ಸೂಪರ್ ಜಾಹಿರಾತು ಲೆಟ್ಸ್ ಟೀಚ್ ಇಂಡಿಯಾ

ಸೂಪರ್ ಜಾಹಿರಾತು ಲೆಟ್ಸ್ ಟೀಚ್ ಇಂಡಿಯಾ

ಬರಹ

ನಾವೆಲ್ಲಾ ಆಗಾಗ್ಗೆ ಗಮನಿಸಿರುತ್ತೇವೆ, ನಮ್ಮ ಸಿನಿಮಾ ನಿರ್ದೇಶಕರು ಸಮಾಜಕ್ಕೆ ಸಂದೇಶ ನೀಡುವಂತಹ ಸಿನಿಮಾ ಮಾಡ್ತಾ ಇದೀವಿ ಅಂತ ಹೇಳುತ್ತಿರುತ್ತಾರೆ. ಆದರೆ ಆ ಸಿನಿಮಾಗಳು ಪ್ರೇಕ್ಷಕರಿಗೆ ಸಂದೇಶಕ್ಕಿಂತ ಸ್ವಲ್ಪ ಜಾಸ್ತಿನೇ ತಲೆ ನೋವನ್ನು ನಂ ದೇಹಕ್ಕೆ ನೀಡ್ತಾವೆ.ಅಂತಾ ನಿರ್ದೇಶಕರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಮಾಡಿದಾರೆನೊ ಎನ್ನುವಂತಹ ಎರೆಡು ಅದ್ಬುತ ಜಾಹಿರಾತುಗಳು ಟಿ.ವಿ.ಯಲ್ಲಿ ಬರುತ್ತಿದೆ.ಅದು ಟೈಮ್ಸ್ ಆಫ್ ಇಂಡಿಯಾ ದ ಲೆಟ್ಸ್ ಟೀಚ್ ಇಂಡಿಯಾ ಹಾಗು ಐಡಿಯಾ ಮೊಬೈಲ್ ಜಾಹಿರಾತು.

ಈ ಎರೆಡು ಜಾಹಿರಾತುಗಳು ಶಿಕ್ಷಣದ ಜಾಗೃತಿಯ ವಿಷಯವನ್ನಾದರಿಸಿ ಮಾಡಿದ ಜಾಹಿರಾತುಗಳಾದರು ಸಹ ಎರೆಡು ಜಾಹಿರಾತುಗಳು ವಿಬಿನ್ನ ಉದ್ದೇಶವನ್ನು ಹೊಂದಿದೆ. ಆದರೆ ಸಂದೇಶ ಮುಟ್ಟಿಸುವಲ್ಲಿ ತಲೆ ನೋವು ತರಿಸೊ ಸಿನಿಮಾಗಳಿಗಿಂತ ಹೆಚ್ಚು ಪ್ರಕರ ನಿಖರವಾಗಿದೆ.
ಐಡಿಯಾ ತನ್ನ ವಿಷಯವನ್ನು ಈಗಿನ ಜಾಹಿರಾತು ಜಗತ್ತಿನ ಜನಪ್ರಿಯ ಮಾದ್ಯಮವಾದ ಹಂತ ಹಂತವಾಗಿ ಹೇಳುವ ಪದ್ದತಿಯನ್ನು ಬಳಸಿದರೆ ಟೈಮ್ಸ್ ಆಫ್ ಇಂಡಿಯಾದವರು ನಮ್ಮ ಸಿನಿಮಾಗಳಲ್ಲಿ ನೋಡುವ ಕಥೆ ಹೇಳುವ ಅಂದರೆ ಒಂದಾನೊಂದು ಕಾಲದಲ್ಲಿ ಎನ್ನುವ ಪದ್ದತಿಯಲ್ಲಿ ಆದರೆ ತುಂಬಾ ಎಳೆಯದೆ ಸಂಕ್ಷಿಪ್ತವಾಗಿ ಹೇಳಿದ್ದಾರೆ. ಇವೆರೆಡು ಜಾಹಿರಾತಲ್ಲಿ ಇರುವ ಸಾಮ್ಯತೆಗಳೆಂದರೆ ದೇಸೀಯತೆ.
ಮೊಬೈಲ್ ಎನ್ನುವುದು ಭಾರತದ ಬೃಹತ್ ಮಾರುಕಟ್ಟೆಯಲ್ಲಿ ಎಷ್ಟು ವಿಸ್ತ್ರುತ ರೂಪ ಪಡೆದಿದೆ ಹಾಗು ಅದು ಪಡೆಯುತ್ತಿರುವ ಪಡೆಯಲಿರುವ ವಿಭಿನ್ನ ಆಯಾಮಗಳ ಮುನ್ನುಡಿಯಾಗಿ ಚಿತ್ರಿತವಾಗಿದ್ದರೆ, ಭಾರತ ಸಾಕ್ಷರತೆಯಲ್ಲಿ ಸಂಪೂರ್ಣತೆ ಪಡೆಯುವಲ್ಲಿ ಸಾರ್ವಜನಿಕರ ಪಾತ್ರದ ಅನಿವಾರ್ಯ ಪ್ರಾಮುಖ್ಯತೆಯನ್ನು ಟೈ.ಆ.ಇಂ ಜಾಹಿರಾತು ತೋರಿಸುತ್ತದೆ.

