ಸುಭಾಷ್ ನೇತಾಜಿಯಾಗಲು ಕಾರಣನಾದ ವಿವೇಕಾನಂದರು
ನೇತಾಜಿ ಸುಭಾಷ್ ಚಂದ್ರ ಬೋಸ್ ಯಾರಿಗೆ ತಾನೇ ತಿಳಿದಿಲ್ಲ. ಅವರ ಹೆಸರು, ಭಾವಚಿತ್ರ ನೋಡಿದರೆ ಇಂದಿಗೂ ಯುವಕರಲ್ಲಿ ರಕ್ತ ಸಂಚಲನ ದ್ವಿಗುಣಗೊಳ್ಳುತ್ತದೆ. ಒಂಟಿಯಾಗಿ ನಿಂತು ಒಂದು ಸೈನ್ಯ ಕಟ್ಟಿ 'ಸ್ವಾತಂತ್ರ್ಯವೆಂಬುದು ನೀಡುವುದಲ್ಲ, ತೆಗೆದುಕೊಳ್ಳುವುದು' ಎಂದು ಘರ್ಜಿಸಿದ ಎಂಟೆದೆಯ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್.
ಲಕ್ಷಾಂತರ ಸ್ವಾತಂತ್ರ್ಯ ಹೋರಟಗಾರರಿಗೆ ಸ್ಪೂರ್ತಿಯಾಗಿದಿದ್ದು ಸ್ವಾಮಿ ವಿವೇಕಾನಂದರು ಮತ್ತು ಅವರಿಗಿದ್ದ ದೇಶದ ಪ್ರೇಮ.
ಅಂತಹವರಲ್ಲಿ ಮುತ್ತಿನಂತವನು ಈ ಸುಭಾಷ್, ಆತನಿಗೂ ಆದರ್ಶ ಸ್ವಾಮಿಗಳೆ.
ಅಂದು 23 ಜನವರಿ 1897. ಅಮೇರಿಕ ಮತ್ತು ಯೂರೊಪ್ ಗಳಲ್ಲಿ ಸಂಚಲನ ಮೂಡಿಸಿ ಭಾರತಕ್ಕೆ ಮರಳಿ ಮೊದಲ ಬಾರಿಗೆ ಸ್ವಾಮಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ದಿನ.
'ಭಾರತದ ಕತ್ತಲ ದಿನಗಳು ಮುಗಿಯಲಿವೆ, ಶಕ್ತಿಗಳು ಉದ್ಬವಿಸಲಿದೆ, ಇನ್ನೂ ಭಾರತ ಮಾತೆಯನ್ನು ತಡೆಯಲು ಯಾರಿಂದಲು ಸಾಧ್ಯವಿಲ್ಲ' ವೆಂದು ಭವಿಷ್ಯ ನುಡಿದರು.
ಅಂದು ಸಂಜೆಯೆ ಸುಭಾಷ್ ಜನ್ಮ ತಾಳುತ್ತಾನೆ. ಸ್ವಾಮಿಗಳ ಶಕ್ತಿ ಉದ್ಬವಿಸಲಿದೆ ಎಂಬ ಮಾತು ನಿಜವಾಗುತ್ತದೆ.
ಇದು ಅನೀರಿಕ್ಷಿತವ, ವಿಸ್ಮಯವ, ಇಲ್ಲ ಸ್ವಾಮಿಗಳಿಗೆ ನಿಜವಾಗಲು ಇದು ತಿಳಿದಿತ್ತ? ಅಚ್ಚರಿಯ ಸಂಗತಿ.
ಚಿಕ್ಕ ವಯಸ್ಸಿನಿಂದಲು ಸ್ವಾಮಿಯವರ ಬಗ್ಗೆ ಒದಿಕೊಂಡ ಸುಭಾಷ್ ಗೆ ಸನ್ಯಾಸಿಯಾಗುವ ಇಚ್ಚೆವಿರುತ್ತದೆ. ಸ್ವಾಮಿಯವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಸುಭಾಷ್ ಗೆ ದೇಶದ ಪ್ರೇಮ ಹೆಚ್ಚಾಗ ತೊಡಗುತ್ತದೆ.
ಒಮ್ಮೆ ಸಂನ್ಯಾಸಿಯಾಗುವ ನಿರ್ಧಾರದಿಂದ ಬೇಲೂರು ಆಶ್ರಮಕ್ಕೆ ಬೇಟಿ ನೀಡಿದ ಸುಭಾಷ್ ಗೆ ಅಂದಿನ ರಾಮಕೃಷ್ಣ ಆಶ್ರಮದ ಅದ್ಯಕ್ಷರಾಗಿದ್ದ ಸ್ವಾಮಿ ಬ್ರಹ್ಮನಂದ ಮತ್ತು ಸ್ವಾಮಿ ಶಾರದನಂದರು ಸುಭಾಷ್ ಗೆ ' ನಿನ್ನಿಂದ ದೇಶಕ್ಕೆ ಆಗುವ ಕೆಲಸ ಭಾರಿಯಿದೆ' ಎಂದು ಮನೆಗೆ ಇಂತಿರುಗಿಸುತ್ತಾರೆ.
ನಂತರ ಸುಭಾಷ್ ಮಾಡಿದ ಸಾಧನೆ ಏನೆಂದು ನಾನು ಹೇಳಬೇಕಿಲ್ಲ. ತನ್ನ ಜೀವನವಿಡೀ ಸ್ವಾಮಿ ವಿವೇಕಾನಂದರ ಮಾತುಗಳನ್ನು ಪಾಲಿಸುತ್ತಾ ಬದುಕಿದ ಸಾಹಸಿ ಸುಭಾಷ್.
'ಇಂದು ಸ್ವಾಮಿ ವಿವೇಕಾನಂದರು ಬದುಕಿದ್ದರೆ ನಾನು ಇವೆಲ್ಲವನ್ನು ಬಿಟ್ಟು ಅವರ ಪಾದ ಸೇವೆ ಮಾಡಿಕೊಂಡು ಜೀವಿಸುತ್ತಿದ್ದೆ' ಎಂದು ಬರೆದುಕೊಳ್ಳುತ್ತಾರೆ ಸುಭಾಷ್.
ಒಬ್ಬ ವ್ಯಕ್ತಿಯ ಬದುಕು, ಮಾತುಗಳು ಒಬ್ಬ ಸಾಮಾನ್ಯ ಸುಭಾಷ್ ನನ್ನು ನೇತಾಜಿಯಾಗಿ ಮಾಡುವುದೆಂದರೆ ಏನು?
ನಾವೆಲ್ಲರೂ ಒಂದಾಗೊಣ, ಸ್ವಾಮಿಯ ಆದರ್ಶವನ್ನು ಪಾಲಿಸೊಣ, ದೇಶಕ್ಕಾಗಿ ಚಿಂತಿಸೋಣ.
ನಮ್ಮ ಜೀವನವನ್ನು ಸಮರ್ಪಿಸಿಕೊಳ್ಳೋಣ.
- ಮುರಳಿ