ಸುಂದರ
ಸುಂದರ
ಮಾವಿನಲ್ಲಿ ಸವಿಯನಿಟ್ಟ ದೇವನೆಷ್ಟು ಸುಂದರ.
ಇವನ ರುಚಿಯು ಮಾವಿಗಿಂತ ಬಹಳಪಟ್ಟು ಸುಮಧುರ.//ಪ//.
ಪಾಕ ಶಾಖಕಾಗಿ ನಮಗೆ ಅಗ್ನಿಯನ್ನು ಉರಿಸಿದ,
ದಾರಿ ದೀಪವಾಗಲೆಂದು ಬೆಳದಿಂಗಳ ಕಳುಹಿದ,
ಸೂರ್ಯನಲ್ಲು ತನ್ನ ಅಂಶ ತುಂಬಿ ನಮ್ಮ ಬೆಳಗಿದ,
ಇವನ ಹೊಳಪು ಅಗ್ನಿ ಚಂದ್ರ ಸೂರ್ಯರನ್ನು ಮೀರಿದೆ.//೧//.
ಹೂವಿನಲ್ಲಿ ಅಂದವಿಟ್ಟ ಚಂದ ಚಮತ್ಕಾರಿಯು,
ಹಾವಿನಲ್ಲಿ ವಿಷವನಿಟ್ಟ ಹಾಲಾಹಲದ ವಾಸಿಯು,
ಗೋವಿನಲ್ಲಿ ಹಾಲನಿಟ್ಟ ಗೀತಗೋವಿಂದನು,
ಜಗವನೆಲ್ಲ ಬಾಯಿಗಿಟ್ಟ ಆನಂದಕಂದನು.//೨//.
ನೀರಿನಲ್ಲಿ ಮೀನು ಬಿಟ್ಟ ಮೀನಾವತಾರವು,
ಭೂಮಿಯಲ್ಲಿ ನೀರು ಬಿಟ್ಟ ಹರಿಯು ನಿರಾಕಾರಿಯು,
ಗಾಳಿಯಲ್ಲಿ ಧರೆಯ ಹಾರಿಬಿಟ್ಟ ಆದಿಶೇಷನು,
ಜಗದಜನಕ ಬ್ರಹ್ಮನಿವನ ಉದರದಲ್ಲಿ ಜನಿಸಿದ.//೩//
-:ಅಹೋರಾತ್ರ.