ಆದರೆ..? ಈ ಜಾಹಿರಾತುಗಳು ಪ್ರೇಕ್ಷಕರಲ್ಲಿ ತುಂಬುತ್ತಿರುವ ಕ್ಲೀಷೆಗಳ ಬಗ್ಗೆ ಯೋಚನೆ ಮಾಡಬೇಕಾದ್ದ ಅನಿವಾರ್ಯತೆಯನ್ನು ಸೃಷ್ಟಿ ಮಾಡುತ್ತಿದೆ. ಬಡವರು ಉತ್ತಮ ಶಿಕ್ಷಣ ಪಡೆಯಬೇಕೆಂದರೆ ಖಾಸಗಿ ಶಾಲೆಗಳೇ ಪರಿಹಾರವೇ...? ಹಾಗಿದ್ದರೆ ಸರ್ಕಾರಿ ಶಾಲೆಗಳು ಇನ್ನೇತಕ್ಕೆ? ಸರ್ಕಾರಿ ಶಿಕ್ಷಣ ಸಂಸ್ಥೆಗಳು ಇರುವುದು ಏನಕ್ಕೆ?

ಐಡಿಯಾ ಜಾಹಿರಾತಿನಲ್ಲಿನ ಕಾಣುವ ದೇಸಿಯತೆಯು ಇಲ್ಲಿನ ಜನಜೀವನ ಪದ್ದತಿಗೆ ಕೈಗನ್ನಡಿಯಾದರೂ ಅದು ಸಕಾರಾತ್ಮಕ ರೂಪದಲ್ಲಿ ಇಲ್ಲಿನ ಜೀವನ ಪದ್ದತಿಯನ್ನು ಪೂರ್ಣವಾಗಿ ಅಲ್ಲದಿದ್ದರು ಗೇಲಿ ಮಾಡುತ್ತಿರುವಂತೆ ಕಾಣುತ್ತದೆ.ಆದ್ರೆ ಆ ಜೀವನ ಪದ್ದತಿಯೇ ನಮ್ಮ ಜೀವ ವೈವಿದ್ಯದ ಅತ್ಯುತ್ಕೃಷ್ಟ ಜೀವನ ಪದ್ದತಿ ಅಲ್ಲವೆ.

ಐಡಿಯಾ ತನ್ನ ದೃಷ್ಟಿಯನ್ನೆಲ್ಲಾ ತನ್ನ ಮಾರುಕಟ್ಟೆಯನ್ನೆಲ್ಲಾ ಹಳ್ಳಿಗಳ ಕಡೆ ಕೇಂದ್ರೀಕರಿಸಿದ್ದರೆ, ಟೈ.ಆ.ಇಂ ದ್ರುಷ್ಟಿಯೆಲ್ಲಾ ನಗರ ಜೀವಿಗಳ ಸುತ್ತಲೂ ಕೇಂದ್ರೀಕರಿಸಿದೆ. ನಗರದಲ್ಲಿನ ಒತ್ತಡದ ಜೀವನ... ಹಾಗು ಬಾಲಕಾರ್ಮಿಕರನ್ನು ಸುಶಿಕ್ಷಿತರನ್ನಾಗಿಸುವತ್ತ ದ್ರುಷ್ಟಿ ಹರಿಸಿದೆ.ಇದರ ಜಾಹಿರಾತಿನಲ್ಲಿ ನಗರದ ಒತ್ತಡಮಯ ಹಾಗು ಬಿಗುವಿನ ವಾತಾವರಣವನ್ನು ಸೂಚ್ಯವಾಗಿ, ಸರಳವಾಗಿ, ನೇರವಾಗಿ ಹೇಳುವುದರಲ್ಲಿ ಯಶಸ್ವಿಯಾಗಿದೆ.

