ಸುಂದರ ಬಾಲ್ಯ...

ಸುಂದರ ಬಾಲ್ಯ...

ಕವನ

ಜೀವನದ ಮರೆಯಲಾಗದ ಮಧುರ ನೆನಪಿನಲಿ

ಹಳ್ಳಿಯ ಬಾಲ್ಯದ ನೆನಪುಗಳನೆಂತು ಬಣ್ಣಿಸಲಿ!

 

ಬಾಲ್ಯದಲಿ ಬೇಸಿಗೆಯ ರಜಕೆ ಹಳ್ಳಿಗೆ ನಾ ದೌಡು

ಕೂಡು ಕುಟುಂಬದ ಸಂಗಮ ಜಾತ್ರೆಯ ನೋಡು

ಅದು ಅಜ್ಜ-ಅಜ್ಜಿ; ಚಿಕ್ಕಪ್ಪ-ಚಿಕ್ಕಮ್ಮಸಂಗಮ ಕ್ಷೇತ್ರ

ಅಣ್ಣ-ತಮ್ಮ; ಅಕ್ಕ-ತಂಗಿಯರ ಜೊತೆ ಎನ್ನ ಪಾತ್ರ!

 

ಕಣಗಲೆ ಹೂವ ಕಡ್ಡಿಗೆ ಸಿಕ್ಕಿಸಿ ಓಡಿ ನಲಿದೆವಂದು

ಈಜಾಡಿ ನಲಿದೆವು ನಾವು ಹರಿವ ನದಿಯ ಕಂಡು

ಹುಣಿಸೆ ಹಣ್ಣಿನ ಕೊಚ್ಚಿಂಡಿಯ ಕುಟ್ಟಿದ್ದೇ ಕುಟ್ಟಿದ್ದು

ಮಾವಿನ ಕಾಯಿ ಮರದಿ ಕಿತ್ತು ತಿಂದದ್ದೇ ತಿಂದದ್ದು!

 

ಮತ್ತೆ ಕರೆದರೆ ಬರುವುದೇ ಆ ಸುಂದರ ಸಿಹಿ ಬಾಲ್ಯ

ಜೀವನ ಸಂಜೆಯಲಿ ಅದೇ ಮಧುರ ನೆನಪ ಮೌಲ್ಯ

ಈ ಬಾಲ್ಯದ ಜೀವನಕಿಲ್ಲ ಯಾವುದೇ ಪೂರ್ವಾಪರ

ಮತ್ತೆ ದೊರೆಯದ ಜೀವನದೀ ಮಹಾ ಮನ್ವಂತರ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್