ಸೂರಪ್ನೋರ್ ಮಗ

ಸೂರಪ್ನೋರ್ ಮಗ

ಸೂರಪ್ನೋರ್ ಮಗ....

 

ಕಡೂರು ತಾಲೂಕಿನ ಒಂದು ಹೋಬಳಿ  ಯಗಟಿ....ಯಂಗಟಿ ಎಂಬ ಮಹಿಳೆಯಿಂದಾಗಿ ಯಗಟಿ ಎಂಬ ಹೆಸರು ಬಂದಿತು ಎಂದು ಪ್ರತೀತಿ. ಇಲ್ಲಿರುವ ವೀರನಾರಾಯಣ ಸ್ವಾಮಿ ದೇವಾಲಯ ಪ್ರಸಿದ್ಧವಾದುದು. ಈ ಗ್ರಾಮಕ್ಕೆ ಹೊಂದಿಕೊಂಡಂತಿರುವ "ಪುರ" ಎಂಬ ಗ್ರಾಮದಲ್ಲಿರುವ  ಮಲ್ಲಿಕಾರ್ಜುನ ದೇಗುಲ ವಿಶೇಷವಾದುದು. ಇಲ್ಲಿನ ಗಂಗೋಧ್ಭವ ಬಹು ಖ್ಯಾತಿ. ಯಗಟಿ ಯಲ್ಲಿನ ವೀರನಾರಾಯಣ ಸ್ವಾಮಿ ದೇಗುಲವನ್ನು ಕರ್ಣಾಟಭಾರತ ಕಥಾಮಂಜರಿ ಬರೆದ ಕುಮಾರವ್ಯಾಸನ ವಂಶಜರು ಸುಮಾರು 15-16 ನೇ ಶತಮಾನದಲ್ಲಿ ಸಂಭವಿಸಿದ ರಾಜಕೀಯ ಕ್ಷೋಬೆಯಲ್ಲಿ ಗದಗನ್ನು ತೊರೆದಾಗ ಯಗಟಿಯಲ್ಲಿ ನೆಲೆಸಿದರು. ತಮ್ಮ ಆರಾಧ್ಯ ದೈವ ವೀರನಾರಾಯಣನ ವಿಗ್ರಹವನ್ನು ಅಲ್ಲಿಂದಲೇ ತಂದು ದೇಗುಲ ನಿರ್ಮಿಸಿ ಪ್ರತಿಷ್ಟಾಪಿಸಿದರು.  ಮತ್ತು ಆ ವಂಶಜರು ಶಾನುಭೋಗ ವೃತ್ತಿ, ಕೃಷಿ ಮುಂತಾದ ಕೆಲಸಗಳಲ್ಲಿ ತೊಡಗಿಸಿಕೊಂಡರು. ಕುಮಾರವ್ಯಾಸ ಮಹಾಕವಿಯ ಸುಸಂಸ್ಕೃತ ನಡವಳಿಕೆ ಈ ವಂಶದ ಆಸ್ತಿ. ಪ್ರತೀ ವರ್ಷ ಕುಮಾರವ್ಯಾಸ ಜಯಂತಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ.

 

       ಇಂತಹ ವಂಶದಲ್ಲಿ ಹುಟ್ಟಿದವರು ಸೂರ್ಯನಾರಾಯಣ. ಹಿಂದೆ ಯಗಟಿ ಯ ಶಾನುಭೋಗರಾಗಿದ್ದ ಇವರು ಸುತ್ತಮುತ್ತಲೆಲ್ಲ ಸೂರಪ್ನೋರು ಎಂದೇ ಪ್ರಸಿದ್ಧಿ.  ಇವರ ಮಗ ಇಲ್ಲಿನ ಹಿರಿಯರ ಬಾಯಲ್ಲಿ "ಸೂರಪ್ನೋರ ಮಗ"  !.....ಹಳ್ಳಿಗರ ಬಾಯಲ್ಲಿ ಸೂರಪ್ಪಾರ್ ಮಗ....

 

ಅವರು ಬೇರಾರೂ ಅಲ್ಲ..."ಜಾತಿ ರಾಜಕಾರಣ  ಅಲ್ಲ-ಪ್ರೀತಿ ರಾಜಕಾರಣ" ಎಂಬ ಹೊಸ ಕಲ್ಪನೆಯನ್ನು ಕೊಟ್ಟು ಅತ್ಯಧಿಕ ಮತಗಳಿಂದ ಗೆದ್ದು ಕಡೂರು ಶಾಸಕರಾದ  ವೈ.ಎಸ್.ವಿ. ದತ್ತ...!

 

Comments

Submitted by makara Fri, 08/30/2013 - 19:13

ವೈ.ಎಸ್.ವಿ. ದತ್ತ ಅವರು ನಿಜಕ್ಕೂ ಅತ್ಯುತ್ತಮ ಚಾರಿತ್ರ‍್ಯವುಳ್ಳ ರಾಜಕಾರಣಿ. ಇದು ಅವರ ಮಾತುಗಳನ್ನು ದೂರದರ್ಶನದಲ್ಲಿ ನೋಡಿದ ಯಾರಿಗಾದರೂ ಅನುಭವಕ್ಕೆ ಬರುತ್ತದೆ. ಆಗ ನನಗೆ ಅನೇಕ ಬಾರಿ ಅನಿಸಿದ್ದು, "ರೈಟ್ ಮ್ಯಾನ್ ಇನ್ ಏ ರಾಂಗ್ ಪ್ಲೇಸ್". ಇವರೊಂದಿಗೆ ಯಗಟಿಯ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು, ಬಾಲು ಅವರೆ.
Submitted by BALU Sat, 08/31/2013 - 08:23

ಮಾನ್ಯರೇ ದತ್ತ "ರೈಟ್ ಮ್ಯಾನ್ ಇನ್ ರಾಂಗ್ ಪ್ಲೇಸ್" ಎಂಬ ನಿಮ್ಮ ಅನಿಸಿಕೆ ಸರಿಯೇ...ಆದರೆ ದತ್ತಣ್ಣ ಮಾನವೀಯತೆಯ ಪ್ರತಿರೂಪ. ದತ್ತಣ್ಣ ಈಗ ಶಾಸಕನಾಗಿರಬಹುದು. ಆದರೆ ನಾನು ಅವರು ಶಾಸಕರು ಎನ್ನುವುದಕ್ಕಿಂತ ಅವರಲ್ಲಿನ ಸಾಹಿತ್ಯ ಪ್ರೇಮಿಯನ್ನು ಇಷ್ಟ ಪಡುತ್ತೇನೆ. ಮಹಾಕವಿ ಕುವೆಂಪು ತಮ್ಮ ಆತ್ಮಕಥೆಯಲ್ಲಿ ದತ್ತ ಅವರ ಬಗ್ಗೆ ಉಲ್ಲೇಖಿಸಿದ್ದಾರೆ. ಇಂದಿನ ಕುಲುಷಿತವಾಗಿರುವ ರಾಜಕೀಯದಲ್ಲಿ ದತ್ತ ಆಶಾಕಿರಣವಾಗಿ ಕಾಣುತ್ತಾರೆ ಅಲ್ಲವೇ?