ಸುಭಾಷರ ಸಂಸ್ಮರಣೆ
ಕವನ
ಭಾರತ ದೇಶದ ಕಣ್ಮಣಿ ಇವರು
ಅವರೇ ನಮ್ಮ ನೇತಾ ಸುಭಾಷರು
ಅಪ್ಪಟ ಮಹಾ ದೇಶಪ್ರೇಮಿ ಇವರು
ನ್ಯಾಯ, ನೀತಿಯಲಿ ಸಿರಿವಂತರು .
ಜನಕ ಜಾನಕಿನಾಥ ಬೋಸರು....
ಜನನಿ ಪ್ರಭಾವತಿ ಸುಪುತ್ರರು...
ಸುಸಂಸ್ಕೃತ ಮನೆತನದ ಮಾಣಿಕ್ಯರು
ಭಾರತ ದೇಶಕ್ಕೆ ದೊರೆತ ಚಾಣಾಕ್ಷರು.
ವಿದ್ಯೆ ಬುದ್ಧಿಯಲಿ ಮಹಾ ಪ್ರವೀಣರು
ದೇಶ ಸೇವೆಗಾಗಿ ತನು ಮನವ ತೆತ್ತರು
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು
ಸ್ಪೂರ್ತಿಯ ಸೆಲೆಯಾಗಿ ಮಹಾನ್ ಸೈನಿಕರು.
ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದವರು
ಬ್ರಿಟೀಷರೊಡನೆ ಸೆಣಿಸಿದ ವೀರಾದಿ ವೀರರು
ತ್ಯಾಗ, ಪರಿಶ್ರಮದಲ್ಲಿ ಸ್ವಾತಂತ್ರ್ಯವೆಂದರು
ದೇಶದ ಐಕ್ಯತೆ, ಸಮಗ್ರತೆಗಾಗಿ ದುಡಿದರು.
ಸ್ವಾತಂತ್ರ್ಯ ನಮ್ಮ ಜನ್ಮಸಿದ್ಧ ಹಕ್ಕೆಂದವರು
ನೆತ್ತರು ಕೊಡಿ ಸ್ವಾತಂತ್ರ್ಯ ಕೊಡಿಸುವೆನೆಂದವರು
ವಿಮಾನ ದುರಂತದಲ್ಲಿತ್ತು ನಿಗೂಢ ಸಾವು
ಇತಿಹಾಸದ ಪುಟದಲ್ಲಿವರು ಅಜರಾಮರು.
-ವೀಣಾ ಕೃಷ್ಣಮೂರ್ತಿ, ದಾವಣಗೆರೆ.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್