'ಸೆಂಟಾರ್ ಫೌಂಟೆನ್’

'ಸೆಂಟಾರ್ ಫೌಂಟೆನ್’

ಬರಹ

ಮಿಸ್ಸೂರಿರಾಜ್ಯದ, ’ಜೆಫರ್ಸನ್ ಸಿಟಿ,’ ’ಕ್ಯಾಪಿಟಲ್ ಭವನ, ವನ್ನು ಅತ್ಯದ್ಭುತವಾಗಿ ನಿರ್ಮಿಸಿದ್ದಾರೆ. ಅಮೆರಿಕ ರಾಜ್ಯದ, ಭೌಗೋಳಿಕಸಂಪತ್ತನ್ನು ಹೃದಯಂಗಮವಾಗಿ, ಕಟ್ಟಡದ ಹೊರಗೆ, ಹಾಗೂ ಒಳಗೆ, ಪ್ರದರ್ಶಿಸಿರುವುದನ್ನು ಕಣ್ಣಾರೆ ಕಂಡಾಗಲೇ ನಮಗೆ ಅದರ ಸೌಂದರ್ಯದ ಅರಿವಾಗುವುದು. ! ಓಹ್, ಅದೊಂದು ದೇವಾಲಯ, ಅರಮನೆ,.. ಇಲ್ಲ...ಇಲ್ಲ..ಪ್ರದರ್ಶನಾಲಯ.. .ಇನ್ನೂ ಏನೇನೋ ಅಂದರೂ ಅಡ್ಡಿಯಿಲ್ಲ !!

ಶಿಲ್ಪಿ, ಅಡಾಲ್ಫ್ ಅಲೆಕ್ಝಾಂಡರ್, ’ಸೆಂಟಾರ್ ಫೌಂಟೆನ್’ ನ ವಿನ್ಯಾಸಕರು. ಕ್ಯಾಪಿಟಲ್ ಭವನದ, ಹಿಂಭಾಗದಲ್ಲಿ ಈ ನೀರಿನಕಾರಂಜಿಯನ್ನು ನಿರ್ಮಿಸಿದ್ದಾರೆ. ಆಂಗ್ಲಭಾಷೆಯಲ್ಲಿ ’ ಸೆಂಟಾರ್,’ ಎಂದು ಕರೆಯಲ್ಪಡುವ, ಅರ್ಧದೇಹ ಮನುಷ್ಯ, ಇನ್ನರ್ಧ, ಕುದುರೆಯದೇಹದ ಈ ವಿಚಿತ್ರಪ್ರಾಣಿ, ಗ್ರೀಕ್ ಪುರಾಣದಲ್ಲಿ ಪ್ರಸಿದ್ಧಿಯಾಗಿದೆ. ಸೆಂಟಾರ್ ಗಳು ಭಾರಿ ದೇಹಶಕ್ತಿಯನ್ನು ಹೊಂದಿರುತ್ತವೆ. ರಾಕ್ಷಸೀಯ ನಡವಳಿಕೆ, ಇವುಗಳ ವಿಶೇಷತೆಗಳಲ್ಲೊಂದು ! ಇವುಗಳ ಶತ್ರುಗಳು, ಭಾರಿ ಸರ್ಪಗಳು ಮತ್ತು ಮತ್ತು ಭಾರೀ ಆಕಾರದ ಮೀನುಗಳು. ಅಮೆರಿಕದ ಪಶ್ಚಿಮದಿಕ್ಕಿನಲ್ಲಿ ದುರ್ಗಮ ಅರಣ್ಯಗಳಿರುವುದನ್ನೂ, ಅವುಗಳನ್ನು ಛೇದಿಸಿ ಮುಂದುವರೆಯಬೇಕಾದ ಸನ್ನದ್ಧತೆಗೆ ಇವು, ಸಾಕ್ಷೀಭೂತವಾಗಿವೆ. ಪಕ್ಕದಲ್ಲಿ ಪುಟ್ಟಮೀನುಗಳ ಬಾಯಿನಿಂದ ನೀರಿನಚಿಲುಮೆಯನ್ನು ಹೊರಹೊಮ್ಮಿಸುತ್ತಿರುವ ಪಡ್ಡೆ-ಹುಡುಗರು, ಕಡಲಿನನಂಟಿರುವವರು ! ಇದನ್ನೂ ಅವರು ಅರ್ಥೈಸಿಸಿರುವುದು, ಉತ್ತರ ಅಮೆರಿಕದ ಪಶ್ಚಿಮ ದಿಕ್ಕಿನಲ್ಲಿ ವಾಸಿಸುವ ಜನ, ಸಾಹಸಪ್ರಿಯರು, ಆಟ, ಮನೋರಂಜನೆಯ-ಕ್ರೀಡೆಗಳಲ್ಲಿ ಆಸಕ್ತರು ಎಂಬುದನ್ನು, ಮನದಟ್ಟುಮಾಡಲು !