ಈ ಎರೆಡು ಜಾಹಿರಾತಿನಲ್ಲಿ ಸಾಮ್ಯತೆ ಇರುವ ಗಮನಿಸಲೇಬೇಕಾದ ಅಂಶವೆಂದರೆ ಭಾರತ ಸಾಕ್ಷರತಾ ರಾಷ್ಟ್ರವೆನಿಸಿಕೊಳ್ಳಬೇಕೆಂದರೆ ಇಂಗ್ಲೀಷ್ ಅನಿವಾರ್ಯವೇ? ಅಥವಾ ಇಂಗ್ಲೀಷ್ ಕಲಿತರೆ ಮಾತ್ರ ಸಾಕ್ಷರತಾ ದೇಶವೆನಿಸಿಕೋಳ್ಳುತ್ತದೆಯೇ? ಒಂದು ಜಾಹಿರಾತು ಹಳ್ಳಿಗರು ಇಂಗ್ಲೀಷ್ ಕಲಿತರೆ ಸುಶಿಕ್ಷಿತರು ಎಂದು ಬಿಂಬಿಸಲು ಹೊರಟಿದ್ದರೆ... ಇನ್ನೊಂದು ಇಂಗ್ಲೀಷ್ ಬಹುಮುಖ್ಯ ಭಾಷೆ ಎಂದು ಪ್ರತಿಪಾದಿಸಲು ಹೊರಟಂತಿದೆ.
ಟೈ.ಆ.ಇಂ. ಜಾಹಿರಾತಿನಲ್ಲಿ ಇನ್ನಿತರ ಭಾಷೆಗಳನ್ನು ಬಳಸಿದೆಯಾದರೂ ಅದು ಹಿಂದಿ ತಮಿಳು ಉರ್ದು ಮಾತ್ರ.... ಇದರ ಅರ್ಥ ಭಾರತದ ಇನ್ನ್ಯಾವುದೆ ಭಾಷೆಯಲ್ಲಿ ಶಿಕ್ಷಣ ಅಪ್ರಸ್ತುತವೇ ಅಥವಾ ಆ ಭಾಷೆಯವರಲ್ಲಾ ಸುಶಿಕ್ಷಿತರೇ...

ಕಾರಣ ಭಾರತದಂತಹ ಬಹುಭಾಷಾ ,ಬಹುಸಂಸ್ಕ್ರುತ ಜೀವನ ಪದ್ದತಿಯ ಮೇಲೆ ಜಾಹೀರಾತುಗಳನ್ನು ಮಾಡುವಾಗ ತಮ್ಮ ಮೂಗಿನ ನೇರಕ್ಕೆ ಯೋಚಿಸಿ ಅದೇ ಸರಿ ಎಂದು ಹೇರುವ ಮುಂಚೆ ಯೋಚಿಸಬೇಕಾದ್ದ ಅನಿವಾರ್ಯತೆ ಇವರಿಗಿಲ್ಲವೆ.ಇದರ ಬಗ್ಗೆ ಈಗ ಯೋಚಿಸದಿದ್ದರೆ, ಹಾಕಿಯನ್ನು ತೆಗೆದು ಕ್ರಿಕೆಟ್ಟನ್ನು ರಾಷ್ಟ್ರೀಯ ಕ್ರೀಡೆಯನ್ನಾಗಿ ಮಾಡಿದಂತೆ ಮುಂದೊಮ್ಮೆ ಇಂಗ್ಲೀಷನ್ನು ರಾಷ್ಟ್ರೀಯ ಭಾಷೆಯನ್ನಾಗಿಸುವುದರಲ್ಲಿ ಯಾವುದೇ ಅನು’ಮಾನ’ಇರುವುದಿಲ್ಲ.

ಸಂದೇಶಾತ್ಮಕದ ಎಂದು ತಲೆ ನೋವಿನ ಸಿನಿಮಾ ನಿರ್ದೇಶಕರುಗಳು, ಇವರು ತಮ್ಮ ವಾಣಿಜ್ಯದ ಉದ್ದೇಶಕ್ಕೆ ಅಂತ ಮಾತ್ರ ಬಳಸಿರುವ ನಿರೂಪಾತ್ಮಕ ಅಂಶಗಳನ್ನು 'ಸಂ'ದೇಶಿ ಸಿನಿಮಾಗಳಲ್ಲಿ ಬಳಸಿದರೆ ಇನ್ನಷ್ಟು ಉತ್ತಮ ಸಿನಿಮಾಗಳು ಪ್ರೇಕ್ಷಕರಿಗೆ ಸಿಗಬಹುದೇನೊ....!