ಸುಖದ ದಾರಿಯಲ್ಲಿ...

ಸುಖದ ದಾರಿಯಲ್ಲಿ...

ಕವನ

ಸತ್ಯ ನುಡಿದು ಯಾಕೆ ನಾನು ನಿಮ್ಮ ನಡುವೆ ಕೆಡಲಿ

ನಿತ್ಯ ಸುಳ್ಳ ಹೇಳಿ ಹೇಗೆ ನಾಡಿನಲ್ಲಿ ಇರಲಿ!

 

ಪೀಠ ಪೇಟ ಕೂಟದೊಲವು ಕೆಡಿಸಿತೆದೆಯ ಕೊಳವ

ತೋಟ ತುಂಬಾ ಹಾತೆ ಕೀಟ

ಬೆಳೆಯ ಬಿಡದು ಬುಡವ!

 

ನಗುವ ನಡುವೆ ಬದುಕ ಬೇಕು

ನಗುವೆ ಆಗಿದೆ ವಿಷಮ

ಜಗದ ಕಣ್ಣೆ ಕುರುಡು ಕುಸಿದು ಹೋಗಿ ನೀತಿ ನಿಯಮ! 

 

ನಾಕ ನರಕ ಮರೆತ ಜನಕೆ ಧರೆಯ ಸುಖವೆ ಸೆಳೆತ

ಸಾಕು ಅನುವ ಗುಣವೆ ಇರದೆ

ಕೊಡದಿ ಪಾಪ ಮೊರೆತ!

 

ದೊರೆಯು ಕರೆಯುವಾಗ ಹೋಗಬೇಕು ಸಮಯ ಇರದು

ದೊರೆತ ಸಮಯ ಬೆರೆತು ಬಾಳು ಮತ್ತೆ ನೋವು ಬರದು!

 

- ಕಾ.ವೀ.ಕೃಷ್ಣದಾಸ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್