ಸೂಕ್ತಿಗಳ ಸಂಗ್ರಹ

ಸೂಕ್ತಿಗಳ ಸಂಗ್ರಹ

೧--ಅಧಿಕಾರದ ಮದದಿಂದ ನೈತಿಕತೆಯ ಪತನವಾಗುತ್ತದೆ.

೨-ಅಸೂಯೆ ಮಾನವನ ಸರ್ವ ನಾಶ ಮಾಡುತ್ತದೆ.

೩-ಪರರಿಗೆ ಪೀಡಿಸುವುದ ಬಿಡು, ಸಾಧ್ಯವಿದ್ದರೆ ಉಪಕಾರ ಮಾಡು.

೪-ದಯೆ ಜೀವಮಾನವಿಡೀ ಬೆಂಬಿಡದೆ ಬರಬೇಕು.

೫-ಮೂರ್ಖನ ಕೈಗೆ ಯಾವತ್ತೂ ಅಧಿಕಾರ ಕೊಡಬಾರದು.

೬-ನೀರಿನ ಮೇಲೆ ದೋಣಿ ಇರಬಹುದು. ಆದರೆ ದೋಣಿಯೊಳಗೆ ನೀರು ಇರಬಾರದು.

೭--ಹಿಂಸೆಯಿಂದ ಮಾನವನ ಆತ್ಮಶಕ್ತಿ ಕುಗ್ಗಿಸಲು ಸಾಧ್ಯವಿಲ್ಲ.

೮-ನಿಧಾನವಾಗಿ ಚಿಂತಿಸಿ, ಆಲೋಚಿಸಿ ಯಾವುದೇ ಕಾರ್ಯ ವನ್ನು ನೋಡಿ, ನಂತರ ಶೀಘ್ರವಾಗಿ ಜಾರಿಗೆ ತರಬೇಕು.

೯--ಚಿಂತೆ ಎಂದರೆ ಒಂದು ರೀತಿಯ ಹೆದರಿಕೆ, ಅಂಜಿಕೆ ಸಹ. ಈ ಹೆದರಿಕೆ ಮನಸ್ಸನ್ನು ಉದ್ವಿಘ್ನಗೊಳಿಸುತ್ತದೆ. ಹಾಗಾಗಿ ಚಿಂತೆಯನ್ನು ಒಳ್ಳೆಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳೋಣ.

೧೦-ಜೀವನದ ಒಂದು ಸೆಕೆಂಡ್ ಸಹ ಅಮೂಲ್ಯ. ಹಾಳು ಮಾಡದಿರೋಣ.

(ಸಂಗ್ರಹ: ಶ್ರೀ ಸೂಕ್ತಿಸಾರ, ಜೀವನಾನುಭವ)

-ರತ್ನಾ ಕೆ.ಭಟ್, ತಲಂಜೇರಿ