ಸುಕ್ಕುಗಳು ಹೀಗೆಯೆ...
ಕವನ
ಸುಕ್ಕುಗಳು ಹೀಗೆಯೆ
ತುಕ್ಕು ಹಿಡಿದಾ ಹಾಗೆ
ಕಬ್ಬಿಣಕ್ಕೂ ಮನಸ್ಸಿಗೂ
ಎಲ್ಲಿಂದೆಲ್ಲಿಯ ಸಂಬಂಧ ?
ಕಬ್ಬಿಣದಿಂದ ಎಷ್ಟೆಲ್ಲ
ಕೆಲಸಗಳಾಗುತ್ತಿಲ್ಲವೆ ?
ಹಾಗೇ, ಮನಸ್ಸಿಂದಲೂ ಕೂಡ !
ಮನ ಮನಗಳು ಜೊತೆಯಾದಾಗ
ಜೀವಗಳು ಒಂದಾದಲ್ಲಿ ತಪ್ಪಿದೆಯೇ ?
ಕೋಪವಿಲ್ಲದ ತನುವುಗಳು
ಹತ್ತಿರವಿದ್ದಷ್ಟೂ
ಬಾಳು ಸಹಜ ಸುಂದರವಲ್ಲವೆ ?
ಕೈ ಮುಗಿದ ಕೂಡಲೇ
ದೇವರು ಬರುವನೇ ?
ನಿರ್ಮಲ ಮನಸಿರಬೇಡವೆ ?
ಪ್ರತಿಯೊಂದು ಹೀಗೆ;
ಪ್ರತಿಯೊಂದು ಹಾಗೆ !!
ಎದೆ ಎದೆಯೊಳಗಿನ ಪ್ರೀತಿ ಬರಿದೆ ಪ್ರತಿಮೆಯೆ ?
ಹಾಗಾದರೆ ಪ್ರೇಮ ಎಲ್ಲಿದೆ
ಎಂದರೆ ? ಆದರೆ ,ಹೋದರೆ
ಇದರಲ್ಲೇ ಮುಳುಗಿ ಹೋದರೆ ?
ಬಾಳು ಸುಕ್ಕುಗಳಲ್ಲೇ ಮುಳುಗಬಹುದು;
ಬದುಕು ಹೀಗೆಯೇ ಕಳೆದು ಹೋಗಬಹುದು !!
-ಹಾ ಮ ಸತೀಶ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್