಯ ಹಸಿರಿನ ನಡುವೆ ಭಿನ್ನ ವಿಭಿನ್ನವಾಗಿ ಚಿತ್ರೀಕರಿಸಲ್ಪಡಲಿದೆ. ಒಂದು ಹಾಡಿನ ನಂತರ ತಂಡ ಮತ್ತೊಂದು ಗೀತೆಯ ಶೂಟಿಂಗ್ ಮಾಡಲಿದೆ. ಇದಾದ ಮೇಲೆ ಬರುವ ನವೆಂಬರ್ ಹೊತ್ತಿಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ನೋಡಿ ಎಂಜಾಯ್ ಮಾಡಿ...


-ರೇವನ್ ಪಿ.ಜೇವೂರ್