ಸುವರ್ಣ ಸಂಪುಟ

ಸುವರ್ಣ ಸಂಪುಟ

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕರು: ಪುತಿನ, ದೇಜಗೌ, ಚೆನ್ನವೀರ ಕಣವಿ, ಹಾಮಾನಾ, ಪ್ರಭುಶಂಕರ
ಪ್ರಕಾಶಕರು
ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು
ಪುಸ್ತಕದ ಬೆಲೆ
ರೂ.೩೫.೦೦, ಮುದ್ರಣ: ೧೯೮೦

ಮೈಸೂರು ವಿಶ್ವವಿದ್ಯಾನಿಲಯದ ‘ಪ್ರಸಾರಾಂಗ' ವಿಭಾಗದಿಂದ ೧೯೮೦ರಲ್ಲಿ ಪ್ರಕಟವಾದ ಪುಸ್ತಕವೇ ‘ಸುವರ್ಣ ಸಂಪುಟ' ಕನ್ನಡದ ಖ್ಯಾತ ಕವಿಗಳ ಕನ್ನಡ ಭಾವಗೀತೆಗಳ ಸಂಕಲನವಿದು. ಪು.ತಿ.ನ., ದೇ, ಜವರೇಗೌಡ, ಚೆನ್ನವೀರ ಕಣವಿ, ಹಾ ಮಾ ನಾಯಕ ಹಾಗೂ ಪ್ರಭುಶಂಕರ ಮುಂತಾದ ಪ್ರಸಿದ್ಧ ವ್ಯಕ್ತಿಗಳು ಸಂಪಾದಿಸಿದ ಅಮೂಲ್ಯ ಪುಸ್ತಕವಿದು. ಈ ಪುಸ್ತಕ ಮತ್ತೆ ಮರು ಮುದ್ರಣ ಕಂಡಿದೆಯೋ ತಿಳಿದಿಲ್ಲ. ಇದೊಂದು ಸಂಗ್ರಹ ಯೋಗ್ಯ ಕೃತಿ. ಹಲವಾರು ಮಹಾನ್ ಕವಿಗಳ ಅತ್ಯಮೂಲ್ಯ ಕವನಗಳು ಈ ಪುಸ್ತಕದಲ್ಲಿವೆ. 

ಇಲ್ಲಿರುವ ಕವಿಗಳ ಕವನಗಳು ಬೇರೆ ಬೇರೆಯಾಗಿ ಪ್ರತ್ಯೇಕ ಕವನ ಸಂಗ್ರಹಗಳಲ್ಲಿ ಪ್ರಕಟವಾಗಿವೆ. ಆದರೆ ಖ್ಯಾತ ಕವಿಗಳ ಅಪರೂಪದ ಕವಿತೆಗಳು ಒಂದೆಡೆ ಓದುವ ಅಪರೂಪದ ಅವಕಾಶ ಈ ಪುಸ್ತಕ ಒದಗಿಸಿಕೊಟ್ಟಿದೆ ಎಂದರೆ ತಪ್ಪಾಗಲಾರದು. ಈ ಪುಸ್ತಕದಲ್ಲಿ ಮಂಜೇಶ್ವರ ಗೋವಿಂದ ಪೈ, ಪಂಜೆ ಮಂಗೇಶ ರಾಯರಿಂದ ಹಿಡಿದು ಸಿದ್ದಯ್ಯ ಪುರಾಣಿಕರ ತನಕ ಸುಮಾರು ೧೨೦ ಕವಿಗಳ ಕವನಗಳ ಸಂಗ್ರಹವಿದೆ.

ಸುಮಾರು ೫೭೦ ಪುಟಗಳುಳ್ಳ ಈ ಪುಸ್ತಕದ ಕೊನೆಯಲ್ಲಿ ಎಲ್ಲಾ ಕವಿಗಳ ಚುಟುಕಾದ ಪರಿಚಯವನ್ನು ನೀಡಿದ್ದಾರೆ. ಪ್ರತಿಯೊಂದು ಕವಿಗಳ ಕನಿಷ್ಟ ಎರಡಾದರೂ ಕವನಗಳು ಈ ಸಂಗ್ರಹದಲ್ಲಿವೆ. ಹಳೆಯ ಪುಸ್ತಕ ಎಲ್ಲಾದರೂ (ಗ್ರಂಥಾಲಯ) ಸಿಕ್ಕರೆ ಖಂಡಿತಾ ಓದಿ ಕವನಗಳ ಸೊಗಡನ್ನು ಆನಂದಿಸಬಹುದು.