ಸುಳ್ಳಿನ ನೆರಳಲ್ಲಿ ಸತ್ಯ

ಸುಳ್ಳಿನ ನೆರಳಲ್ಲಿ ಸತ್ಯ

ಕವನ

ಸತ್ಯಕ್ಕೆ ಸಾವಿಲ್ಲ ಅಂದವರಾರು?
ಸುಳ್ಳು ಸಾಯಿಸುತ್ತದೆ 
ಜನಗಳನ್ನು ಮನಗಳನ್ನು 
ಕೊನೆಗೆ ಸತ್ಯವನ್ನೂ

ಸುಳ್ಳು ಆಕರ್ಷಣೀಯ  
ಸತ್ಯ ಕಡೆಗಣನೀಯ

ಸುಳ್ಳಂತೂ ವಾಚಾಳಿ 
ಸತ್ಯವೋ ಗಂಭೀರ

ಸುಳ್ಳು ಮುದ ನೀಡುವ ಮೆತ್ತೆ
ಸತ್ಯ ಕಾಲಿಗೆ ಚುಚ್ಚುವ ಮುಳ್ಳು

ಸುಳ್ಳಿನದು ಪ್ರಚಾರಪ್ರಿಯತೆ
ಸತ್ಯದ್ದು ದಿವ್ಯ ನಿರ್ಲಕ್ಷತೆ

ಸುಳ್ಳಿಗಿದೆ ಶರವೇಗ
ಸತ್ಯಕ್ಕಿಲ್ಲ ಆ'ವೇಗ'

ಸುಳ್ಳಿಗಿಲ್ಲ ಎಲ್ಲೆ
ಸತ್ಯಕ್ಕಿಲ್ಲ ಬೆಲೆ

ಸುಳ್ಳಿಗುಂಟು ಸಹಸ್ರಾರು 
ಹರಿಕಾರರು(ಹಾಹಾಕಾರರು?)
ಸತ್ಯಕ್ಕೆ ಕಡ್ಡಾಯ ಬೇಕು
ಅನ್ವೇಷಿಗರು

 

ಚಿತ್ರ: Google images 

ಚಿತ್ರ್