ಸೂರ್ಯ ಗ್ರಹಣ ಮತ್ತು ಯುಗಾದಿ ಹಬ್ಬ ತಾ|| ೧೯.೦೩.೨೦೦೭

ಸೂರ್ಯ ಗ್ರಹಣ ಮತ್ತು ಯುಗಾದಿ ಹಬ್ಬ ತಾ|| ೧೯.೦೩.೨೦೦೭

ಬರಹ

ಸೂರ್ಯ ಗ್ರಹಣ ಮತ್ತು ಯುಗಾದಿ ಹಬ್ಬ ತಾ|| ೧೯.೦೩.೨೦೦೭

ಸೂರ್ಯ ಗ್ರಹಣ ಬೆ. ೬:೦೮  ರಿಂದ  ೯:೫೫ ತನಕ

ಗ್ರಹಣ ಶಾಂತಿ ವಿಚಾರ: ಪೂರ್ವಾಭಾದ್ರ, ಉತ್ತರಾಭಾದ್ರ, ನಕ್ಷತ್ರದವರೂ,
ಕುಂಭ ಮೀನ ರಾಶಿಯವರು ಕೆಳಗೆ ಕೊಟ್ಟಿರುವ ಶ್ಲೋಕವನ್ನು ಒಂದು ಕಾಗದದ ಮೇಲೆ ಬರೆದು,
ತಮ್ಮಲ್ಲಿಟ್ಟುಕೊಂಡು, ಗ್ರಹಣ ಮೋಕ್ಷಾ ನಂತರ ದಕ್ಷಿಣೆ ಸಮೇತ ದಾನ ಮಾಡಬೇಕು.

ಯೋ ಸೌ ವಜ್ರಧರೋ ದೇವಃ ಆದಿತ್ಯಾನಂ ಪ್ರಭುರ್ಮತಃ |
ಸೂರ್ಯಗ್ರಹೋ ಪರಾಗೋತ್ಠ ಗ್ರಹಪೀಡಾಂ ವ್ಯಪೋಹತು ||೧||
ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |
ಸೂರ್ಯಗ್ರಹೋ ಪರಾಗೋತ್ಠ ಗ್ರಹಪೀಡಾಂ ವ್ಯಪೋಹತು ||೨||
ಯೋ ಸೌ ಶೂಲಧರೋ ದೇವಃ ಪಿನಾಕಿ ವೃಷವಾಹನಃ |
ಸೂರ್ಯಗ್ರಹೋ ಪರಾಗೋತ್ಠ ಗ್ರಹಪೀಡಾಂ ವ್ಯಪೋಹತು ||೩||

ಗ್ರಹಣ ಮೋಕ್ಶಾನಂತರ ಯುಗಾದಿ ಹಬ್ಬ ಆಚರಣೆ

ನೂತನ ಸಂವತ್ಸರಾರಂಭ ದಿನವಾದ ಚೈತ್ರ ಶುಕ್ಲ ಪ್ರತಿಪತ್ ದಿನ ಯುಗಾದಿ ಹಬ್ಬ ಆಚರಣೆ.
ಈ ದಿನ ಉಷಃ ಕಾಲದಲ್ಲಿ ಎದ್ದು, ನಿತ್ಯಕರ್ಮಗಳನ್ನು ಮುಗಿಸಿ, ದೇವರಮನೆ, ಮನೆಯ ಮುಖ್ಯ ದ್ವಾರಹಳನ್ನು
ರಂಗವಲ್ಯಾದಿ ತೋರಣಗಳಿಂದ ಸಿಂಗರಿಸಿ, ಅಭ್ಯಂಜನ ಸ್ನಾನ ಮಾಡಿ, ಸಂದ್ಯಾವಂದನಾದಿಗಳನ್ನು ಆಚರಿಸಿ, ಹೊಸವರ್ಷದ ಪಂಚಾಗವನ್ನು ದೇವರ ಸಮೀಪವಿಟ್ಟು, ಶ್ರೀ ಮಹಾಗಣಪತಿ ಪೂಜಾಪೂರ್ವಕ ಕುಲದೇವತಾರ್ಚನೆ ನಡೆಸಬೇಕು. ಅನಂತರ ಬೇವು-ಬೆಲ್ಲ ಸೇವಿಸಿ, ಸನ್ಮಿತ್ರರೊಡಗೂಡಿ, ಸುಜನರುಗಳು ಕೂಡಿರುವ ಸಭೆಯಲ್ಲಿ ದೈವಙ್ಞರು ಪಠಣ ಮಾಡುವ ಪಂಚಾಂಗ ಶ್ರವಣವನ್ನು ಆಚರಿಸಬೇಕು.

ಬೇವು-ಬೆಲ್ಲವನ್ನು:

   ಶತಾಯುಃ ವಜ್ರದೇಹಾಯ ಸರ್ವ ಸಂಪತ್ಕರಾಯಚ |
  ಸರ್ವಾರಿಷ್ಟವಿನಾಶಾಯ ನಿಂಬಕಂದಳ ಭಕ್ಷಣಂ||

(ಅಂದರೆ ನೂರು ವರ್ಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯು, ಸಕಲಾರಿಷ್ಟ ನಿವಾರಣೆಗಾಗಿಯು ಬೇವು ಬೆಲ್ಲ ಸೇವಿಸುತ್ತೇನೆ.) ಎಂದು ಸೇವಿಸಬೇಕು.

ಆಧಾರ: ಒಂಟಿಕೊಪ್ಪಲ್ ಮೈಸೂರು ಪಂಚಾಂಗ