ಸುಂದರ ಸಂಜೆ

ಸುಂದರ ಸಂಜೆ

ಕವನ

ಅಪರೂಪದ ಅತಿ ಸುಂದರ

ಹಿತವಾಗಿದೆ ಈ ಸಂಜೆ

ಜೊತೆಯಾಗಿಯೆ ಇರೆ ಪ್ರೇಯಸಿ

ಅದ ನೋಡುತ ನಾ ನಿಂದೆ||ಪ||

 

ಹೊನ್ನಿನ ಬಣ್ಣದ ಸೆರಗನು ಚಾಚಿದೆ

ಶರಧಿಯು ಸೂರ್ಯನ ಸ್ವಾಗತಕೆ

ಕಡಲಿಗೆ ಒಲಿಯುತ ನೇಸರ ಇಳಿದರೆ

ಅಗಲಿಕೆ ಚಿಂತೆಯು ಆಗಸಕೆ

 

ಚಿಲಿಪಿಲಿಗುಟ್ಟುವ ಹಕ್ಕಿಗಳಾತುರ

ಗೂಡನು ಸೇರುವ ತವಕದಲಿ

ಸೂರ್ಯನು ಮುಳುಗಲು ಈ ದಿನ ಮುಗಿಯಿತು

ಕತ್ತಲು ಬರಲಿದೆ ಜೊತೆಯಲ್ಲಿ

 

ಹಸಿರಿನ ಗಿಡಮರ ರೋಧಿಸ ತೊಡಗಿರೆ

ದಿನಕರ ನೀಡುವ ವಾಗ್ದಾನ

ಇರುಳಿದು ಕಳೆಯಲಿ ಮರಳುವೆ ಗಗನಕೆ

ತೊರೆಯಿರಿ ಮನಸಿನ ಅನುಮಾನ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್