ಸೂರ್ಯನ ಪ್ರವಾಸ ಕರ್ನಾಟಕದಲ್ಲಿ...

ಸೂರ್ಯನ ಪ್ರವಾಸ ಕರ್ನಾಟಕದಲ್ಲಿ...

ಕವನ

ಬೆಳಗಾಗಿ  ಆರಂಭ  ದಿನಕರನ  ದಿನಚರಿ

ಸೂರ್ಯನು ಬಂದನು  ಮೂಡಣದ ಮೇಲೇರಿ

ಕಡಲ  ಮಧ್ಯದಿಂದ  ಮದವೇರಿ

ಹೊರಟಿದೆ   ಭುವಿಯ  ಕಡೆಗೆ  ಸವಾರಿ

ಸಪ್ತಾಶ್ವಗಳ  ರಥವೇರಿ 

 

ಕಾಣಲು  ಧರೆಯ  ಮೇಲಿನ  ಸಿರಿ

ಬಣ್ಣಿಸಲಾಗದ  ಅವಳ ಚೆಲುವಿನ  ಪರಿ

ಅಲ್ಲಲ್ಲಿ ಹರಿವ  ನದಿ ಹೊಳೆ ಹಳ್ಳ ಝರಿ

ಬೇಡಿದನು ಪ್ರವಾಸಕ್ಕೆ ಇಳೆಯ ಅನುಮತಿ ಕೋರಿ

ನಾಚಿ ನೀರಾದಳು ದುರ್ಗಾ ಪರಮೇಶ್ವರಿ

 

ಬೇಲೂರು, ಹಳೇಬೀಡಿನ  ದರ್ಪಣ  ಸುಂದರಿ  

ಅಲ್ಲಿನ  ಅದ್ಭುತ ಶಿಲ್ಪಾ ಕಲೆಯ  ಪರಿ 

ಹೇಗಿದೆ  ಎಂದು ಕೇಳಿದನು ಜಕಣಾಚಾರಿ

ನೋಡಿದನು  ಗೊಮ್ಮಟನ ಶಿಖರವೇರಿ 

ಕೊಟ್ಟನು ಚಾವುಂಡರಾಯನಿಗೆ ಶಹಾಬ್ಭಾಸ್ ಗಿರಿ

 

ಏರಿ  ಕುಳಿತನು  ಮುಳ್ಳಯ್ಯನಗಿರಿ

ಹಾಗೇ  ಸಾಗಿದನು  ಸಹ್ಯಾದ್ರಿಯ  ಸಾಲೇರಿ

ಕೊಡಚಾದ್ರಿಯ  ಕಂಡು ಆದನು ಅಚ್ಚರಿ

ಬೆರಗಾದನು ನೋಡಿ ಜೋಗ ಜಲಪಾತದ ಐಸಿರಿ

 

ಗೋಲ  ಗುಮ್ಮಟದ ಪಿಸುಮಾತಿನ  ಪರಿ

ಇದೊಂದು  ಜಗತ್ತಿನ  ಅದ್ಭುತ ಎಂದಾರ್ರಿ

ಹಂಪೆ   ಶಿಲೆಯ  ಸಪ್ತರಾಗದ ಸರಿಗಮ

 ಕೇಳಿ  ತಲೆದೂಗಿ  ಪಟ್ಟನು ಸಂಭ್ರಮ

ಸುವರ್ಣಾಕ್ಷರಗಳಲ್ಲಿ ಬರೆಯ ಬೇಕೆಂದನು ಕರ್ನಾಟಕದ ಇತಿಹಾಸವನು

 

ವಿದಾಯ  ಹೇಳಿದನು  ಭೂರಮೆಗೆ  ಶುಭಕೋರಿ

ಹಸ್ತನಾದನು  ಆಗುಂಬೆಯಲ್ಲಿ  ಜಾರಿ

 

-ಎಸ್. ನಾಗರತ್ನ  ಚಿತ್ರದುರ್ಗ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್