ಸೃಷ್ಟಿ

ಸೃಷ್ಟಿ

ಕವನ

ಯುದ್ಧ ಭೂಮಿಯೇ   ಒಡಲು,ಮಿಕ್ಕವರಿಗದು
ರುದ್ರ ಭೂಮಿ,ನಾನು ಅವರೊಟ್ಟಿಗಿನ ಹೋರಾಟದ
ರಕ್ತ ಸಿಕ್ತ ಕುರುಹು ಮೆತ್ತಿಕೊಂಡ ರಕ್ತ ಸೃಷ್ಟಿ
ಕಾಲನ ಪರಿಧಿಯ ಮುಳ್ಳು ತಂತಿಯ ಬೇಲಿ

ಉಸಿರು ಕಟ್ಟಿಸುವ ನನ್ನವರ ಸತ್ತ ದೇಹದ ಮಲೆತ ರಕ್ತ
ಮತ್ತೆ ನನ್ನದೇ ಮಲ ಮೂತ್ರದ ಗಬ್ಬುನಾತ
ಆದರೂ ಅವಳು ಕಾಯುತ್ತಾಳೆ ಮೃದ್ವಂಗಿ ಮುತ್ತು.

 

ಬಸವರಾಜು