ಸು೦ದರ ಕಾರವಾರ

ಸು೦ದರ ಕಾರವಾರ

ಬರಹ

ಪಡುವಣ ಬಾನಲಿ ಸಾಗುತ ಮೊಡ,
ತು೦ತುರ ಹನಿಗಳ ಸುರಿದವು ಚೂರ;
ನಮ್ಮೂರ ಮು೦ಗಾರು ಬಾರಣ್ಣ ನೊಡ,
ಆರಬ್ಬಿ ಸಾಗರ ದ೦ಡೆಯ ತೀರ

ಹಸಿರು ಹಾಸಿದೆ ಬಾಡ,ಚೆ೦ಡಿಯೆ;
ಮುಗಿಲು ಮುಟ್ಟುವ ಆ ಗುಡ್ಡೆ ಬ೦ಡೆ,
ವಿರಮಿಸುತ್ತ ಸಹ್ಯಾದ್ರಿಯ ಮೆಲೆ
ಕೈ ಬೀಸಿ ಕರೆಯುತಿದೆ ನೀ ಇಲ್ಲಿ ಬಾರ

ಮುಗ್ದ ಜನತೆಯ ಕರಾವಳಿ ನಾಡ,
ಪಸ್ಚಿಮ ಮಲೆಯ ಹಸಿರು ನೋಡ
ಸಾಗರದಾಳದ ಆ ದಾರಿ ದ್ವೀಪ,
ದಿವ್ಗಡ, ಕಾರ್ಕಳ, ಅ೦ಜದ್ವೀಪ,

ಕವಿ ರವಿ ಹೊಗಳಿದ ಕನ್ನಡ ಊರ,
ಕದ೦ಬರಾಳಿದ ಈ ವೀರ ನಾಡ,
ವೀರ ರ್‍ಆಣೆ ಹುಟ್ಟಿದ ಬೀಡ
ಬ೦ದು ನೊಡಯ್ಯ ಸೊಗಸಿನ ಊರ,
ಸು೦ದರ ಸೊಗಸಿನ ಕಾರವಾರ ತೀರ;

- ವಿಧಾತಾ